ಹೊಂಗಿರಣದ ಹಸಿರುಸಿರಿ ಹೊಸ್ತಿಲಲ್ಲಿ
ಹೊಂಗನಸೊಂದು ಹೊಳೆಯುತ ಹೊರಚಿಮ್ಮಿದೆ
ಹೊಂಬಾಳಿಗೆ ಹೊಂಬಣ್ಣಗಳ ಹೊಸತನದ
ಹೊದಿಕೆಯನ್ನೊತ್ತು ಹರ್ಷದಿಂದ ಹೃದಯದೂರಿಗೆ-
ಈ ಬಾಳ ಪಯಣ
ನಿತ್ಯವೂ ಸೂರ್ಯನ ಚೆಲುವಿನ ಹೊಂಗಿರಣ
ಅಲ್ಲಲ್ಲಿ ನೋವು ನಲಿವುಗಳ ನಿಲ್ದಾಣ
ಕೆಲವೊಮ್ಮೆ ವ್ಯರ್ಥ ಕಾಲಹರಣ
ಎಲ್ಲದಕೂ ಬಿಡುವಿಲ್ಲದ ಕಾರಣ
ಚಿಂತೆಯೇ ಎಲ್ಲರ ಹಣೆಯ ತೋರಣ
ಅರಿವಾಗದ ಮೌನದ ಹೂರಣ
ಅನಿರೀಕ್ಷಿತ ಮಾತುಗಳ ವರುಣ
ಸಕಲ ಭಾವಗಳೇ ಆಭರಣ
ಸಾಗುತಲಿರಲಿ ಬದುಕೆಂಬ ಕಲೆಯ ಬಂಡಿಯ ಚಲನ-
ಹಚ್ಚ
ಹಸಿರಿನ
ಹಂದರದೊಳಗೆ
ಹೊಂಗನಸುಗಳ
ಹೊತ್ತು
ಹೊನ್ನಿನ
ಹೊಂಬಣ್ಣದ
ಹೊಂಗಿರಣ
ಹುಡುಕುತ್ತ
ಹೊರಟಿತು
ಹುಲುಸಾದ
ಹುಲ್ಲು
ಹಾಸಿನ
ಹಸಿರೊಳಗೆ.
_ಶೃತಿ ಶೈವ
-
ಸೂರ್ಯದೇವನಿಗೆ ಸದಾ
ಅದೆಷ್ಟು ಕಾಳಜಿಯೋ
ವಸುಂಧರೆಯ ಮೇಲೆ,
ಉದಯಿಸುವ ವೇಳೆ ಹೊಂಗಿರಣ
ನಿದ್ದೆಯಿಂದೇಳಲೆಂದು,
ಮಧ್ಯಾಹ್ನಕ್ಕೆ ಸುಡು ಬಿಸಿಲು
ಬೆವರಿಳಿಸಿ ಕಾಯಕವಾಗಲೆಂದು,
ಸಾಯಂಕಾಲಕ್ಕೆ ಮತ್ತೆ ತಂಪು ಕೆಂಪು
ಸಾಕಿನ್ನು ಚಟುವಟಿಕೆಯೆಂದು,
ರಾತ್ರಿಯಲ್ಲಿ ಕತ್ತಲಿಗೂ ಕಾರಣನಾಗಿ
ನಿದಿರೆಯಲ್ಲಿ ವಿಶ್ರಮಿಸಲೆಂದು.-
ರವಿಯ ಹೊಂಗಿರಣಗಳಿಗೆ
ಮೈಯೊಡ್ಡುವ ತವಕದಲಿ
ಬಾಗಿಲ ತೆರೆದೆ..
ಹೊಂಗಿರಣಗಳ ಬದಲಿಗೆ
ಕಾರ್ಮೊಡವೇ ಒಳ ನುಸುಳಿ
ಕತ್ತಲೆಯೆಡೆಗೆ ನೂಕಿತು..!!-
ಅಲರಿನಂದದ ಭಾವಸ್ಫುರಣ,
ಸುಮಘಮದಿ ತುಂಬಿತು ಹೃದಯಸಂಚಿ!
ಹೃದಯ ತಾಕಿದ್ದು ನಿನ್ನೊಲವಿನ ಬಿಲ್ಲು!-
ನಿಶೆಯ ನಶೆಯಲ್ಲಿ
ಮಲಗಿದ ಭೂದೇವಿಯನ್ನು
ಹೊ೦ಗಿರಣಗಳ
ಮೃದು ಹಸ್ತದಿ೦ದ
ಎಚ್ಚರಿಸುತ್ತಿರುವನು
ದಿನಕರ..!-
ನೀನೇ ಅರಿಯದ ಅದ್ಭುತ ಶಕ್ತಿಯೊಂದು ನಿನ್ನೊಳಗಿನ ಒಡಲೊಳಗೆ ಅವಿತು ಕೂತಿದೆ
ದಾರಿ ಕಾಣದೆ ಕಗ್ಗತ್ತಲಲ್ಲಿ ಕವಿದು ಹೋಗಿದೆ
ಒಮ್ಮೆ ಆ ಅಪರೂಪದ ಶಕ್ತಿಗೆ ಬೆಳಕನ್ನು ಪರಿಚಯಿಸು
ಅದು ನಿನ್ನನ್ನು ಪ್ರಪಂಚಕ್ಕೆ ಪರಿಚಯಿಸುತ್ತದೆ
ಸಾಧನೆಯ ಶಿಖರದ ತುತ್ತ ತುದಿಗೆ ನಿನ್ನನ್ನು ಕೊಂಡೊಯ್ದು ನಿಲ್ಲಿಸುತ್ತದೆ
-