ಕನ್ನಡದ ಕುವರಿ   (ಕನ್ನಡದ ಕುವರಿ)
599 Followers · 19 Following

"ಪ್ರತಿ" ಇವತ್ತಿಗೂ ನಾಳೆ ಇದೆ...
Joined 17 October 2019


"ಪ್ರತಿ" ಇವತ್ತಿಗೂ ನಾಳೆ ಇದೆ...
Joined 17 October 2019

ಜೀವನ್ಮುಖಿ ಸ್ನೇಹಜೀವಿಗೆ ಜನ್ಮೋತ್ಸವದ ಶುಭಾಶಯಗಳು...


ಮೊದಲ ನೋಟದಲ್ಲೇ ಅದೊಂತರಾ ದುಷ್ಮನ್ ಭಾವ..
ಅದೇನೋ ತ್ರಿಮೂರ್ತಿಯಾಗಿ ಸ್ನೇಹ ಬೆಳೆದಂತ ದಿನ..
ಆ ಸ್ನೇಹದಲ್ಲಿ ಅದ್ಯಾವ ಮೋಸ,ಕಪಟ, ಅಸೂಯೆ ಅದ್ಯಾವುದೂ ಇಲ್ಲ..
ಕೇವಲ ತಮ್ಮ ಗುರಿ ಸಾಧಿಸುವ ನಿಟ್ಟಿನಲ್ಲಿ ಪಯಣಿಸಿ
ಹೆಗಲಿಗೆ ಹೆಗಲು ಕೊಡುವ ದಿಟ್ಟ ಸ್ನೇಹ..
ಅದೇ ಅರಿಯದ್ದನ್ನು ಅರಿತಿದ್ದು ಈ ಸ್ನೇಹ ಸಿಂಚನದಲ್ಲಿ..
ಎಲ್ಲಿಯ ಅಳ್ನಾವರ್ ಎಲ್ಲಿಯ ಗೋಕಾಕ..?
ಸ್ನೇಹ ಬಿಗಿಯಾದದ್ದು ಕ.ವಿ.ವಿ ಯಲ್ಲಿ..
ಹೀಗೆ ಓದುವ ಹವ್ಯಾಸ ಇನ್ನೂ ಹುಚ್ಚಾಗಿ ಹೆಚ್ಚಾಗಿದ್ದು,
ಈ ಸ್ನೇಹದ ಅನನ್ಯತೆಯಲ್ಲಿ..
ಆ ಗ್ರಂಥಾಲಯ, ಹೊಸದು ತಿಳಿದುಕೊಳ್ಳುವ ತವಕ..
ಹೊಸದನ್ನು ಅರಿಯುವ ಮನಸ್ಥಿತಿಯ ನಮ್ಮಿಬ್ಬರಲ್ಲೂ
ಗಟ್ಟಿಯಾಗಿದ್ದು ನಮ್ಮ ಸ್ನೇಹದ ಆ ಹಂದರದಲ್ಲಿ..
ಸ್ನೇಹಕ್ಕೆ ಅರ್ಥ ದೊರೆತಿದ್ದು ಈ
(ನಮ್ಮಿ,ಪ್ರತಿ,ಶಿವು,ಜಾನ್,ಸೌಜಿ)ಸೊಜಿಗದಲ್ಲಿ...
ಆ ಸ್ನೇಹ ಉಸಿರಿನ ಕೊನೆಯವರೆಗೂ ಒಟ್ಟಾಗಿದ್ದು ಶಾಶ್ವತವಾಗಿರಲಿ...
ಅದೇ ಸ್ನೇಹ ಸಿಂಚನದಲ್ಲಿ
ನಮ್ಮ ಕನಸಿನಂತೆ GOLD MEDAL ಒಂದೇ ವೇದಿಕೆಯಲ್ಲಿ
ಹಂಚಿಕೊಂಡದ್ದು ವಿಶೇಷವೇ ಸರಿ..
ಹೀಗೇ ಸಾಧನೆಯು ಜೀವನದ ಕಿರೀಟವಾಗಲಿ..
ಸ್ನೇಹ ಶಾಶ್ವತ ನೆಲೆಸಲಿ...
ಕಷ್ಟಗಳು ನೂರಾರು ಧೈರ್ಯಗುಂದದೆ ಛಲವಾದಿಯಾಗಿರು..
ಜನ್ಮೋತ್ಸವದ ಶುಭಾಶಯಗಳು ನಮ್ಮಿ (LIBRARIAN)

-



ರಕ್ಷೆಯ ಆಚರಣೆಯಲ್ಲೊಂದು ದಿನ...

(ನನ್ನದೇ ಅನಿಸಿಕೆಯಲ್ಲಿ...)
ಸಹೋದರಿಗೆ  ಶ್ರೀರಕ್ಷೆಯಾಗಿ
ಸಹೋದರತ್ವ ಬಾಂಧವ್ಯ ಹೆಣೆಯುವ
ಅವಳ ಕನಸಿನ ಹೆಗಲಾಗಿ,
ಅವಳ ಮನಸನು ಅರ್ಥೈಸಿಕೊಳ್ಳುವ ಹಾದಿಯಲ್ಲಿ
ಅವಳ ಹೃದಯಕ್ಕೆ ಕಾವಲುಗಾರನಾಗಿ
ಅವಳಿಗಾಗಿ ತನ್ನ ಸಂತಸವ ತನಗರಿವಿಲ್ಲದಂತೆ
ತ್ಯಾಗಮಯಿಯಾಗಿ,
ಅವಳಿಗೆ  ಸಹೋದರರೇ ಪ್ರಪಂಚ..
ಆ ಪ್ರಪಂಚದ ಭಾವನೆಗಳೆಲ್ಲವೂ ತನಗೆ ಮೀಸಲಾಗಿರಿಸಬೇಕೆಂಬ ಸ್ವಾರ್ಥಿಯಾಗಿ😍
ಈ ಬದುಕಿನ ಸುಂದರ ಘಳಿಗೆಗೆ
ಮತ್ತಿನ್ಯಾವ ಸಾಕ್ಷಿ ಬೇಕು..?
ಈ ಅವಳ ಸಹೋದರರಿಗೆ
ಅವಳ್ಯಾವಾಗಲೂ ಮೀಸಲು..
ಆತನ ಕನಸೇ ಇವಳ ಜನುಮಧಾರಾಧನೆ
ಆತನ ಮಾತೇ ವೇದವಾಕ್ಯ..
ಆತನ ಒಲವೇ ಸರ್ವಸ್ವ..
ಆತನ ಒಲುಮೆಗೆ ಸರಿಸಾಟಿಯಾಗುವುದೇ.?
ಅವರಿಬ್ಬರ ಆತ್ಮನಂಬಿಕೆ, ಆತ್ಮವಿಶ್ವಾಸ, ಆತ್ಮಸ್ಥೈರ್ಯ
ಮತ್ಯಾವ ಬಂಧದಲ್ಲೂ ಹೆಣೆದಿರಲು ಅಸಾಧ್ಯ..
ಈ ಶ್ರೇಷ್ಠತೆಯ ಬಾಂಧವ್ಯವನ್ನು ಬೆಸೆಯುವ
ಕ್ಷಣವೇ ಇಂತಹದೊಂದು ದಿನದ ಹಬ್ಬ..
ಪ್ರತಿ ಏಳು-ಬೀಳುಗಳ ಜೊತೆಯಾಗಿ
ಸಾಗುವ ನಿಸ್ವಾರ್ಥ ಮನಸಿನ ಮುಗ್ಧತೆಯೇ
ಈ ಸಹೋದರರ ದಿನ...
ಆತ್ಮೀಯ ಸಹೋದರರಿಗೆ ರಕ್ಷಾ ಬಂಧನದ ಪ್ರೀತಿಯ ಶುಭಾಶಯಗಳು.

-



ಯಾವ ಗಳಿಗೆ ಯಾವ ಹೊತ್ತಿನಲ್ಲಿ
ಯಾರನ್ನೆಲ್ಲಾ ಬಿಟ್ಟು ಸಾಗುವದೋ..
ಎಲ್ಲರ ಪ್ರೀತಿಯನ್ನ ಬಿಟ್ಟು
ಭಗವಂತನ ಹಾದಿಯ ಹಿಡಿಯುವುದೋ...
ಹೇಗೋ ಸಾಗುತಿರುವ ಜೀವನ
ತತ್ ಕ್ಷಣವೇ ನಿಲ್ಲುವಾಗ...
ಅವರ ಪ್ರಾಣವೇ ತನ್ನದೆಂದು ಕುಳಿತಿರುವ
ಈ ಪ್ರಾಣದ (ಉಸಿರಿನ) ಗತಿಯೇನು?
ಸಂಗಾತಿಯ ಕಳೆದುಕೊಂಡು
ಮುಂಬರುವ ದಿನಗಳನ್ನ ಎದುರಿಸುವುದೇಗೋ...?
ಈ ತತ್ ಕ್ಷಣದ ಸುದ್ದಿಯ ಕೇಳಿ
ಹೃದಯ ನಡಗಿ ದುಃಖವ ತೀರ ಸೇರಿದೆ...
ಆ ಸಂತಸದ ಕುಟುಂಬಕ್ಕಿಗ ಭರಿಸಲಾರದ ನೋವು..
ಆ ನೋವ ಇಂಗುವ ಶಕ್ತಿ ದೇವ್ರು ಕರುಣಿಸಲಿ...
ಮಿಸ್ ಯೂ ಮ್ಯಾಮ್....

-



ಒಲವ ಜೋಳಿಗೆಯಲ್ಲಿ
ಪ್ರೀತಿಯ ಉಣಬಡಿಸುವ ಜೋಡಿಯಿದು..
ಅದೊಂದು ಗಳಿಗೆಯಲ್ಲಿ ಮನದ ಪ್ರೀತಿಯ ಬಚ್ಚಿಟ್ಟು
ಉಸಿರಾಡೋ ಕಾಲವದು...
ಆ ಪ್ರೀತಿ ಮನಸಲ್ಲೇ ಮುಸುಕಾಗಿತ್ತು..
ಪ್ರೀತಿಗಿದ್ದ ನಂಬಿಕೆಯಿಂದ
ಆ ಮನದ ಮುಸುಕು ಸರಿದು,ಪರದೆ ಸರಿಯಿತು..

ಆ ನಂತರದಲ್ಲೆಲ್ಲವೂ ಪ್ರೀತಿಯ ದಿಬ್ಬಣವೇ..
ಪ್ರೇಮದ ಸಂಭ್ರಮ ಒಲವಿನ ಸಡಗರ..
ಖುಷ್ ಖುಷಿಯಾಗಿ
ದಡವ ಸೇರುವ ತವಕ..
ನಾವಿಕನಾಗಿ ನನ್ನ ಈ ಬದುಕಿನ ಪಯಣವ ಮುನ್ನಡೆಸುತಿರುವ ಮನದ ನಾಯಕನ
ಬದುಕಲ್ಲಿ ಸಂಭ್ರಮದ ಓಕುಳಿ ಉಜ್ವಲಿಸಲಿ..
ಬದುಕಿನುದ್ದಕ್ಕೂ
ಹುಸಿ ಕೋಪ,ಸಿಟ್ಟು,ಸಣ್ಣ ಸಣ್ಣ ಆಸೆ,
ದೊಡ್ಡ ದೊಡ್ಡ ಕನಸು ಹೊತ್ತಿರುವ
ನಮ್ಮಿಬ್ಬರ ಜೀವನದಲ್ಲಿ ಡುಮ್ಮ್ಯಾ ಖುಷಿಯ ಸಡಗರವನ್ನಿಡಲಿ...
ಖುಷಿಯಲ್ಲೂ-ನೋವಲ್ಲೂ ಸದಾ ಜೊತೆಗಿರುವ ಭಾಷೆ ನನ್ನದು...
ನಿಮ್ಮ ಸಾಧನೆ ಕನಸುಗಳೆಲ್ಲವೂ ನನಸಾಗಲಿ..
ಈ ಕ್ಷಣ ಪ್ರತಿ ಪ್ರೀತಿಯ ದಿನಕ್ಕೂ ಹಂಚಿಕೆಯಾಗಲಿ...
ಜನುಮ ದಿನದ ಶುಭಾಶಯಗಳು ಸಂಗಾತಿ...💞

-



ಆ ದಿನವೊಂದಿತ್ತು....
ಸ್ವಲ್ಪ ಭಾವನೆಗಳಲ್ಲಿ ಏರುಪೇರಾದರೂ,
ತತ್ ಕ್ಷಣವೇ ಕಂಡುಹಿಡಿದು
ಹೇ ಯಾಕೇ ಹೀಗಿದಿಯಾ ಅನ್ನೋ ಕಾಲ..
ಅದೇ ಪರಿಚಯವಿಲ್ಲದ ಮುಖಗಳು ಒಂದಾಗಿದ್ದು
ಆ ಹಸಿವಿನ ಮಧ್ಯದಲ್ಲಿ...
ಹೀಗೇ ಜೊತೆಗೂಡಿ ಜೆಎಸ್ಎಸ್ ಕಾಲೇಜು ಸುತ್ತುವರೆದು...
ಕ್ಯಾಂಟೀನ್ ನಲ್ಲಿ ಏನೋ ತಿನ್ನತಾ...
ಆ ದಿನದ ವರದಿ ಒಪ್ಪಿಸೋದಂತು ತಪ್ಪದೇ ನಡಿತಿರೋದು...
ನಾವೆಲ್ಲ ಒಟ್ಟಿಗಿದ್ದ ಕ್ಷಣಗಳಿಗ
Remember This Days ಅನ್ನೋ Memories
ಅಲ್ಲಿ ನೋಡಿ ಖುಷಿಯಾಗೋ ಸಂಭ್ರಮವಷ್ಟೇ ಉಳಿದಿರುವುದು..
ಅದೆಲ್ಲಾ ಮತ್ತೆ ಸೇರಿ
ಕಾಲೇಜಿನ ಕ್ಷಣಗಳನ್ನ ಸವಿಯಲು ಅವಕಾಶ ಸಿಕ್ಕರೆ
ಬಾಚಿ ತಬ್ಬಿಕೊಳ್ಳುವ ಆಸೆಯಂತು ಮನದಲ್ಲಿದೆ....
ಮಿಸ್ ಯೂ Guy's....

-



ಬದುಕನ್ನ  ಆರಾಧಿಸಿದ ಜೀವನಗಾಥೆಯ ಜನುಮೊತ್ಸವದ ಶುಭಾಶಯಗಳು ಹುಟ್ಟುಹಬ್ಬದ ಸಂಭ್ರಮ..

ಬದುಕೆಲ್ಲಾ ತನ್ನವರಿಗಾಗಿ ಅರ್ಪಿಸಿ ತನ್ನತನವನ್ನು ಸಂಕಲ್ಪಿಸಿದವಳ ಖುಷಿಯನ್ನ ಹಾರೈಸುವ ಈ ದಿನ ಈ ಗಳಿಗೆ ಈ ಸಂಭ್ರಮ ಹೀಗೆ ಪ್ರತಿ ಕ್ಷಣವೂ ಬದುಕಿನಲ್ಲಿರಲಿ..
ಪ್ರತಿ ಕ್ಷಣವೂ ಎಲ್ಲರ ಸಂತೈಸುವ ಮೃದು ಮನಸ್ಸಿನವಳು
ತನ್ನವರ ಸುಖಕ್ಕಾಗಿ ಹಂಬಲಿಸುವ ನಿಸ್ವಾರ್ಥಿಯ ಗುಣ
ಯಾವಾಗಲೂ ಖುಷ್ ಖುಷಿಯಾಗಿರಿ...
ಸಹಾನುಭೂತಿಯ ನಗುವಿಗೆ ಜನುಮೊತ್ಸವದ ಶುಭಾಶಯಗಳು ಅಕ್ಕಾ..
ಖುಷ್ ಖುಷಿಯಾಗಿರಿ....

-



ಬದುಕಿನ ಬವಣೆಗಳಿಗೆ ಕನಸುಗಳು ಕೈಗನ್ನಡಿಯಾದಾಗ ಬದುಕು ಸಂಭ್ರಮಿಸುವುದು..

-



ಇಂದಿನ ನಾಳೆಗಳಿಗೆ ಬದುಕೆಲ್ಲಾ ಅರ್ಪಿಸಬೇಕಿದೆ; ಯಾವ ದುಃಖ ದುಮ್ಮಾನ,ನೋವು,ಆತಂಕಗಳಿಗೆ ಕಿವಿಗೊಡದೆ...

-



ಬದುಕ ಜೀವಿಸಬೇಕಿದೆ
ನನ್ನೊಲವಿನ ಆತನ ಹೃದಯಮಂದಿರದಲ್ಲಿ...

-



ಮನಸಿನ ಭಾವಗಳಿಗೆ ನಿನ್ನ ಪರಿಚಯವು ಪ್ರಕೃತಿಯಂತೆ ಅರ್ಪಿತವಾಗಿತ್ತು...

-


Fetching ಕನ್ನಡದ ಕುವರಿ Quotes