ಗೂಡಲ್ಲಿ ಬೇಡ ಹರಾಡ್ಕೊಂಡು ಇರಲಿ ಅಂತ ನಾನೆ ರೋಡಲ್ಲಿ
ಬಿಟ್ಟಿದೀನಿ jogi ji 😊
FeMale bird (ಹಕ್ಕಿ) *
Hello ಏನ್ ಹಾಗೆ ತಿನ್ನೋಥರ ನೋಡ್ತಿದಿರಾ ,,,?
ನಾನು ನಿಮ್ಮನ್ನ ಹಾಗೆ ನೋಡಿದ್ರೆ ನಿಮಗೆ ಏನ್
ಅನ್ನಿಸ್ತಿತ್ತು ಹೇಳಿ,
Male bird (ಹಕ್ಕಿ) *
ಹ್ಮ್ಮ್ ಏನ್ ಇ ಹುಡುಗಿ ನಂಗಿಂತ
ಫಾಸ್ಟ್ ಇದಾಳೆ ಅಂತ ಅನ್ನಿಸ್ತಿತು,
FeMale bird *
ಅಯ್ಯೋ ಕರ್ಮ ನನ್
ಹಾಗಲ್ಲ ಕೇಳಿದ್ದು ನಾನು ನಿಮ್ಮನ್ನ ಹಾಗೆ ನೋಡಿದ್ರೆ ನಿಮಗೆ
ಎಷ್ಟು ಮುಜುಗರ ಆಗ್ತಿತು ಅಂದೆ.
Male bird *
ಮುಜುಗರನ ಹಾಗಂದ್ರೆ ಏನು ಹೇಗಿರುತ್ತೆ,
ಎಲ್ಲಿ ಸಿಗುತ್ತೆ ಮುಜುಗರ ಅನ್ನೋದು, ಬನ್ನಿ ನನಗು ಒಂದು kg. ಕೊಡ್ಸಿ. 😊
ರೀ ಹಾಗೆ ನಮ್ಮಮ್ಮ ನಿನಗೆ ಮಾನ ಮರ್ಯಾದೆ ಇಲ್ಲ ಅಂತ ಯಾವಾಗ್ಲೂ ಬೈತಾರೆ
Plees ಅದನ್ನು ಒಂದು kg..
ಕೊಡ್ಸಿ 😊🙊😉-
ನಿತ್ಯವೂ ಹೊಸತನ ಹೊತ್ತು ಬರುವ ನೇಸರ, ತಮ್ಮ ಕಾಯಕವನ್ನು ಚಾಚೂ ತಪ್ಪದೆ ಪಾಲಿಸುವ ಹಕ್ಕಿಗಳ ಹಿಂಡು, ಚಿಗುರೆಲೆಯ ಮೇಲಿನ ಇಬ್ಬನಿ, ಹೂವಾಗಿ ಸೆಳೆಯುವ ಮೊಗ್ಗುಗಳು, ಎಲ್ಲವೂ ನಿತ್ಯನೂತನವೇ ಏಕೆಂದರೆ ಯಾರನ್ನೂ ಆಕರ್ಷಿಸುವ ಹೊಣೆಗಾರಿಕೆ ಅವಕ್ಕಿಲ್ಲ. ಸುಮ್ಮನೆ ತಮ್ಮ ಕಾರ್ಯಗಳಲ್ಲಿ ನಿರತವಷ್ಟೇ...
-
ಹೊಸ ಜೀವನ ಶುರು ಮಾಡಿಕೊಂಡವು
ಅದು ಎಷ್ಟು ಹೊಸ ಕನಸುಗಳ ಕಟ್ಟಿ ಕೊಂಡವು
ನೂರಾರು ಆಸೆ ಆಕಾಂಕ್ಷೆಗಳ ಹಂಚಿಕೊಂಡವು
ಹೀಗೊಂದು ಬದುಕು ಬೇಕು ಎಂದುಕೊಂಡವು
ಹೇಗೆ ಬದುಕಬೇಕೆಂದು ಎದ್ದು ನಿಂತವು..
(ಮುದ್ದಾದ ಆ ಎರಡು ಹಕ್ಕಿಗಳಿಗೆ ಶುಭವಾಗಲಿ)
-
"ಲೆಕ್ಕಕ್ಕೆ ಸಿಗದ ಲಂಗೋಟಿ ಹಕ್ಕಿಗಳು"
ನಕ್ಷತ್ರ ತೇರನೇರಿ
ತಮವ ಕಳೆಯ ಕಾಂತಿಯಾಗ ಬಂದವನೇ...
ಕೌಪೀನ ಸಿಗದ ಕಂದಗಳಿಗೀಗ
ಕತ್ತಲಾಂಬರದಿಂದ ನುಸುಳಿ
ಬೆಳಗಾನ ಅಲೆ ಅಲೆದುಳಿದ ಶಕ್ತಿ ರಕ್ಷಕನಾಗ ಬಾ...!!
ಕೊರೆವ ನಡುಕವ ಸೈರಿಸೆ ಅಧವ ಬಂಧು.
ಅಧವೆ ಆಹಾರ, ದೀಪ ತೈಲ,
ನೀ ಆರೆ ಆಕೆ ಒಂಟಿಯಲ್ಲ.
ಇಲ್ಲಿವೆ ಕಾಣ ಲೆಕ್ಕಕ್ಕೆ ಸಿಗದ ಲಂಗೋಟಿ ಹಕ್ಕಿಗಳು
ಸೂರ ನೀರು ನೆಲವ ಪುಟಿದು ಮೇಲೇಳುವ
ರೀತಿ ಕಾಣದ ಹಸಿದ ಹಸುಗೂಸುಗಳು
ಒಂಟಿತನದಲ್ಲೂ ಏಕಾಂತ ಕಾಣದ
ಕಡಲ ಜೋರು ಅಲೆಗಳು.
ಏಲ್ಲೋ ಕೂಡಿಟ್ಟ ಗಂಟು ಬ್ಯಾನ್ ಆಗಿದೆ
ಆದರೂ ಕಾಸು ಬದಲಾಗಿದೆ
ಕೂಸಿನೊಟ್ಟೆ ಸೇರದೆ
ಖಜಾನೆ ಮತ್ತೆ ಭರ್ತಿಯಾಗಿದೆ
ವಾಸ್ತವ ತಿಳಿಯ ತಿಳಿನೀರು ಗುಳ್ಳೆಗಳು
ಯಾರದೋ ಗಟ್ಟಿಧನಿಗೆ ನಡುಕ ಹುಟ್ಟುವುದಿಲ್ಲಿ.
ರೈತನೆದೆ ಸೋರಿ ನಾಲ್ಕು ಕಾಳು ಕೂಳ್
ಸಿಗುವ ಜಾಗದಲ್ಲಿ ಬರಿಯ ನಷ್ಟವಿಲ್ಲಿ
ಅನ್ಯರೆದೆಯ ಗೋಳು ಅರಿಯದೆ
ಗಾಳಿ ಶಿಖರ ಸೇರ ಹೊರಟ ಒಣ ಸಿದ್ದಾಂತ
ಸಕ್ರಿಯಗೊಂಡಿದೆ ಇಲ್ಲಿ
ಇಲ್ಲಿವೆ ಭವಿಷ್ಯ ತಾರೆಗಳು
ರೆಕ್ಕೆ ಬಲಿಯದ ಸುವರ್ಣ ಪುತ್ತಳಿಗಳು
ಇವು ಲೆಕ್ಕಕ್ಕೆ ಸಿಗದ ಲಂಗೋಟಿ ಹಕ್ಕಿಗಳು.!-
ಬಾನಲಾರುವ ಹಕ್ಕಿಗಳೆ,
ನನ್ನನ್ನೂ ಹೊತ್ತೊಯ್ಯಿರಿ;
ತೇಲುವ ಮನಸಾಗಿದೆ.
ಕಾಣಿಕೆಯಾಗಿ;
ಸುಂದರ ಕಥೆ ಹೇಳುವೆ.
ಮಾಯಳ್ಳಿ ಮಲೆನಾಡ ಒಂದು ಸುಂದರ ಹಳ್ಳಿ,
ಕಾಲಪ್ರೇಮಿ, ಕಹಿಯಾದ ಜೇನು,
ಸ್ನೇಹ ಮತ್ತು ಸ್ವಾತಂತ್ರ್ಯ, ಬೇಡರ ಸೂತಕ,
ಇನ್ನೂ ಹಲವಾರು..
ಕತ್ತಲಾಗುವುದರೊಳಗೆ ಮರಳಿ ಮನೆಗೆ ಸೇರಿಸಿ.-
ಪಿಸುಗುಡುತ್ತಿದ್ದವು,
ಪ್ರೀತಿನ ನಾವು ಗೆದ್ದೆವೆಂದು,
ಬದುಕು ಹಸನಾಯಿತೆಂದು,
ಪ್ರೀತಿಯ ಸಾರ್ಥಕತೆ
ಕಂಡೆವೆಂದು,,,-
ಜಗತ್ತಿನ ಬಗೆ
ಗೂಡಿನಲ್ಲಿದ್ದ ಎರಡು ಹಕ್ಕಿಗಳು
ಹೀಗೆಂದು ಚರ್ಚಿಸುತ್ತಿದ್ದವು ,
ಇರುವ ಮರ ಗಿಡಗಳನ್ನೆಲ್ಲ ಕೊಂದು ,
ನೀವುಗಳೇ ನಮ್ಮನ್ನು ಬಂದಿಯಾಗಿಸಿ
ಮರಳಿ ನೀವುಗಳೇ ,
ಪಕ್ಷಿಗಳ ಸ್ವಾತಂತ್ರ್ಯ ನಿಮ್ಮ ಹಕ್ಕು
ಎಂಬಂತೆ ಜೈಕಾರ ಸಾರುತ್ತಿರುವಿರಿ ಏಕೆ...????
(ಕಲ್ಪನೆಯಾ ಹಾದಿಯಲಿ)-