ತಾಳ್ಮೆ ಮತ್ತು ನೀರಿಕ್ಷೆ
ಜಗತ್ತಿನ ಪ್ರಬಲ ಅಸ್ತ್ರಗಳು
ಈ ಅಸ್ತ್ರಗಳಿಗೆ
ದೇವರು ಕೂಡ ಒಲಿದರೆ
ಒಲಿದಾನು!!!
- ವಿಜಯ್ ಸಿ.ಎಸ್-
ಅವಳು
ಒಂಥರ
ಅಫೀಮು
ಇದ್ದ ಹಾಗೆ
ಕಡಿಮೆಯಾದರೆ
ಮನಸ್ಸಿಗೆ ಗೊಂದಲ
ಹೆಚ್ಚಾದರೆ
ಆರೋಗ್ಯಕ್ಕೆ ಹಾನಿಕಾರಕ !!!
- ವಿಜಯ್ ಸಿ.ಎಸ್
-
ಪೂರ್ಣ ವಿರಾಮ
ಇಡುವ ಈ ಪ್ರಾಣಕೆ,
ಅಲ್ಪ ವಿರಾಮ ಇರುವ
ಆಸೆಗಳೇ ಆಧಿಕ!!!
- ವಿಜಯ್ ಸಿ.ಎಸ್-
ಶಿವ
ಆದಿ ಅಂತ್ಯವಿಲ್ಲದ
ಲಿಂಗ ರೂಪಿಯಾದ ರಾತ್ರಿ !!!
ಶಿವ
108 ಜನ್ಮಗಳ ಕಾಯ್ದು
ಪಾರ್ವತಿಯನ್ನು
ವಿವಾಹವಾದ ರಾತ್ರಿ!!!
ಶಿವ
ಇಡೀ ಸೃಷ್ಟಿಯ ಸಂರಕ್ಷಣೆಗಾಗಿ
ಹಾಲಾಹಲ ಕುಡಿದ ರಾತ್ರಿಯೇ
ಮಹಾ ಶಿವರಾತ್ರಿ!!!
- ವಿಜಯ್ ಸಿ.ಎಸ್
-
ಪ್ರೀತಿಯ ಅಂತಕ್ಷರಿ
ಬರೆದವಳ ಬಾಳಲ್ಲಿ
ಕೊನೆಗೆ
ಅನುರಾಗದ ಅಕ್ಷರಮಾಲೆ
ಮರೆಯಾದವು
ರಾಧೇ ರಾಧೇ!!!
- ವಿಜಯ್ ಸಿ.ಎಸ್-
ಸಿಹಿ ಸುಳ್ಳು ಹೇಳೊಂದು
ಎನಮೇಲೆ
ಒಲವಾಗಿದೆ ಎಂದು
ಕನಸ್ಸಲಾದರು
ನಿಟ್ಟುಸಿರು ಬಿಡುವೆ
ನೀ ನನ್ನವಳೆಂದು!!!
- ವಿಜಯ್ ಸಿ.ಎಸ್
-
ವಿಶ್ವದ
ಸರ್ವಶ್ರೇಷ್ಠ
ಪ್ರೀತಿಗಳಲ್ಲಿ
ನಿಮ್ಮದೊಂದು !
ಅಲ್ಲ ಅಲ್ಲ
ನಿಮ್ಮದೊಂದೆ ❤❤❤
- ವಿಜಯ್ ಸಿ.ಎಸ್
-
ಅವನಿಗೆ
ಇನ್ನೇನು ಬೇಕು,
ಅವಳ
ತುಟಿ ಅಂಚಲ್ಲಿ
ಕಿರುನಗೆ
ಒಂದೇ ಸಾಕು ❤
- ವಿಜಯ್ ಸಿ.ಎಸ್-
There is no such thing
as Fatigue
When you
Travel With GOD....
- Vijay CS
-