ಅತಿಯಾದ ನಿರೀಕ್ಷೆ
ತಂದೊಡ್ಡುವುದು ಹಲವು ಪರೀಕ್ಷೆ
ನಿರೀಕ್ಷೆ ಪರೀಕ್ಷೆಗಳ ಸಮಾವೇಶದೊಳು
ಆಂತರ್ಯದ ತೀವ್ರತೆಯ ಸಮೀಕ್ಷೆ
ಆ ಮೌಲ್ಯಮಾಪನದೊಳಗೇನಿದೆ.?
ಗುರುತರವಾದ ಫಲಾಪೇಕ್ಷೆ.!-
ಕೆಲವೊಮ್ಮೆ ಅತಿಯಾದ
ಆಲೋಚನೆಯು ನಿನ್ನನ್ನು
ಎಷ್ಟು ಕುಗ್ಗಿಸುತ್ತದೆಯೋ ಅಷ್ಟೇ
ಉತ್ತುಂಗಕ್ಕೆಳೆದೊಯ್ಯುತ್ತದೆ!!-
ಇನ್ಯಾವ ಮೇಳೆ *
_______________
ಸಹನೆ ತಾಳ್ಮೆಗೂ ಮಿತಿ ಮೀರಿ ನಿಂತಾಗ
ಯಾವ ಹೃದಯವು ತಾಳಲಾರದು
ತಾಳಿದರು ತಾಳವಿಲ್ಲದೆ ಆಡುವ ಮನಗಳಿಗೆ
ಇನ್ಯಾವ ಮೇಳೆ ಜೊತೆಯಾಗಬಹುದು.-
ಅತಿಯಾದ ಕಲ್ಪನೆ ಯೋಚನೆಗೆ ಹಿತವಾದರೂ
ಮನಸಿನ ನೆಮ್ಮದಿಯ ಮಧ್ಯೆ ಅಹಿತಕರವಾಗಿದೆ..-
ಅತಿಯಾದ ನೋವನು ಹೊಸೆದು
ಒಂದಿಷ್ಟು ಹಗ್ಗವ ಮಾಡಿ ಗಿಡವ ಹುಡುಕಲು
ಹೊರಟೆ ನಾನು..
ಜೋಕಾಲಿ ಆಡಲು-
ನನ್ನ ಅತಿಯಾದ ಪ್ರೀತಿ, ಅತಿಯಾದ ಕಾಳಜಿ,
ಅತಿಯಾದ ಮಾತು ಎಲ್ಲವೂ ಆಕೆಗೆ ಕಿರಿಕಿರಿ
ಯೆಂದೆನಿಸಿತ್ತಂತೆ,,
ನಿಜಾ,, ಆದರೆ ಅತಿ ಎನ್ನುವ ಪದವೇ
ಅತಿಯಾಗಿ ನೊಯಿಸುತ್ತೆ ಅನ್ನುವದು
ಆ ಕ್ಷಣಕ್ಕೆ ನನಗೆ ತಿಳಿದಿರಲೇ ಇಲ್ಲ ನೋಡಿ!!
✍️ಶಿಲ್ಪಾ ಪಾಲ್ಕಿ💞-
ಅತಿಯಾದ ಕ್ರೋಧ ಮನುಷ್ಯತ್ವ ನುಂಗಿದರೆ
ಅತಿಯಾದ ಸಿಟ್ಟು ಪ್ರೀತಿಯನ್ನೇ ಬಲಿ ತೆಗೆದುಕೊಳ್ಳುತ್ತದೆ-
ಯಾರಲ್ಲಿನ
ನಿನ್ನ ಅತಿಯಾದ
ಆತ್ಮೀಯತೆ ಅದುವೇ
ಊಹೆಗು
ನಿಲುಕದಷ್ಟು
ನೋವುನ್ನುಣಿಸುತ್ತದೆ
ಅತಿಯಾದ
ಆತ್ಮೀಯತೆ
ಒಳಿತಲ್ಲ.,!!
😊👆-
ಸಹನೆ ತಾಳ್ಮೆ ಈವರೆಡು
ತಾಳಿಕೊಂಡು ಬಾಳುವುದರಿಂದ
ಜಗಳ ಕಾದಾಟಗಳ
ಮೌನತೆ ಕಾಣುತ್ತದೆ....
ತಾಳ್ಮೆ,ಸಹನೆಯಿಂದ
ಕಾಯುವುದರಿಂದ
ಒಂದಲ್ಲಾ ಒಂದು ದಿನ
ನೀವಂದುಕೊಂಡದ್ದು
ಸಿಕ್ಕೆಸಿಗುವುದು....
ತಾಳ್ಮೆಯ ಮೇಳದ
ಬಡಿತ ನಿಲ್ಲುವುದು
ನೀವು ಸಹನೆಯಿಂದ
ಕಾದಾಗ ಮಾತ್ರ....-
ಅತಿಯಾಗಿದೆ ನಿನ್ನಯ ಒಲವು
ಮಿತಿಮೀರಿದೆ ನನ್ನಯ ತನುವು
ಮಾಡುತಿರುವೆ ಕನಸುಗಳ ಲೂಟಿ
ಆದಾಗಿಂದಲು ಮೊದಲ ಭೇಟಿ..!!
ಹರಿಬಿಟ್ಟಿರುವೆ ಕಾಗದದ ದೋಣಿ
ಕಲೆ ಹಾಕುತಿರುವೆ ನೆನಪುಗಳ ಶ್ರೇಣಿ
ನಿದಿರೆಗೆ ಜಾರಲು ಸಣ್ಣ ಗುಡಿಸಲು
ಕನಸುಗಳ ಕಾಣಲು ನಿನ್ನದೆ ಮಡಿಲು..!!
ತುಂಟಾಟದ ಕಿರು ನಗೆಯೇ ಚಂದ
ತಂಗಾಳಿ ಸೋಕಿದರೆ ಇನ್ನು ಆನಂದ
ಹಗಲಿರುಳು ಮುಗಿಯದ ಮಾತು
ಸಿಹಿ ಜಗಳ ಬಗೆಹರಿಸುವ ಕೂತು..!!
ತುಟಿಯಂಚಿನ ನಗೆಯ ನೆಪ ಸಾಕು
ಪಕ್ಕದಲ್ಲಿ ನೀನು ಇರಲೇ ಬೇಕು
ಮೆಲ್ಲನೆ ಕರಗಳ ಸ್ಪರ್ಶವು ಆಗಲಿ
ಒಳ ಆಸೆಗಳು ಹರಿದು ಹೋಗಲಿ..!!
ಕೆನ್ನೆಯ ನಸುನಾಚಿಕೆ ಮಿತಿ ಮೀರಲಿ
ಕಣ್ಣಾಲಿಯ ಸನ್ನೆಗೆ ಅಪ್ಪುಗೆ ಆಗಿಬಿಡಲಿ
ಭಾವಗಳ ಬಂಧನಕೆ ಸಿಹಿಯಾದ ಮುತ್ತು
ಅತಿರೇಖದ ಅದರಗಳ ಕ್ಷಣದ ಗತ್ತು..!!-