ತಾಯಿ ಭಾರತಿ ಹೆತ್ತಳು ಈ ಸಿಡಿಲಮರಿಯ
ನಭದೆತ್ತರಕೆ ಹಾರಿಸಿದ ಹಿಂದೂ ಧರ್ಮದ ಹಿರಿಮೆಯ
ಬೆಳಗಿದೆ ಭಾರತೀಯ ಪರಂಪರೆಗೆ ವಿಶೇಷದಾರತಿಯ
ಯಾರಿವನು ಯಾರಿವನು?
ಭಾರತಾಂಬೆಯ ಹೆಮ್ಮೆಯ ಪುತ್ರನಿವನು
ಪರಮಹಂಸರ ಆಧ್ಯಾತ್ಮದ ಗರಡಿಯಲ್ಲಿ ಪಳಗಿದೆ
ತಾಯ್ನಾಡಿಗಾಗಿ ಸುಖ ಭೋಗಗಳ ತ್ಯಜಿಸಿದೆ
ದೇಶದ ಉದ್ದಗಲ ಸಂಚರಿಸಿ ಖಾವಿಯ ತೊಟ್ಟೆ
ತನ್ನ ಮಾತೃಭೂಮಿಯ ಸ್ಥಿತಿಯ ಕಂಡು ಕಣ್ಣೀರಿಟ್ಟೆ
ಚಿಕಾಗೋದ ಭಾಷಣಕೆ ಮಾರುಹೋಯಿತು ಪಾಶ್ಚ್ಯಾತ್ಯ ಪಡೆ
ವಿಶ್ವವೇ ಆಶ್ಚರ್ಯದಿ ಮುಖಮಾಡಿ ನಿಂತಿತು ಭಾರತದ ಕಡೆ
ಭಾರತೀಯ ಆಧ್ಯಾತ್ಮದ ತಿರುಳನು ಜಗಕೆಲ್ಲ ತಿಳಿಸಿದೆ
ಕಾರ್ಮೋಡವ ಕರಗಿಸಿ ಬೆಳಕಂತೆ ನೀ ಹೊಮ್ಮಿದೆ
ಏಳಿ ಎದ್ದೇಳಿಯಂಬ ಸಿಂಹವಾಣಿಯ ಬೋಧಿಸಿದೆ ಸಿಂಹದಮರಿ
ಭಾರತೀಯ ಸಂಸ್ಕೃತಿಗೆ ನೀ ರಾಯಭಾರಿ
ಧರ್ಮ ಜಾತಿಗಳ ಮೀರಿ ಸಾಧನೆಗೈದ ವೀರ ಸಂತ
ಸಾಧು ಪರಂಪರೆಗೆ ನೀನಾದೆ ಮಹಾಂತ-
ಸೃಷ್ಟಿಯ ತುಂಬೆಲ್ಲ ಹಬ್ಬಿವೆ ಬಗೆ ಬಗೆಯ ರೋಗಗಳು
ಕಪಟ ಮೋಸ ಈ ರೋಗದ ಪ್ರಮುಖ ಲಕ್ಷಣಗಳು
ಭೂಮಿಯ ಮೇಲೆ ಸಿಗುವುದು ಕಷ್ಟ ಲಸಿಕೆಗಳು
ಆ ಲಸಿಕೆಗಳೇ ಪ್ರೀತಿ ಪ್ರೇಮಗಳೆಂಬ ಎರಡಕ್ಷರದ ಪದಗಳು
ಸೃಷ್ಟಿಯನ್ನು ಆವರಿಸಿವೆ ಮಾನವನನ್ನು ಹೋಲುವ ಮೃಗಗಳು
ನಾನು ನನ್ನತನದಿಂದ ಮೆರೆಯುತ್ತಿರುವನು ಜಗದೊಳು
ಸಮಯಕ್ಕೆ ತಕ್ಕಂತೆ ಬದಲಾಗಲು ಧರಿಸುವ ನೂರೆಂಟು ಮುಖವಾಡಗಳು
ಹುಡುಕಲು ಹೊರಟರೆ ಸಿಗುವವು ರಾಶಿ ರಾಶಿ ವೇಷ ಭೂಷಣಗಳು
ಮೋಸದ ಹಣಕ್ಕೆ ಬಂಡವಾಳವೇ ಬಣ್ಣ ಬಣ್ಣದ ಮಾತುಗಳು
ಅಲ್ಲಲ್ಲಿ "೩೦ ದಿನಗಳಲ್ಲಿ ವಂಚಿಸುವುದನ್ನು ಕಲಿಯಿರಿ" ಎಂಬ ಜಾಹೀರಾತುಗಳು
ಇದುವೇ ಈ ಶತಮಾನದ ಸಾಧನೆಯ ತಿರುಳು
ಎಲ್ಲವನ್ನು ನೋಡುತ ಸೃಷ್ಟಿಕರ್ತನೇ ಅವಿತು ಕುಳಿತಿರುವ ಮರೆಯೊಳು-
ಗೂಡ ತೊರೆದು ಹಕ್ಕಿ ಬಾನಿಗೆ ಹಾರಿತೆ
ರೆಕ್ಕೆ ಮುರಿದು ನನ್ನ ಒಂಟಿ ಮಾಡಿತೆ
ಭಾವವಿರದ ಸಾಲು ಈ ಹಾಡಾಯಿತೆ.!?
ಹರಿದಿದೆ ಎದೆಯಲ್ಲಿ ನೆನಪುಗಳ ಕಾಲುವೆ
ಆಡದ ಮಾತುಗಳಿಗೆ ಮೌನವೇ ಸೇತುವೆ
ನೋವು ಹೊಸದಲ್ಲ ನಿನಗೆ ಅಳಬೇಡ ಓ ಮನವೇ.!
ನನ್ನೆದೆಯ ತೀರದಲ್ಲಿ ಕಟ್ಟಿದ್ದ ನಮ್ಮೊಲುಮೆಯ ಗೂಡು
ನಿನ್ನಲಯ ಹಠಕ್ಕೆ ಬಲಿಯಾಯ್ತು ನೋಡು
ಕಾಣಿಸದೆ ಹೊಯ್ತೆ ನನ್ನೆದೆಯ ಪಾಡು
ಕರಗಿತೆ ನಿನ್ನೆದೆ ಹಸಿ ಸುಳ್ಳಿನ ಶಾಖಕ್ಕೆ
ತಲುಪಲೇ ಇಲ್ಲ ನನ್ನಯಾ ಪತ್ರ ನಿನ್ನೆದೆಯ ವಿಳಾಸಕ್ಕೆ
ಮರಳಿ ನಿನ್ನಾಗಮನದ ನಿರೀಕ್ಷೆ ಈ ಬಡಪಾಯಿ ಹೃದಯಕ್ಕೆ-
ಆನ್‌ಲೈನ್ ಜಗತ್ತು ನಿಜವಾದ ಜಗತ್ತು ಮತ್ತು ನೈಜ ಪ್ರಪಂಚವು ನಕಲಿ ಜಗತ್ತು. ಹಾಗೆಯೇ ನಕಲಿ ಜಗತ್ತು, ಜಗತ್ತು ಮುಂದುವರಿಯಲು ಅಗತ್ಯವಾದ ಜಗತ್ತು.
-
ರಾಷ್ಟ್ರಕವಿ ಓ ಉದಯರವಿ
ಕನ್ನಡಕ್ಕೊಬ್ಬನೇ ನೀ ಶತಮಾನದ ಕವಿ
ಜಗಕೆಲ್ಲ ಸಾರಿದೆ ನೀ ಕನ್ನಡದ ಕಂಪು
ನಿನ್ನ ಸಾಹಿತ್ಯ ಓದುಗನಿಗೆ ಬಲು ಇಂಪು
ಅರ್ಪಿಸಿದೆ ನೀ ಕನ್ನಡಕ್ಕೆ ಮೊದಲ ಜ್ಞಾನಪೀಠ
ತೋಡಿಸಿದೆ ಕನ್ನಡಾಂಬೆಗೆ ಹೊನ್ನ ಕಿರೀಟ
ಸಾರಿದೆ ಜಗಕೆ ವಿಶ್ವಮಾನವ ಸಂದೇಶ
ಮಾಡಿದೆ ಎಲ್ಲರಿಗೂ ಅನಿಕೇತನದ ಉಪದೇಶ
ಪದಗಳಿಂದ ತಂದೆ ನೀ ಕನ್ನಡಕ್ಕೆ ಹೊಸ ಹೊಳಪು
ಕನ್ನಡಕ್ಕಾಗಿ ನಿನ್ನ ಜೀವನ ಮುಡಿಪು
ವಿಶ್ವಮಾನವನ ಜನ್ಮದಿನದ ಸವಿನೆನಪು
ಕನ್ನಡವಿರುವವೆಗೂ ನೀ ಅಜರಾಮರ ಕುವೆಂಪು-
If Somebody Encourages Me
I'll DO WELL
If Somebody Irritates Me
I'll DO VERY WELL
If Somebody Provokes Me
I'll DO DAMN WELL-
I'm slowly learning that even if I react, it won't change anything, it won't make people suddenly love and respect me, it won't magically change their minds. Sometimes it's better to just let things be, let people go, don't fight for closure, don't ask for explanations, don't change answers and don't expect people to understand where I'm coming from. I'm slowly learning that life is better lived when I don't center it on what's happening around me and center it on what's happening inside me instead. Working on myself and my very own inner peace.
-
ಎಲ್ಲವೂ ಗೊತ್ತಿದೆ ಅನ್ನೋ ಮನಃಸ್ಥಿತಿ, ಏನೂ ಗೊತ್ತಿಲ್ಲದೆ ಇರೋ ಸ್ಥಿತಿಗೆ ಉದಾಹರಣೆ.
-
ನಾನ್ಯಾರು ಎನ್ನುವುದ ತಿಳಿಯಲು ಹೊರಟೆ?
ನಾನೊಂದು ಅಂಗಾಗಗಳ ತುಂಬಿಕೊಂಡ ಮೂಟೆ
ಅದೆಷ್ಟೋ ಆಸೆಗಳು ಸೆಳೆದವು ಬದುಕಲಿ
ಅದ್ಯಾವುದೂ ಶಾಶ್ವತವಲ್ಲ ಎಂದೆನಿಸಿತು ಮನದಲಿ..
ಈ ಲೋಕಕು ನನಗೂ ಏನು ಸಂಬಂಧ?
ಉಸಿರಿರುವತನಕ ಮಾತ್ರವೇ ನಿನ್ನ ಋಣಾನುಬಂಧ
ನಾನೇಕೆ ಬಂದೆ ಈ ಜಗಕೆ?
ಯಾರಿಟ್ಟರು ನನ್ನೊಳು ಈ ಕ್ಷಣಿಕ ಬಯಕೆ?
ಸಳೆದಿತ್ತು ನನ್ನ ಈ ಕ್ಷಣಿಕ ಮಾಯೆಯ ಸುಖ
ಸಿರಿತನವಿದ್ದರೂ ಕಾಡಿತ್ತು ಬಡತನದ ದುಃಖ
ಅದರೊಳು ಸಿಲುಕಬೇಡ ಎಂದೆಚ್ಚರಿಸಿತ್ತು ನನ್ನ
ಅನ್ವೇಷಿಸು ನೀ ನಿನ್ನೊಳಗಿನ ಗುರುವನ್ನ.
ಕೇಳಿಸಿತೇನಗೆ ಆ ಪರಮಾತ್ಮನ ಕರೆ
ಕಳಚಿದೆ ಭವ ಬಂಧನಗಳ ಹೊರೆ
ಆವರಿಸಿತ್ತು ನನಗೆ ನಾನೆಂಬ ಮಾಯೆ
ಪಯಣ ಬೆಳೆಸಿದೆ ಆತ್ಮಜ್ಞಾನೋದಯದ ಕಡೆ.-