ಪುಟ್ಟ ಹೃದಯ ಶಿವು   (ಪುಟ್ಟ ಹೃದಯ ಶಿವು)
608 Followers · 367 Following

read more
Joined 29 October 2018


read more
Joined 29 October 2018

ನಮ್ಮ ಜೀವನದಲ್ಲಿ ತುಂಬಾ ಜನ ಬರ್ತಾರೆ
ಪರಿಚಯ ಆಗ್ತಾರೆ
ಅವರು ನಮ್ಮ ಜೊತೆ ಕೊನೆವರೆಗೂ ಇರ್ತಾರೆ
ಅನ್ಕೊಂಡು ನಾವು ಅವರನ್ನ ತುಂಬಾ ಹಚ್ಕೊಂಡ ಬಿಡ್ತೀವಿ
ಆದ್ರೆ ಒಂದ್ ದಿನ ಹೇಳ್ದೆ ಕೇಳ್ದೆ ಅರ್ಧಕ್ಕೆ ಬಿಟ್ಟು ಹೋಗ್ಬಿಡ್ತಾರೆ
ಅವಾಗ ಅವರ ಇಲ್ದೆ ಬದುಕೋಕೆ ಕಷ್ಟ ಆಗಬಹುದು
ಅದ್ಕೆ ಜೀವನದಲ್ಲಿ ಮೊದ್ಲೇ ಒಂಟಿಯಾಗಿ ಬದುಕೋದನ್ನ ಅಭ್ಯಾಸ ಮಾಡ್ಕೋಬೇಕು

-



ಈ ಕಣ್ಣಲ್ಲಿ ಎಷ್ಟು
ದೂಳು ತುಂಬಿದಿಯೊ
ಎಷ್ಟು ಸ್ವಚ್ಚ ಮಾಡಿದರು
ಕಣ್ಣೀರೇ ನಿಲ್ಲುತ್ತಿಲ್ಲ
ಎಲ್ಲ ನಿನ್ನ ನೆನಪಿನ ಪ್ರಭಾವ.

-



ಹಣ ಜೊತೆ ಇದ್ದರೆ, ಹೆಣವೂ ಮಾತಾಡುತ್ತೆ
ಹಣ ಇಲ್ಲ ಅಂದ್ರೆ, ಬದ್ಕಿರೋ ಜನನೂ ಮೂಸೋದಿಲ್ಲ.

-



ವಿಶ್ವಾಸದಲ್ಲಿ ವಿಷವಿದೆ ಎಂದು ತಿಳಿದವನಿಗೆ
ಯಾರ ಸಹವಾಸವು ಬೇಡ ಎಣಿಸುವುದು

-



ಚಿಂತೆ ಮಾಡುತ್ತಾ ಜೀವನ ನೆಡೆಸಿದರೆ
ಚಿತೆ ನಮ್ಮನ್ನು ಕೈಬೀಸಿ ಕರೆಯುತ್ತದೆ

-



ಹೃದಯದ ಅರಮನೆಯಲ್ಲಿ
ಪುಟ್ಟದೊಂದು ಕೋಣೆ
ಆ ಕೋಣೆಯೊಳಗೆ ನೀನೆ ಇರುವೇ ಓ ಜಾಣೆ

-



ಅರಿವಿಗೇ ಬಾರದಂತೆ ಪ್ರೀತಿ ಮೂಡಿತು ಅಂದು
ನೆನಪುಗಳೇ ಮನೆ ಮಾಡಿದೆ ಹೃದಯದಲ್ಲಿ ಇಂದು

-



ಮಾಡುವ ಕೆಲಸದಲ್ಲಿ
ವಿಘ್ನಗಳು ಕೆಲವು
ಸಾಧಿಸುವ ಛಲ ಇರಲಿ
ನಿನ್ನಲ್ಲಿ ಹಲವು

-



ಹೊತ್ತು ಹೋಗಿದ್ದೆ ತಿಳಿಯಲಿಲ್ಲ
ಅವಳು ಮುತ್ತು ನೀಡುವ ಆ ಘಳಿಗೆಯಲಿ

-



ದಾರಿ ತಪ್ಪಿದ ಹೃದಯ
ಹೊಸ ಪರಿಚಯದೊಂದಿಗೆ
ಮತ್ತೆ ಜೊತೆಯಾಗ ಬಯಸಿದೆ
ದೂರುವ ಮನಸಿಲ್ಲ
ಜೊತೆಯಾಗಲು ಮೊದಲಿನ
ಪ್ರೀತಿಯು ಉಳಿದಿಲ್ಲ

-


Fetching ಪುಟ್ಟ ಹೃದಯ ಶಿವು Quotes