ಪಟಾಕಿ   (ಕಾವ್ಯ ಸಾಮಾನಿ(ಮಲಾರ ಬೀಡು))
467 Followers · 96 Following

ಸಾವಧಾನದಿಂದಿರು ಮನವೇ..💥🌹
Joined 15 May 2020


ಸಾವಧಾನದಿಂದಿರು ಮನವೇ..💥🌹
Joined 15 May 2020
25 MAR AT 23:40

ಕಾವ್ಯಳ ಕಾವ್ಯದ ಮಾತು
•••••••••••••••••••••••••
ಕಟುವಾಗಿ ಮಾತಾನಾಡುವವರನ್ನಾದರೂ ನಂಬಿ ನೀ ಗೆಲ್ಲಬಹುದು ಆದರೆ ಹಿತವಾಗಿ ಚೆನ್ನಾಗಿದ್ದು ನಾಟಕವಾಡುವವರನ್ನು ನೀ ಗುರುತಿಸದಿದ್ದರೆ ನಿನ್ನಂತ ಮೂರ್ಖ ಇನ್ನೊಬ್ಬರಿಲ್ಲ ಎನ್ನುವುದು ನಿತ್ಯ ಜೀವನದ ಸತ್ಯ .

-


6 NOV 2024 AT 23:16

ಕಾವ್ಯಳ ಕಾವ್ಯದ ಮಾತು
•••••••••••••••••••••••••
ಮಾತಾನಾಡಲು ಬರುತ್ತದೆ ಎಂದು ಅರ್ಥವಿಲ್ಲದೆ ಮಾತಾಡುವವರು ಹಲವರು
ಅರ್ಥವಿಲ್ಲದ ಮಾತುಗಳನ್ನು ಆಲಿಸುವುದಕ್ಕಿಂತ ಕಿವುಡರಾಗಿ, ಮೂಗರಾಗಿ ಮೌನದಿಂದಿರುವರು ಕೆಲವರು !
ನಂಬಿಕೆ ಇಲ್ಲದ ವ್ಯಕ್ತಿಗಳತ್ತಿರ ವ್ಯವಹರಿಸುವುದಕ್ಕಿಂತ ಸಮಯಕ್ಕೆ ಕಾಯುವುದು ಉತ್ತಮ
ಇಂದಿನ ದಿನ ನಮ್ಮದಲ್ಲದಿದ್ದರು ನಾಳೆಯ ದಿನಗಳು ನಮ್ಮದಾಗಬಹುದೆನ್ನುವುದು ಆತ್ಮವಿಶ್ವಾಸದ ಸಂಯಮ !!

-


8 MAY 2024 AT 11:15

ಕಾವ್ಯಳ ಕಾವ್ಯದ ಮಾತು
••••••••••••••••••••••••••
ಬದುಕೆಂಬ ಬಂಡಿಯಲ್ಲಿ ಪ್ರತಿದಿನವು ಹೊಸತನದ ಹುಡುಕಾಟ
ಸಮಸ್ಯೆಗಳ ಜೊತೆ ಜೊತೆಯಲ್ಲಿ ಪರಿಹಾರದ ಸಾಂತ್ವನ !
ಪ್ರತಿಯೊಬ್ಬರಲ್ಲೂ ಅದೆಷ್ಟೋ ‌ ಹೇಳಲಾಗದ ಸಂಕಟ
ಕೇಳುವ ಕಿವಿಗಳಿಗೆ‌ ದಿನ ಗುಣುಗುವ ಹೊಸ ರಾಗ !!

-


24 MAR 2024 AT 23:24

ಕೆಲವೊಂದು ಸತ್ಯಗಳು ನಮಗೆ ಅರ್ಥವಾದಂತೆ ಬದುಕುವುದಕ್ಕಿಂತ....!
ಕೆಲವೊಮ್ಮೆ ಸುಳ್ಳುಗಳು ತಿಳಿದೆ ಇಲ್ಲವೆಂದು ನಟಿಸುವುದು ಉತ್ತಮವೆಂದೆನಿಸುತ್ತದೆ...!!

-


20 FEB 2024 AT 23:09

ಕಾವ್ಯಳ ಕಾವ್ಯದ ಮಾತು
••••••••••••••••••••••••••
ಅತಿಯಾದ ಪ್ರಾಮಾಣಿಕತೆ ದುಃಖಕ್ಕೆ ಆಹ್ವಾನ
ಪ್ರತಿಫಲಾಪೇಕ್ಷೆ ಪಡದಿರುವುದೇ ಜೀವನಕ್ಕೆ ಸಾಂತ್ವನ !
ಪ್ರತಿಕ್ಷಣವು ನಮ್ಮನ್ನು ನಾವು ತಿದ್ದಿಕೊಳ್ಳುವುದೇ ಉತ್ತಮ
ನೇರನುಡಿಯವರಾದರೆ ಮೌನಕ್ಕೆ ಜಾರುವುದು ಅತ್ಯುತ್ತಮ !!

-


7 JAN 2024 AT 16:01

ಕಾವ್ಯಳ ಕಾವ್ಯದ ಮಾತು
•••••••••••••••••••••••••
ಅರ್ಥವಿಲ್ಲದ ಬದುಕಿಗೊಂದು ಹೊಸ ನೀತಿ ಪಾಠ ಬೇಕಾಗಿದೆ
ಕೇಳುಗರಿಲ್ಲದ ಅರಮನೆಯಲ್ಲಿ ‌ಕಿವುಡುತನ ರಾರಾಜಿಸಿದೆ !
ಅಂತ್ಯವಿರುವ ಈ ಜೀವನಕ್ಕೆ ಆಸೆಗಳ ಬೇಲಿ ಅಡ್ಡವಾಗಿದೆ
ಕೋಪವೆಂಬ ತಾಪಕ್ಕೆ ತಾಳ್ಮೆಯೆಂಬ ನೀರು ಬೀಳಬೇಕಿದೆ !!

-


1 JAN 2024 AT 20:38

ಕಾವ್ಯಳ ಕಾವ್ಯದ ಮಾತು
•••••••••••••••••••••••••••
ಕಹಿ ನೆನಪುಗಳು ವರುಷ ಕಳೆದಂತೆ ಮಾಯಾವಾಗಲಿ
ಹೊಸ ಹುರುಪು, ಭರವಸೆಯೊಂದಿಗೆ‌ ಬದುಕು ಮುಂದೆ ಸಾಗಲಿ !!

-


30 DEC 2023 AT 8:48

ಒಳ್ಳೆಯ ಸಮಯ ಬರಲಿ ಎಂದು ಕಾಯುವ ಬದಲು
ಪ್ರತಿ ದಿನವು ನಮ್ಮ ದಿನವೆಂದು ಬದುಕುವುದು ಉತ್ತಮ !!

-


29 DEC 2023 AT 8:35

ಕಾವ್ಯಳ ಕಾವ್ಯದ ಮಾತು
••••••••••••••••••••••••
ಮುಖದಲ್ಲಿ ಮಾಸದ ನಗುವಿರಬೇಕು
ಮನದಲ್ಲಿ ನೆಮ್ಮದಿ ಆವರಿಸಿರಬೇಕು !
ಚಿಂತೆ‌ ಇಲ್ಲದೆ ಜೀವನ ಸಾಗುತಿರಬೇಕು
ಚಿಕ್ಕ-ಪುಟ್ಟ ಖುಷಿಯನ್ನು ಆನಂದಿಸುವ ಮನಸ್ಸಿರಬೇಕು !!

-


26 DEC 2023 AT 13:28

ನಮ್ಮ ನಡೆಯು ಹಿಡಿತದಲ್ಲಿರುವುದು
ಸಮಸ್ಯೆಗಳು ಕಡಿಮೆಯಾಗುವುದು
ಜಗದಲ್ಲಿ ಬದುಕಲು ಸುಲಭವಾಗುವುದು
ತಪ್ಪುಗಳಿಗೆ ಕಡಿವಾಣ ಬೀಳುವುದು

-


Fetching ಪಟಾಕಿ Quotes