ನನ್ನೊಳಗಿರುವ ದರ್ದಿನ ಧಿಮಾಕನ್ನು
ಹೇಳಬೇಕಿದೆ;
ಹಂಬಲಿಸುವುದು, ಹಿಂಬಾಲಿಸುವುದು,
ಎರಡು ಮೂರ್ಖತನವೆನಿಸಿದರೆ
ಯಾರನ್ನ ಹಿಂಬಾಲಿಸುವುದು,
ಯಾರನ್ನ ಹಂಬಲಿಸುವುದು,
ಪ್ರೇಮ(ಪ್ರೀತಿ)ವೆಂದರೆ
ಹಂಬಲಿಸುವುದಾ?
ಅಥವಾ
ಹಿಂಬಾಲಿಸುವುದಾ?-
ನಕ್ಕ ನಗುವಿಗೂ
ಕಾರಣವಿರುವುದಿಲ್ಲ
ನಿರಾಸೆ, ಹತಾಶೆ
ಬೇಸರ, ತಿರಸ್ಕಾರ
ಸಾಂಗತ್ಯದ ಫಲಗಳು;
ಅವುಗಳು ಬಹುಬೇಗ
ದುಃಖವನ್ನು ದಕ್ಕಿಸಿಕೊಳ್ಳುತ್ತವೆ;-
ಕೆಲವು ಪದಗಳು ಹೀಗೆ
ಹೇಳುತ್ತವೆ;
ಇವಳು ಶಿವಭಕ್ತೆ
ಭಕ್ತಿ, ಭಾವದಿಂದ
ಮನವ
ಅರ್ಪಿತ ಕುಲದ;
ವರ್ಷಧಾರೆ;
ಹ್ಯಾಪಿ ಬರ್ತಡೇ ಮಗಾ;-
#ಯಾಕೆ?
ಕತ್ತಲೊಳಗೆ
ಅವಳು ಬೇಕೆನ್ನುವ
ಅಮಲು, ನಂಜಿನಂತೆ,
ನನ್ನನ್ನು ಆವರಿಸಿಕೊಳ್ಳುತ್ತಿದೆ;
ಆ ನಂಜನ್ನು ಹೊರಗಟ್ಟಲು
ದಿನಾಲೂ ಸಿಗರೇಟ್ ಸೇದಿ
ಹೊರಗಟ್ಟುವ ಖಯಾಲಿ
ಖಾಲಿ ಕತ್ತಲನ್ನು ಮಾತ್ರ
ಧ್ವೇಷಿಸುತ್ತದೆ; ಯಾಕೆ?-
#ಹೂಮಳೆ
ವರ್ಣಿಸಲ್ಪಡುವ ಪದಗಳು
ಹೀಗೆ ಹೇಳುತ್ತವೆ;
ಇದು ಜಡವೀಡಿದು
ಸದಾ ನಗುವ ಮಳೆ
ಕತ್ತಲಲ್ಲೂ, ಬೆಳಕಲ್ಲೂ
ಸದಾ ಪ್ರಖರವಾಗಿ
ಜೇಡಿ ಮಳೆಯಂತೆ
ಎಡೆಬಿಡದೇ ಸುರಿವ
ಹೂಮಳೆ
ನಿನ್ನ
ಹುಟ್ಟಿದ ದಿನದ
ಶುಭಾಶಯ;-
ಅವಳೆಂದರೆ
ಕಪ್ಪು ಬಿಳುಪಿನ ಮಿಂಚಲ್ಲಿ ಮಿನುಗತ
ಬೇಡದಿರುವ ಕತ್ತಲನ್ನು ದೂರಗೊಳಿಸುತ
ಬೇಕಿರುವ ಬೆಳಕನ್ನು ಮಾತ್ರ ಕೊಡುವವಳು;-
ಹಂಬಲದ ಪ್ರೇಮವು
ಅವಳ ಸಾಮಿಪ್ಯವನ್ನು,
ಸಾನಿಧ್ಯವನ್ನು ಬಯಸುತ್ತದೆ
ಹೇಳಲಾಗದ
ಬಯಕೆಗಳನ್ನು ಅವಳು
ಅರ್ಥೈಸಿಕೊಳ್ಳಬೇಕು-
ಹುಟ್ಟು ಹಬ್ಬದ ಶುಭಾಶಯಗಳು ಮಗಾ💝💕🎈
ತುಂಬಾ ಹತ್ತಿರದ ಮುಗ್ಧ ಮನಸ್ಸಿಗೆ ವರ್ಣನೆಗಳ ಉಪಮಾನ, ಉಪಮೇಯಗಳು ಬೇಕಿಲ್ಲಾ, ತೀರಾ ಸೀದಾ ಸಾದಾ ಸೂಕ್ತ ಮನಸ್ಸಿಗೆ ಪರಿಪೂರ್ಣತೆಯ ಛಂದಸ್ಸು, ಅಲಂಕಾರಗಳು ಬೇಕಿಲ್ಲ, ಹೀಗಿರುವಾಗ ಭಾವನೆ, ಸ್ಪಂದನೆ, ಸಹನೆ, ಆತ್ಮೀಯತೆ, ಗೌವರ, ಕಾಳಜಿ ಮತ್ತು ಪ್ರೀತಿಯ ಬೇರುಗಳಿಗೆ ಮುಖವಾದಾಗ ಮತ್ಯಾವ ಬಣ್ಣನೆ, ಹೊಗಳಿಕೆಗಳು ಅನಿವಾರ್ಯವಾಗುವುದಿಲ್ಲ; ಅಂತಹ ಪ್ರಖರತೆಗೆ ಜನ್ಮದಿನದ ಶುಭಾಶಯ ಮಗಾ.-
ನಿಧಿಯೆಂಬ ನೆನಪಿನಲ್ಲಿ
ನೀ ಮುಚ್ಚಿಟ್ಟ ಪ್ರೇಮಲತೆ;
ಧಗ ಧಗನೇ ಉರಿಯುತ್ತಿದೆ!-
#ಸ್ಫೋಟ
ಒಲವಿಲ್ಲದ ಮಾತಲ್ಲಿ
ಮತಿಹೀನಗೊಳ್ಳುವ ಮನಸು
ಒಮ್ಮೆ ನಿಶ್ಯಬ್ದವಾಗಿ ಮೌನವಾದರೆ,
ಮತ್ತೊಮ್ಮೆ ಶಬ್ಧಗೈದು ಸ್ಫೋಟಗೊಳ್ಳುತ್ತದೆ-