ಒಂದು ನಗುವಿನ ಹಿಂದೆ ನೂರಾರು ಭಾವನೆಗಳು..
ಹೇಳಲಾಗದ ಸಾವಿರ ನೋವುಗಳು..-
ನನಗೇಕೆ ಈ ರೀತಿಯ ಮೋಹ ನಿನ್ನೆಡೆಗೆ..
ನನಗೆ ಗೊತ್ತಿಲ್ಲದೆ ನನ್ನ ಹಾದಿ ತಿರುಗುತಿದೆ ನಿನ್ನೆಡೆಗೆ..-
.....ನನ್ನವನು....
ಬರಿದಾದ ನನ್ನ ಮನಕೆ
ಒಲುಮೆಯ ಚಿಲುಮೆ ಅವನು..
ಬರಡಾದ ನನ್ನ ಬದುಕಿಗೆ
ಸ್ಫೂರ್ತಿಯ ಸೆಲೆ ಅವನು..-
ನೀನು ನನ್ನವನೆಂಬ ಪದಗಳ ಜೊತೆಗೆ
ಸಾವಿರ ಪ್ರೀತಿಯ ಭಾವಗಳ ಬೆಸುಗೆ
ನಿನ್ನ ಬಾಹುಬಂಧನದ ಪ್ರೀತಿಯಲಿ
ನನ್ನನ್ನೇ ಮರೆತು ಕರಗಿ ಬಿಡುವೆ
ನಿನ್ನೊಲುಮೆಯನ್ನು ಬಯಸುವೆ ಪ್ರತಿಕ್ಷಣ
ನಿನ್ನವಳಾಗೇ ಇರುವೆ ಅನುಕ್ಷಣ.-
ಮನಸ್ಸು ಎಂತಹ ಮಾಯೆಯೆಂದರೆ...
ನಾವು ಹೂತಿಟ್ಟ ಎಷ್ಟೋ ನೆನಪುಗಳನ್ನು
ಕೆದಕಿ ತೆಗೆಯುತ್ತದೆ.
-
ಕಣ್ಣ ಹನಿಯನ್ನು ತಡೆಯುವಲ್ಲಿ
ಕಣ್ಣುಗಳು ವಿಫಲವಾಗಿರಬಹುದು..
ಹೃದಯದ ಭಾವನೆಗಳನ್ನು ತಡೆಯುವಲ್ಲಿ
ಮನಸ್ಸು ಸಫಲವಾಗಿರುವುದು..-
ಸೂರ್ಯ ಚಂದ್ರರಿಗೆ ಗ್ರಹಣ ತಪ್ಪಿದ್ದಲ್ಲ..
ಇನ್ನು ಮನುಷ್ಯನಿಗೆ ಕಷ್ಟಗಳು ತಪ್ಪುವವೇ???.-
ಇದ್ದಾಗ ಗಳಿಸುವನು ಸಾಕಷ್ಟು..
ಕರೆ ಬಂದಾಗ ಹೊರಡುವನು ಎಲ್ಲಾ ಬಿಟ್ಟು..
ಇದ್ದಾಗ ನೆಮ್ಮದಿಯಿಲ್ಲ ಆಗ..
ಇರುವನು ನೆಮ್ಮದಿಯಿಂದೀಗ..
ಎಷ್ಟೆಲ್ಲಾ ಪರದಾಟ ಪರಿಶ್ರಮ..
ಮಣ್ಣೊಳಗೆ ಸಿಗುವುದು ವಿರಾಮ..
ಇಷ್ಟೇ ಜೀವನ...
ಜೀವ....ಯಾನ..-