ಇಂದು ದೊಡ್ಡಬಂಡೆಯಂತೆ ಕಾಣಿಸುವ ಕಲ್ಲು
ನಾಳೆ ಚಿಕ್ಕದೆನಿಸಬಹುದು
ಇಂದು ಅಸಮಾನ್ಯವೆನಿಸುವ ಸಮಸ್ಯೆಗಳು
ನಾಳೆ ಸಾಮಾನ್ಯವೆನಿಸಬಹುದು
ಇಂದು ಕಾಡುತಿರುವ ಕಷ್ಟಗಳಿಂದ ಹರಿಸುವ ಕಣ್ಣೀರು
ನಾಳೆ ಪನ್ನೀರ ಹೊಳೆಯಾಗಬಹುದು
ಎಲ್ಲವೂ ನೋಡುವ ನೋಟದಲ್ಲಿದೆ
ಎಲ್ಲದಕ್ಕೂ ಪರಿಹಾರ ಮುಂದಿನ ದಿನಗಳಲ್ಲಿದೆ
ನಿಧಾನವಾದರೂ ನಿಧಾನಿಸಿ ನೋಡಿದಾಗ ಮಾತ್ರ ನಿಂದನೆಗಳನ್ನೂ ನಿರೂಪಿಸಿಕೊಳ್ಳುವ ನಿರ್ಣಾಯಕ ದಿನ ಬಂದೇ ಬರುತ್ತದೆ
ಕಷ್ಟಗಳು ಬರುವುದು ನಿನ್ನೊಳಗಿನ ಕೆಟ್ಟ ಕಲೆಗಳನ್ನು ಕೊನೆಗಾಣಿಸುವುದಕ್ಕಾಗಿಯೇ ಹೊರತು
ನಿನ್ನಲ್ಲಿಯೇ ಕಪ್ಪು ಕಲೆಗಳಾಗಿ ಉಳಿದುಕೊಳ್ಳುವುದಕ್ಕಲ್ಲ
ಕಷ್ಟಗಳೆಂದಿಗೂ ಕ್ಷಣಿಕ
ಕ್ಷಣಿಕ ಕಷ್ಟಗಳಿಗೆ ದುಡಿಕಿನ ನಿರ್ಧಾರ ಸಲ್ಲದು
ನಿಮ್ಮ ಪ್ರಯತ್ನಗಳೆಲ್ಲ ಮುಗಿದಾದ ಮೇಲೆ
ನಿಮ್ಮ ಫಲಸಿಗದ ಪ್ರಯತ್ನಗಳನ್ನು ಒಂದು ಬಾರಿ ಸಮಯದ ಪಾದದಡಿ ಸಮರ್ಪಿಸಿ
ಇಂದು ನಿಮ್ಮ ಕೈ ಬಿಟ್ಟ ಪ್ರಯತ್ನಗಳು ಸರಿಯಾದ ಸಮಯ ಬಂದಾಗ, ನಿಮ್ಮ ಕೈ ಹಿಡಿಯಲು ಸಹಾಯ ಹಸ್ತವನ್ನು ಚಾಚುವುದನ್ನು ನಿಲ್ಲಿಸಲು ಸ್ವತಃ ನಿಮ್ಮಿಂದಲೇ ಸಾಧ್ಯವಾಗದು
ಕಾಲಾಯೇ ತಸ್ಮೈ ನಮಃ
-
ಕರುನಾಡಲ್ಲಿ ಬೆಳೆದು
ಕಾವೇರಿ ನೀರ ಕುಡಿದು
ಕನ್ನಡಾಂಬೆಯ ಆಶೀರ್ವಾದ ಪಡೆದು
ಕರುನಾಡ ನೆಲದಲ್... read more
ಶತ್ರುಗಿಂತಲೂ ಈ ಹಾಳಾದ ಮನಸ್ಸಿನಲ್ಲಿ ಮೂಡೊ ಅರ್ಥವಿಲ್ಲದ ಆಲೋಚನೆಗಳೆ
ಅತಿ ಹೆಚ್ಚು ಬಾದಿಸುತ್ತದೆ
-
ಮಾನವೀಯತೆಯ ಮರೆತವ ಎಂದಿಗೂ ಮನುಷ್ಯನಾಗಲಾರ
ಸೋಲಿಗೆ ಶರಣಾದವ ಎಂದಿಗೂ ಗೆಲ್ಲಲಾರ
ದುಡ್ಡಿನ ಋಣದಲ್ಲಿ ಬಿದ್ದವ ಎಂದಿಗೂ ಸ್ವತಂತ್ರನಾಗಲಾರ-
ಮನದಾಳದ ಮಧುರಗೀತೆ ನೀವು
ಅನುಬಂಧದ ಅದ್ವಿತೀಯ ಅನುಭವ ನೀವು
ಪವಿತ್ರ ಪ್ರೀತಿಯ ಪಂಚಭಕ್ಷ ನೀವು
ಸ್ವಚ್ಚಂದ ಸ್ನೇಹದ ಸದೃಶ್ಯ ಸ್ವರೂಪ ನೀವು
ನಾ ಬರೆಯೋ ಪ್ರತಿ ಬರಹದಲ್ಲೂ ಪ್ರಜ್ವಲಿಸೋ ಪದಪುಂಜ ನೀವು
ನಾ ನುಡಿಯೋ ಪ್ರತಿ ನುಡಿಯಲ್ಲೂ ಪ್ರತಿಧ್ವನಿಸೋ ಪರಿಭಾಷೆ ನೀವು
ದೇವಾಲಯದ ದೈವಗಳನ್ನೂ ಮೀರಿದ ಜ್ಞಾನಾಲಯದ ದೇವರುಗಳಿಗೆ
ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು-
ಅತಿಯಾಗಿ ಒಳ್ಳೆಯವರಾಗಬೇಡಿ
ಇಲ್ಲಿ ಒಳ್ಳೆಯತನಕ್ಕೆ ಒಪ್ಪತ್ತಿನ ಗಂಜಿ ಕೂಡ ಸಿಗಲ್ಲ
ಅತಿಯಾಗಿ ಯಾರನ್ನು ನಂಬಬೇಡಿ
ಇಲ್ಲಿ ದುಡ್ಡಿಗಿರೋ ದೊಡ್ಡಸ್ತಿಕೆ ನಂಬಿಕೆ ಅನ್ನೋ ಅಸ್ತಿತ್ವಕ್ಕಿಲ್ಲ-
ನಿಮ್ಮ ಮೌನದ ಹಿಂದೆ ಅಡಗಿರುವ
ಮಾತುಗಳನ್ನೂ
ಅರ್ಥಮಾಡಿಕೊಳ್ಳುವಂತಹ ವ್ಯಕ್ತಿ ನಿಮ್ಮ ಬದುಕಿನಲ್ಲಿದ್ದರೆ ಅಂಥವರನ್ನು ಎಂದಿಗೂ ಕಳೆದುಕೊಳ್ಳಬೇಡಿ-
ಸಮಯ ನಮ್ಮನ್ನು ಕಾಯಿಸಿದರೆ
ಚರಿತ್ರೆಯ ಪುಟಗಳಲ್ಲಿ ನಮ್ಮ ಹೆಸರು ಶಾಶ್ವತವಾಗಿ
ಉಳಿಯುವಂತಹ ಅದ್ಭುತಗಳು ಜರಗಬಹುದು
ಅದರೆ ಅದೇ ನಾವು ಸಮಯವನ್ನು ಕಾಯಿಸಿದರೆ
ಈ ಭೂಮಿ ಮೇಲೆ ನಮ್ಮ ಜನುಮಕ್ಕೆ ಮೂರು ಕಾಸಿನ ಬೆಲೆ ಕೂಡ
ಸಿಗದಂತ ಸನ್ನಿವೇಶಗಳು ಸೃಷ್ಟಿಯಾಗಬಹುದು
-
ಇಟ್ಟ ಹೆಜ್ಜೆಯನ್ನು ಹಿಂದಿಡಬಾರದು
ಕೈಲಾಗದೆಂದು ಬಿಟ್ಟುಕೊಡುವ ಯೋಚನೆ ಮೊದಲೆ ಮಾಡಬಾರದು
ಪರಿಸ್ಥಿತಿಯು ಎಷ್ಟೇ ಕಠಿಣವಾಗಿರಲಿ
ಗುರಿ ಮುಟ್ಟೋ ಹಾದಿಯಲಿ ಅದೆಷ್ಟೇ ಮುಳ್ಳುಗಳಿರಲಿ
ಸಾಗುತಿರು ಮನವೆ ನೀ ಮುಂದಮುಂದಕೆ ಸಾಗುತಿರು
ಇಂದು ಸೋಲಾಗಹುದು
ಆದರೆ ಬರುವ ನಾಳೆಗಳಲಿ ಖಂಡಿತ ನಿನಗೆ ಜಯವಿರುವುದು
-
ಹಾರಿಹೋದ ಪ್ರಾಣಪಕ್ಷಿಯಂತೆ
ಬಿರುಕು ಬಿಟ್ಟ ಓಣಿ
ಮತ್ತೆ ಮೊದಲಿನಂತೆ ಸರಿಪಡಿಸಲಾಗದ ಸಂಸಾರದ ಕನ್ನಡಿಯಂತೆ
-
ನಿನ್ನ ನೆನಪೆ ದಿನವೆಲ್ಲ
ಆ ನಿನ್ನ ಬಿಂಬವ ಎಲ್ಲೆಲ್ಲೂ ಕಂಡೆನಲ್ಲ
ನಿನಗಾಗಿಯೇ ಈ ಮನ ಮಿಡಿದಿದೆ
ನೀನಿಲ್ಲದೆ ಈ ಹೃದಯ ಬಡಿತವನ್ನೇ ಮರೆತಂತಿದೆ
-