ಸಮುದ್ರ ದಡದಲ್ಲಿ ಕಂಡ
ಕೇದಿಗೆ ಇವಳು.....-
ನಿನ್ನರಸಿ ಬಂದ ಪ್ರೀತಿ ನನ್ನದು
ಕೊಡುವೆಯ ಒಂದು ಅಪ್ಪುಗೆಯ
ಸಿಹಿ ಸಂದೇಶವನ್ನು............!
ಇಂದಿಗೂ ಎಂದಿಗೂ ಮರೆಯದಿರು
ನನ್ನ ಈ ಪುಟ್ಟ ಹೃದಯವನ್ನು.......!-
" ನಂಬಿಕೆ "
ನಂಬಿಕೆ ಎನ್ನುವ ಪದಕ್ಕೆ ಅರ್ಥ ನೀನು,
ಹುಸಿಯಾಗಲು ಬಿಡದ ಕಾವಲು ನಾನು,
ಸಮಯಕ್ಕೆ ಸಿಕ್ಕಿರುವ ಮಾಣಿಕ್ಯ ನೀನು,
ನಿನ್ನೊಲುಮೆಗೆ ಒಲಿದ ನಾರಿ ನಾನು,-
❤️ ನನ್ನ ಮುದ್ದು ❤️
ನೀನೆ ನನ್ನ ಮನಸಿನ ಪ್ರೀತಿಯ ಮುದ್ದು.. 😘
ಮಾತಿಗೆ ಸಿಗದೆ ಸತಾಯಿಸುವ ನನ್ನ ಸಾದು.. 😘
ನಿನ್ನ ಪಿಸು ಮಾತಿಗೆ ಹಂಬಲಿಸಿರುವೆ ಕಾದು..😘
ಮೌನದ ಹಾದಿಯಲ್ಲಿ ಬರೆದಿರುವೆ ಕವಿತೆಯೊಂದು..😘
✍🏻ರಾಜೇಶ್ವರಿ. ಕೆ-
ಚಿಂತೆ ಎಂಬ ಕುದುರೆ ಏರಿ
ಓಡುವೆ ಎಲ್ಲಿಗೆ.....?
ತಾಳ್ಮೆ ಎಂಬ ಮದನಾರಿ
ಒಲಿಸಿಕೋ ನಿನ್ನಲಿಗೆ...!-
"ಅವಶ್ಯಕತೆ"
ಅವಕಾಶಕಾಗಿ ನೀ ಬಂದೆ ನಮ್ಮಲಿಗೆ,
ನಿನಗಾಗಿ ಬೇಡಿದೆ ಆ ದೇವರಿಗೆ,
ನಿನ್ನಾ ಆಸೆಗೆ ಇಟ್ಟೆ ಗುರಿ ಬೇರೆಡೆಗೆ,
ಬರಿದಾಯಿತು ಈ ಜೀವ ನಿನ್ನ ಅವಶ್ಯಕತೆಗೆ....-
ಕನಸು ಮುಗಿಸಿ ಹೊರಟಿತು ಮನ.
ಕರುಣೆಯೇ ಇಲ್ಲದ ಮನಸ್ಸು ಅವನ..
ಮನಕ್ಕೆ ಏನು ಗೊತ್ತು ಇದೇ ಜೀವನ...
ನಾ.....ನೊಂದು ಬರೆದೆ ಈ...ಕವನ....-