QUOTES ON #YQ_KANNADA_QUOTES

#yq_kannada_quotes quotes

Trending | Latest
1 JAN 2020 AT 23:36

ಹೊಂಬೆಳಕಲ್ಲಿ
ಹೊಳೆಯುವ
ಹಿಮಕರನ
ಹೊಳಪು ನನ್ನವಳು..!!

-


26 NOV 2019 AT 13:06

ಮನಸಾಗಿದೆ ನಿನ್ಮೇಲೆ..
ವರಿಸು ಬಾ ಒಮ್ಮೆಲೇ..

-



ಅಲೆಮಾರಿಯ ನಿದ್ದೆ ಗೆಡಿಸಿ
ಅಲೆದಾಟವನ್ನು ನಿಲ್ಲಿಸಿ...
ಅಮಾಯಕನನ್ನಾಗಿ ಮಾಡಿ
ಅನುಮತಿ ಕೇಳದೆ
ಅಂಗಳದಲ್ಲಿ ಚುಕ್ಕಿ ಇಟ್ಟು
ಅಗಣಿತ ಒಲವ ನೀಡಿ
ಅನುರಾಗವ ಬೆಸೆದು
ಅಲಂಕರಿಸಿರುವೆ..
ಅದರುತಿರುವ
ಅದರಗಳ ಎಸಳಿಗೆ
ಅಮೃತವ ಉಣಿಸಿ
ಅಧಿಕಾರ ಹಿಡಿದೆ..

-


28 NOV 2019 AT 15:04

ನನ್ನ ಊಹೆಗೂ ಮೀರಿದ ಅದೆಷ್ಟೊ
ನಾಟಕೀಯ ಪಾತ್ರಗಳು ಅಡಗಿದ್ದವು
ಅವನಂತರಾಳದಿ

-


25 NOV 2019 AT 20:52

ಇನ್ನೇನ್ ಕೆಲ್ಸ ಎಲ್ಲಾ ಸೆಟ್ಟ್ ಆದ್ಮೇಲೆ.
ಕಲ್ಯಾಣ ಮಂಟಪ Book ಮಾಡ್ಲ ಈವಾಗ್ಲೇ.?

-


16 JAN 2022 AT 18:11

ಭೂಮಿ ಮೇಲೆ ಒಳ್ಳೆಯವರಿಗಿಂತ ಕೆಟ್ಟವರಿಗೆ ಕಾಲ ಹೆಚ್ಚೆಂದು ಈ ಸಮಾಜ ಪ್ರತಿ ಬಾರಿ ನುಡಿಯಿತು,ಹಾಗೆಯೇ ‌ಬದುಕಿನಲ್ಲಿಯೂ ಕೂಡಿಸುವವರಿಗಿಂತ ತಂದಿಡುವವರಿಗೆ ಒಳ್ಳೆಯವರೆಂಬ ಬಿರುದು ಸಿಕ್ಕಿತು.

-


1 JUN 2021 AT 23:07

ಬದುಕಿನ ಬಂಡಿಯಲ್ಲಿ
ಸಾಗುತ್ತಿದೆ ನಿಲ್ಲದ ಪಯಣ
ಎಲ್ಲಿಗೆಂದು ಅರಿವಿಲ್ಲದೆ
ಯೋಚಿಸಿದೆ ಅನುಕ್ಷಣ||

ಬವಣೆಯ ಬೆಂಕಿಯಲಿ
ಹರಿಸುತ್ತಿದೆ ನಿತ್ಯ ಕಂಬನಿ
ಬರಿದಾದ ನೆಲದಲಿ
ಸುರಿಯುತ್ತಿದೆ ಮಳೆಹನಿ||

ನೋವಲ್ಲು ಸದಾ ನಗುತ
ಬಾಳುವುದೆ ಸುಂದರ ಜೀವನ
ಕಷ್ಟದಲ್ಲಿ ಮುನ್ನೆಡೆದರೆ
ಧೈರ್ಯವೆ ನಮಗೆ ಸಾಧನ||

ಜೀವನ ಅರ್ಥೈಸದೆ ನಡೆದವ
ಬದುಕಲಿ ಸೋತವ
ಅತಿಯಾಸೆಗಳ ಬದಿಗೊತ್ತಿ
ಜೀವಿಸಿದವ ನಿಜವಾಗಿ ಗೆದ್ದವ||

ಅರಿಯುವರು ಯಾರು
ಈ ಬದುಕಿನ ಮರ್ಮವ
ಅರಿತು ನಿರ್ವಹಿಸಬೇಕಿದೆ
ನಮ್ಮ ಪಾಲಿನ ಕರ್ಮವ||
✍️_ಶೃತಿ ಶೈವ

-


28 NOV 2019 AT 13:37

ನಿನ್ನ
ಹಾರೈಕೆಯಲ್ಲಿದೆ
ಸೋಲಲು
ನಗುವ
ಆ ಛಲ..
ನೀ
ಜೋತೆಗಿರುವೆಯೆಂಬ
ಭಾಷೆಯನೀಡು
ಅಷ್ಟೆ ಸಾಕು..
ಬಿರುಗಾಳಿಯಲ್ಲು
ಕೈ ಹಿಡಿದು
ಜೋತೆನಡೆವೆ ನಿನ್ನ.

-



ನಿನ್ನೊಲವ ಕಡಲಲ್ಲಿ ಬೆಳೆದ ಬಲಿಷ್ಠ ಮೀನು ನಾನು
ಕೋಪದಲ್ಲಿ ಬಲೇಹಾಕಿ ನನ್ನ ಬಲಿಕೊಡದಿರು ನೀನು
😂

-



ಪಿಸುಗುಡುತ್ತಿದೆ ಗಾಳಿ
ಪ್ರೀತಿಯ ಒಲವ ಮಾತು ಕೇಳಿ
ಮರು ಮಾತನು ಕೇಳಿ ಪಿಸುಗುಟ್ಟಿದೇ ಗಾಳಿ
ಯಾರೋ ಬಂದರು ಮೊದಲು ಇಲ್ಲಿಂದ ಎದ್ದೇಳಿ

-