ಚಳಿಗಾಲದ ಈ ವಿರಹಕ್ಕೆ,
ನಿನ್ನಗಲಿಕೆಯ ನೊವು ಉರುವಲಾದರೆ,
ನಿನ್ನೊಲವಿನ ನೆನಪು ಅಗ್ಗಿಷ್ಟಿಕೆ.
-
ಆಕಾಶದೆತ್ತರಕ್ಕೆ... ಮೋಡಗಳ ಮೇಲೆ...
ದಿಗಂತದಾಚೆಗೆ...!! ಅಲ್ಲೊಂದು ಲೋಕ ಉಂಟಂತಲ್ಲಾ...!!
ತಿಳಿಹಾಲ ಸಮುದ್ರ...! ಸಕ್ಕರೆಯಂಥಾ ಜನ..! ಸಿಹಿ ಜೇನಿನಂಥಾ ಮನಸ್ಸುಗಳು...! ದ್ವೇಷ ಮತ್ಸರ ಕೇಡುಗಳಿರದೆ, ಸದಾ ಹಿತವನ್ನೇ ಬೀಸುವ ಗಾಳಿ..!!
ಇಲ್ಲಿನಂಥಲ್ಲಾ... ಪ್ರೀತಿ ಕೊಟ್ಟಷ್ಟೂ ನಮ್ಮ ಖಜಾನೆಯೇ ಹೆಚ್ಚಾಗುವಯದಂತೆ ಅಲ್ಲಿ....!!!-
ಶಾಸ್ತ್ರಿಗಳ ಕಂಗಳಿಗೆ ನಾನು ನೋಡಲು ಕುರೂಪಿಯಾಗಿದರಿಂದ ತಣ್ಗದಿರನೊಡವೆ ಮಾಡಿದರು. ಅವರ ಭಾಗಕೆ ನಾನು ಪಾಪಿಯಾಗಿದ್ದರಿಂದ ಗಂಗೆಯನ್ನು ತಲೆಯಲ್ಲಿಟ್ಟು ಶುದ್ಧ ಮಾಡಿದರು! ಅಸ್ಪೃಶ್ಯನಾಗಿದ್ದರಿಂದ ಹಣೆಗಣ್ಣಿನ ಬೆಂಕಿಯಿಂದ ಸುಟ್ಟರು. ರೌದ್ರವಾಗಿ ನಾನು ಕಾಣಬೇಕೆಂದು ಹಾವುಗಳ ಸುತ್ತಿದರು ಎಂದೆಲ್ಲಾ ಹೇಳಿ,
ಚಂದ್ರನಿಲ್ಲದೆ, ಗಂಗೆ
ಇಲ್ಲದೆಯೆ, ಹೆಣೆಗಣ್ಣು ಹಾವುಗಳು ಇಲ್ಲದೆಯೆ,
ಜನಿವಾರ ಬೂದಿಗಳು ಇಲ್ಲದೆಯೆ, ಶಿವಗುಡಿಗೆ
ಸೇರಿಸರು ಶಿವನಾದ ಎನ್ನ. ಅದರಿಂದ
ನಿಜವಾದ ಶಿವನು, ಜಲಗಾರ ಶಿವನು,
ಶಿವ ಗುಡಿಯ ಪೀಠದಲಿ ಎಂದೆಂದಿಗೂ ಇಲ್ಲ!
-
ಅವಳೊಮ್ಮೆ ಸಂಜೆಗೆ ಹೊರಬಂದಿದ್ದಷ್ಟೇ.... ನೋಡು ಚಂದ್ರನ ಮೊಗವೂ ಕೂಡ ಕೆಂಪೇರಿದೆ..!!
-
ನನ್ನ ಬದುಕಿಗೆ ಕೇವಲ ಪಾಠವಾಗಿದ್ದ ನೀನು ಬೇರೊಬ್ಬರ ಬಾಳಿನ ಪುಸ್ತಕವೆಂದು ತಿಳಿಯದಾದೆ...!!
-
ಮನೆಮನೆಯಲಿ ದೀಪ ಉರಿಸಿ ಹೊತ್ತುಹೊತ್ತಿಗೆ ಅನ್ನ ಉಣಿಸಿ
ತಂದೆ ಮಗುವ ತಬ್ಬಿದಾಕೆ ನಿನಗೆ ಬೇರೆ ಹೆಸರು ಬೇಕೇ
ಸ್ತ್ರೀ ಎಂದರೆ ಅಷ್ಟೇ ಸಾಕೆ || ೩ ||
ಆಕಾಶದ ನೀಲಿಯಲ್ಲಿ ಚಂದ್ರ ತಾರೆ ತೊಟ್ಟಿಲಲ್ಲಿ
ಬೆಳಕನಿಟ್ಟು ತೂಗಿದಾಕೆ ನಿನಗೆ ಬೇರೆ ಹೆಸರು ಬೇಕೇ
ಸ್ತ್ರೀ ಎಂದರೆ ಅಷ್ಟೇ ಸಾಕೆ || ಪ ||
- ಜಿ. ಎಸ್. ಶಿವರುದ್ರಪ್ಪ
-
'ಸಖೀಗೀತ'ದಲಿ ಸಂಕ್ರಾಂತಿ ಬಣ್ಣನೆ..
ಕಾಲ್ಬಿದ್ದು ಕೈಹಿಡಿದು
ಮುತ್ತಿಟ್ಟು ಮುಗಿಬಿದ್ದು
ಮೈಏರಿ ಮೈಹೊಕ್ಕು ಮಾಗಿ ಬರೆ
ಮೈಮೈಯಡರುವ ಮಾಗಿಯ ಮೈಮೆಯು
ಬೆಳಗು ಮುಸುಕಿನಲ್ಲು ಒಗ್ಗುತಿರೆ
ಮಕರಸಂಕ್ರಾಂತಿಗೆ ಮೈತುಂಬ ತುಟಿತುಂಬ
ಎದೆತುಂಬ ಕುಸುರೆಳ್ಳು ಮೂಡುತಿದೆ
ನನಗೂ ನಿನಗೂ ಅಂಟಿದ ನಂಟಿನ
ಕೊನೆ ಬಲ್ಲವರಾರು ಕಾಮಾಕ್ಷಿಯೇ!
- ಅಂಬಿಕಾತನಯದತ್ತ (ಸಖೀಗೀತ)-
'ಎರಡು ನಕ್ಷತ್ರಗಳು' ಒಬ್ರನ್ನ ಅಭಿಮಾನಿಗಳು 'ದೇವ್ರು' ಅಂತ ಕರೆದ್ರು... ಮತ್ತೊಬ್ರು ಅಭಿಮಾನಿಗಳನ್ನೇ 'ನನ್ನದೇವರು' ಅಂದ್ರು...
-