ಸುಶೀಲಸುತ (SPB)   (✍️ಸುಪ್ರಬ AJ🙏)
333 Followers · 253 Following

read more
Joined 15 February 2019


read more
Joined 15 February 2019

""ನನ್ನೊಂದಿಗೆ ನನ್ನ ಜೀವವೊಂದೇ""
ಜೀವನ ಪಯಣಕೆ
ಎಲ್ಲರೂ ಅತಿಥಿಗಳೇ,
ಸುತ್ತ ಬೆಳಕು ಅಥವಾ ಕತ್ತಲೆ
ಆವರಿಸಿದರೇ ನನ್ನ ನೆರಳೆ
ಮಾಯವಾಗುವಾಗ,
ಇನ್ಯಾರು ಬರುವರು ನನ್ನೊಂದಿಗೆ,
"ನನ್ನೊಂದಿಗೆ ನನ್ನ ಜೀವವೊಂದೆ ಉಳಿವುದು ಕೊನೆಗೆ"

-



ಕಷ್ಟದ ಸಮಯ ಬಂದಾಗ,
ಇಷ್ಟಪಟ್ಟವರು ದೂರವಾಗುತ್ತಾರೆ.
ಎಷ್ಟೇ ಬಂದುಮಿತ್ರರು ಇದ್ದರೂ,
ನಮ್ಮನ್ನು ಇರುವ ಹಾಗೆ ಇಷ್ಟ ಪಡುವ
ಆಪ್ತರೆಲ್ಲಿ ಸಿಗುವರು...

-



ನಿದ್ರೆಲಿ ಕಾಣೋ ಕನಸುಗಳಿಗಿಂತ
ಈಡೇರದ ಆಸೆಗಳ ಹಿಂದೆ ಬಿದ್ದು,
ಮನಸು ಹಾಳಾಗಿದ್ದೆ ಹೆಚ್ಚು...

-



ಪ್ರಯತ್ನವಿಲ್ಲದೆ ಫಲವಿಲ್ಲ,
ಫಲ ಸಿಗಲು ಯೋಗವಿರಬೇಕು,
ಯೋಗ ಸಿದ್ದಿಸಲು ಉತ್ತಮ ಕರ್ಮವಿರಬೇಕು,
ಕರ್ಮದ ಆಯ್ಕೆ ನಮ್ಮ ನಡತೆಯು ಧರ್ಮವಾಗಿರಬೇಕು...
"ಇಲ್ಲದಿದ್ದರೆ ಶೂನ್ಯ ಫಲ"

-



ನೋವಿಗೆ ಕಣ್ಣಂಚಲ್ಲಿ
ಸುರಿದ ಕಣ್ಣಿರಿಗಿಂತ
ತುಟಿಯಂಚಲ್ಲಿ ಮೂಡಿದ
ಹುಸಿನಗುವೇ ಹೆಚ್ಚು...

-



ನಮಗೆ ವಿಶೇಷ ಎಂದೆನಿಸಿರುವ
ವ್ಯಕ್ತಿಗಳಿಗೆ ನಾವು ವಿಶೇಷ ಎನಿಸದಿದ್ದಾಗ,
""ನಮ್ಮನ್ನು ವಿಶೇಷಚೇತನರು ಎಂದೆನ್ನಬಹುದು""

-



ಸಿಗದಿರುವ ಅವಳೊಲವು, ಬರಿ ನಗುವಿಗೆ
ನಲುಗುತ ಬಲವು ಅಸುನಿಗುವ ಹೊಸಪರಿಯೇ ಸೋಲು..

-



ಬಯಸುತಿದೆ ಮನಸು,
ಕನಸಲ್ಲೂ ಕನವರಿಸುತ,
ಗಮನಿಸದೆ ಹೋದೆ
ನಾನಿರುವದನ್ನೆ ಮರೆತು,
ಚುಚ್ಚಿದಂತಾಗುತಿದೆ ಎದೆಗೆ
ಬಿಚ್ಚಿ ಹೇಳಲು ಇನ್ನೆನಿಲ್ಲ ಮಾತು,
ನಿನ್ನಚ್ಛೆಯಂತೆ ಇರು
ಸದಾ ನಗುತ ನಲಿಯುತ...

-



ಇನ್ನೊಬ್ಬರ ಉನ್ನತಿಯನ್ನ ಸಹಿಸದೇ,
ಅವರನ್ನು ಶಪಿಸುವ ಹೀನ ಮನಸಿನ ಕೆಟ್ಟ ಭಾವವೇ
"ಕೆಡಕು".

-



ದುರುಪಯೋಗವಾಗುವ
ಒಳ್ಳೆತನಕ್ಕಿಂತ,
ಉಪಯೋಗವಾಗುವಂತಹ
ಕೆಟ್ಟತನವೇ ಉತ್ತಮ.

-


Fetching ಸುಶೀಲಸುತ (SPB) Quotes