QUOTES ON #ಅಂಬಿಕಾತನಯದತ್ತ

#ಅಂಬಿಕಾತನಯದತ್ತ quotes

Trending | Latest
1 FEB 2022 AT 5:13


#ವರಕವಿ
#ಅಂಬಿಕಾತನಯದತ್ತ

--ದ.ರಾ. ಬೇಂದ್ರೆ

-


31 JAN 2020 AT 21:07

ಬೇಂದ್ರೆ ಕುರಿತು ಹೀಗೊಂದು ಕಥೆ...

ಒಂದ್ಸಲ ಬೇಂದ್ರೆ ಅವರ ಆತ್ಮೀಯ ಸ್ನೇಹಿತ ಸತ್ತು ಹೋಗಿರುತ್ತಾರೆ.
ಅವರ ಮಣ್ಣು ಮಾಡುವ ಸಂಧರ್ಭದಲ್ಲಿ ಯಾರೋ ಒಬ್ಬರು ಕಣ್ಣೀರು ಹಾಕುತ್ತಾ ಹೇಳಿದರಂತೆ
"ಹೆಂಗ್ ಹೂತಾರ್ ನೋಡ್ರಿ ಅಜ್ಜಾರ ಅವರನ್ನ" ,
ಅದಕ್ಕೆ ಬೇಂದ್ರೆ ಹೀಗ್ ಹೇಳಿದ್ರಂತೆ...
"ಅವನನ್ನ ಹೂತಿಲ್ಲೋ ಹುಚ್ಚ ಖೋಡಿ ಅವನನ್ನ ಬಿತ್ತ್ಯಾರ ಅಂತ".

-


31 JAN 2021 AT 8:41


ಅವಾಗ ಬೇಂದ್ರೆ ಅಜ್ಜಾ ಅವರು ಕವನಗಳನ್ನು ಬರೆಯುವಾಗ
ಎಷ್ಟೋ ಜನರು ಹೀಯಾಳಿಸಿ ಅಂತಿಂದ್ರಂತ -ಧನ ಕಾಯೊರು ಹಾಡೊ , ಹಾಡು ಬರದಾನ ಅಂತ ,
ಮುಂದ ಅವರಿಗೆ ಜ್ಞಾನಪೀಠ ಪ್ರಶಸ್ತಿ ಸಿಕ್ಕ ಮ್ಯಾಗ ಅವರ ಹಾಡುಗಳನ್ನು ಧನ ಕಾಯೋರು ಕೂಡ ಹಾಡುತ್ತಾರ ಅಷ್ಟೊಂದು ಪ್ರಸಿದ್ಧಿ ಅವರ ಕವನಗಳು ಅಂತ ಅದೇ ಎಷ್ಟೋ ಜನ ಅಂದ್ರಂತ ...
ಅದಕ್ಕ ಜನ ಬದಲಾಗತಾರ ವಿನಹ ಕಾವ್ಯ ಕವನ ಕಥೆಗಳು ಎಂದೂ ಬದಲಾಗೋದಿಲ್ಲ ನೋಡ್ರಿ.

-


25 OCT 2020 AT 23:06

ಬಂತಪ್ಪಾ ಎಂತಾದೀ ಕಾಲ
ಕಂಡರು ತಿವಲ್ಲದ ಇದರ ತಲಿ,
ಗಂಡೋ ಹೆಣ್ಣೋ ಅಂತ...

-


1 FEB 2022 AT 0:00

ಶಬ್ದ ಗಾರುಡಿಗ
---------------------
ಅಂಬಿಕಾತನಯದತ್ತ ಕಾವ್ಯನಾಮದಿ ವಿರಾಜಿಸಿ
ವರಕವಿ, ಶಬ್ದ ಗಾರುಡಿಗ ಬಿರುದುಗಳನು ಗಳಿಸಿ
ನಾಕುತಂತಿಯನು ಮಂಡಿಸಿ ಜ್ಞಾನಪೀಠ ಒಲಿಸಿ
ಬೇಂದ್ರೆಯವರು ಮಾದರಿ ಜಗದಲೇ ಕರೆಯಿಸಿ.

-



ಯುಗದ ಕವಿ ಜಗದ ಕವಿ
ಹೆಸರು ಹೇಳಿದೊಡನೆ ನಿಮಿರುತ್ತೆ ಕಿವಿ
ಅಂಬಿಕಾತನಯದತ್ತ ಇವರ ಕಾವ್ಯನಾಮ
ಕೇಳುತ್ತಿದ್ದರೆ ಸೊಂಪುಹತ್ತುವುದು ಕವನಗಳ ಗಮ!

ಓದುತ್ತಿದ್ದಾಗಲೇ ಹರಿಸಿದರು ಕವನಗಳ ಪ್ರಭಾತ
ಸ್ವಾತಂತ್ರ್ಯ ಸಮರದ ನರಬಲಿ ಎಬ್ಬಿಸಿದನೀತ
ಕಾಮಕಸ್ತೂರಿ ನಾದಲೀಲೆಗಳ ದಾಟಿ
ಕನ್ನಡವಲ್ಲದೆ ಸಾಕಷ್ಟು ಕೃತಿಗಳು ಮರಾಠಿ!

ಮೂಡಲ ಮನೆಯಾ ಹತ್ತಿ ಬಂದ ಬೇಂದ್ರೆ
ಜಗವೆಲ್ಲಾ ತೊಯ್ದ ನಿಮ್ಮ ಬೆಳಗು ಹೃದಯ ಸಮುದ್ರ
ಝೇಂಕರಿಸಿದ ಅರಳು ಮರಳು ನಾದಲೀಲೆಗಳ ಉನ್ಮಾದ
ಮುಗಿಲ ಮಲ್ಲಿಗೆಯ ವಿನಯವೀ ಬಾಲಬೋಧ!

ಮತ್ತೆ ಶ್ರಾವಣ ಬಂತು, ಕವಿಯ ನೆನಪನು ತಂತು
ನಾಕುತಂತಿಯ ವಿರಾಟ್ ಸ್ವರೂಪಕ್ಕೆ ಜ್ಞಾನಪೀಠವು ಬಂತು
ಇವರ ಕವಿತೆಗಳ ನಾದಮಾಧುರ್ಯ ಅಪಾರ
ಅರವಿಂದರ ಕೃತಿಯನ್ನು ಇಂಗ್ಲೀಷಿಗೆ ಬಾಷಾಂತರ!

ನಾಡಿನ ತುಂಬೆಲ್ಲಾ ಕನ್ನಡ ಕುಸುರಿಯ ಹರಡಿದವರು
ಕಾವ್ಯದ ಸಿರಿವಂತಿಕೆಯನ್ನು ಉಲ್ಬಣಿಸಿದವರು
ಸಾಹಿತ್ಯದ ಶ್ರೀಮಂತ
ನಿಮ್ಮ ಕನ್ನಡಮಯ ಸದಾ ನಮ್ಮಲ್ಲಿ ಜೀವಂತ!!

-


31 JAN 2021 AT 16:55

ಅಂತರ್ಮುಖಿ
ಭಾವಸುಖಿ
ದೇವ ನುಡಿ
ನಾಡ ಕುಡಿ
ಸರಳ ಕವಿ
ವಿರಳ ಜೀವಿ 🙏

- ವಿಜಯ್ ಸಿ.ಎಸ್

-



ಇಪ್ಪತ್ತನೇ ಶತಮಾನದ ಮಾನಸ
ಬರಹ ದುಂಬಿ
ನವೋದಯ ದಾರಿಗೆ
ನಾಯಕರಾದ ಹುಂಬಿ
ಕನ್ನಡ ಸಾಹಿತ್ಯ ಕನ್ನಡಿ
ಪುಟಪುಟಗಳ ಶಿಲ್ಪಿ
ಇವರ ಕಾವ್ಯ ಉದಯ
ಬರಹ ಯೋಗ ಅಭ್ಯುದಯ.
ಅಂಬಿಕಾತನಯ ಕನ್ನಡದ
ದತ್ತಾತ್ರೇಯ, ವರಕವಿ
ನಾಕುತಂತಿಯ ಧೀರ
ಕನ್ನಡಿಗರ ಹೃದಯ
ಮನ ವೀರ
ಕಾವ್ಯ ಗಾರುಡಿಗ,
ಮರಾಠಿಗನಾದರೂ
ಕನ್ನಡದ ಎದೆ
ಹೊತ್ತ ಕಳಸ. ಹಳೆಗನ್ನಡ ಹೊಸಗನ್ನಡದ
ಕಾವ್ಯಶ್ರೀಗೆ ನೀವೇ ಅರ್ಪಣೆ,
ಕನ್ನಡ ಕುಲಕೋಟಿಜನರು
ನಿಮಗೆ ವಂದನೆ 🙏

-


15 JAN 2020 AT 12:25

'ಸಖೀಗೀತ'ದಲಿ ಸಂಕ್ರಾಂತಿ ಬಣ್ಣನೆ..

ಕಾಲ್ಬಿದ್ದು ಕೈಹಿಡಿದು
ಮುತ್ತಿಟ್ಟು ಮುಗಿಬಿದ್ದು
ಮೈಏರಿ ಮೈಹೊಕ್ಕು ಮಾಗಿ ಬರೆ
ಮೈಮೈಯಡರುವ ಮಾಗಿಯ ಮೈಮೆಯು
ಬೆಳಗು ಮುಸುಕಿನಲ್ಲು ಒಗ್ಗುತಿರೆ

ಮಕರಸಂಕ್ರಾಂತಿಗೆ ಮೈತುಂಬ ತುಟಿತುಂಬ
ಎದೆತುಂಬ ಕುಸುರೆಳ್ಳು ಮೂಡುತಿದೆ
ನನಗೂ ನಿನಗೂ ಅಂಟಿದ ನಂಟಿನ
ಕೊನೆ ಬಲ್ಲವರಾರು ಕಾಮಾಕ್ಷಿಯೇ!

- ಅಂಬಿಕಾತನಯದತ್ತ (ಸಖೀಗೀತ)

-