ತಮ್ಮ ಗೌರವಕ್ಕೆ ಬರುವ ದಕ್ಕೆ
ಮಾನಸಿಕ ಖಿನ್ನತೆಗೆ ಒಳಪಡಿಸುವ ಸಾಧನ!
-
ಅಬಾಬಿಗಳು:
1.
ಸ್ವಾರಸ್ಯವಿಲ್ಲದ ಹಾಸ್ಯ ಮಾಡಿದರೇನು
ರಾಗ ತಾಳಗಳಿಲ್ಲದ ಹಾಡು ಹಾಡಿದರೇನು
ಮಾತೃಪಿತ್ರರ ಗೌರವಿಸದ ಮಕ್ಕಳಿದ್ದರೇನು
ಲಕ್ಕಿ!
ಅರ್ಥವೇ ಇಲ್ಲದ ಬದುಕ ಬದುಕಿದರೇನು ಫಲ?
2.
ಗಿಡನೆಟ್ಟು ಮರಗಳ ಬೆಳಸಿ
ಜೀವ ಸಂಕುಲಕ್ಕೆ ಆಧ್ಯತೆ ನೀಡಿ
ಇರುವುದೊಂದೇ ಭೂಮಿ
ಲಕ್ಕಿ!
ಮುಂದಿನ ಪೀಳಿಗೆಗೆ ಅಡಿಪಾಯವ ಹಾಕೋಣ!
-
ವಸಂತದ ನೂತನ ವರುಷ
ತರಲಿ ನಿಮ್ಮೆಲ್ಲರ ಬಾಳಲ್ಲಿ ಹರುಷ..
ಶ್ರೀವಿಶ್ವಾವಸು ಸಂವತ್ಸರ
ಇರಲಿ ನೂರಾರು ಕನಸುಗಳ ಸಡಗರ..
ಬೇವು ಬೆಲ್ಲವ ಹಂಚುತ್ತಾ
ಮಾವನ್ನು ಮೆಲ್ಲನೆ ಸವಿಯುತ್ತಾ..
ಹೊಸ ವರ್ಷವನ್ನು ಆಚರಿಸೋಣ
ಯುಗಾದಿ ಹಬ್ಬದ ಹಾರ್ಧಿಕ ಶುಭಾಶಯಗಳು
-
ಮಳೆಗೆ ನೆಂದ ಮನದಲ್ಲೀಗ
ಪ್ರೀತಿಯ ಮೊಳಕೆ ಹೊಡೆಯುತ್ತಿದೆ
ಬೇರು ಬಿಟ್ಟು ಚಿಗುರೊಡೆದು
ಹೆಮ್ಮರವಾಗಲು ಕಾಯುತ್ತಿದೆ!!
ಪ್ರೀತಿ ಮರದಲಿ
ಮಧುರತೆಯ ಹೂವು
ಮಮಕಾರಗಳ ಕಾಯಬಿಟ್ಟು
ಎಲ್ಲರಿಗೂ ಹಂಚುತ್ತಾ ಬಾಳಹೊತ್ತಿದೆ..!-
ಎಲ್ಲೆಲ್ಲಿ ನಾ ನೋಡಲಿ
ನಿನ್ನ ಛಾಯೆಯ ಗಲಿಬಿಲಿ
ಕೆಣಕಿ ಕೆದರಿದಾ ಮನದಲಿ
ಪ್ರೀತಿ ಹಕ್ಕಿಯ ಚಿಲಿಪಿಲಿ...
ದುಗುಡ ನೂರಿದ್ದರೂ ಮನದಲಿ
ನಿನ್ನ ಅಪ್ಪುಗೆಯೇ ದಿವ್ಯೌಷದ
ಅಮಲೇರಿದ ಚಡಪಡಿಕೆಗೆ
ಸಮಾಧಾನದ ಮಾತುಗಳೇ ಆನಂಧ!-