ನೆಮ್ಮದಿಗಾಗಿ ಎಲ್ಲವನ್ನು ಹುಡುಕುತ್ತಿದ್ದಿವೋ ,
ಅಥವಾ ಹುಡುಕುವ ಸಲುವಾಗಿಯೇ
ನೆಮ್ಮದಿಯ ಕಳೆದು ಕೊಳ್ಳುತ್ತಿದ್ದಿವೋ ತಿಳಿಯಾದಾಗಿದೆ,
ಹುಡುಕಿಯು ಸಿಗದಿರುವುದು ನೆಮ್ಮದಿ ,
ಇಗಗಾಲೇ ಇರುವ ನೆಮ್ಮದಿಯ ಇದ್ದು ಗುರುತಿಸಲು
ಯೋಗ್ಯವಿಲ್ಲದಿರುವುದು ನಮ್ಮದೇ ದುರ್ಬುದ್ಧಿ...
(ಕಲ್ಪನೆಯಾ ಹಾದಿಯಲಿ)-
ನಾನು ಹವ್ಯಾಸಿ ಬರಹಗಾರನಲ್ಲ, ಮನಸ್ಸಿಗನಿಸಿದ್ದನ್ನು
ಕಲ್ಪನೆ ಮಾಡಿ ಬ... read more
ಅತ್ತ ಗುರಿಸೆರಲಾಗದೆ ,
ಇತ್ತ ಮರಳಿ ದಡಸೇರಲಾಗದೆ
ಅಲೆದಾಡುತ್ತಿದೆ ಅಡ್ಡ ದಿಡ್ಡಿಯಾಗಿ ಯತ್ತೆಂದರತ್ತ...
(ಕಲ್ಪನೆಯಾ ಹಾದಿಯಲಿ)-
ಎಲ್ಲಿಯೂ
ಸಿಲುಕಿಕೊಳ್ಳದವನ ಸೆರೆಹಿಡಿದು ,
ನಿನಗಾಗಿ ಸೆರೆಯಾಗಿರುವವನ ಕಣ್ಣಿಗೆ ಮರೆಯಾಗಿ
ನೀ ಎಲ್ಲಿಯೋ ಕಾಣಿಯಾದರು ,
ನಾ ಏಕೆ ಮೌನವಾಗಿರುವೆ ಎಂದು
ಆಲೋಚಿಸುವ ಅಗತ್ಯವೆನಿದೆ ,
ನಾ ನಿನ್ನೊಳು ಜೀವಿಸಲು ಪ್ರಾರಂಭಿಸಿರುವಾಗ...
(ಕಲ್ಪನೆಯಾ ಹಾದಿಯಲಿ)-
ಏನಿದೆ ,ಏನಾಗಲೋರಟಿದೆ, ಏನಾಗುತ್ತಿದೆ
ಗೊತ್ತಾಗದೆ ಆಗಾಗ ,
ಏನಾದರೂ, ಏನ್ ಉಳಿದರು ,ಏನ್ ಅಳಿದರು
ಉಳಿಯುವುದೊಂದೆ ಕಟ್ಟ ಕಡೆಯಾಗ,
ನೆನಪುಗಳ ಹಾದಿಯಲಿ ನಿಲ್ಲದೆ ಹೊರಟ
ಮೆರವಣಿಗೆಯಲಿ,
ಸತ್ತು ಮಲಗಿದವರ ನೆನಪಿನ ಪಾತ್ರಗಳು ನಿರ್ವಯಿಸುತ್ತಿವೆ,
ಬದುಕಿ ಹೋದ ಜೀವಂತ ಕ್ಷಣಗಳ ಪೂರ್ಣಭಾಗ...
ಏನಿದೆ ಏನಾಗಲೋರಟಿದೆ ಮರಳಿ ಏನಾಗುತ್ತಿದೆ
ಗೊತ್ತಾಗದಾಗಿ ಉಳಿದಿದೆ ಆಗಾಗ...
(ಕಲ್ಪನೆಯಾ ಹಾದಿಯಲಿ)-
ಕಳೆದೊಗುವ ಈ ದಿನವ
ತೇಲುತಿಹ ಕಣ್ಣುಗಳು ಬಿಳ್ಕೊಡಲು ಸಿದ್ಧವಾದರು,
ಅದ ತಡೆಯಲು ಪೈಪೋಟಿಯಲಿ ನಿಂತತಿವೆ ಪೂರ್ಣಗೊಳ್ಳದ ಕೆಲಸಗಳು ಹೊತ್ತು ಗೊತ್ತಿಲ್ಲದೆ...
(ಕಲ್ಪನೆಯಾ ಹಾದಿಯಲಿ)-
ನೋಡಿಯು
ನಗೆ ಬಿರದವಳ ಸೌಂದರ್ಯವ
ಸೆರೆ ಹಿಡಿಯಲೋರಟಿರುವ
ಹುಚ್ಚು ಕಲಾವಿದನಿಗೋಲಿಸಿದರೆ
ಅತಿ ಹೆಚ್ಚೇ ಹುಚ್ಚರಂತಿರುವ
ಇಲ್ಲಿನಾ ಹೆಚ್ಚು ಮಂದಿ
ಅವನ ನೋಡಿ ನಕ್ಕರೆ ಸಾಕು......😄
(ಕಲ್ಪನೆಯಾ ಹಾದಿಯಲಿ)-
ಮೌನಕೆ ಇರುವ ತಾಳ್ಮೆ ಮಾತಿಗೆಕಿಲ್ಲ,
ಮಾತಿಗೆ ನನ್ನೊಡನೆ ಮೌನವಿರುವುದೆನ್ನುವ ಧೈರ್ಯ,
ಮೌನಕೆ .....ಮಾತಿಗೆ ಹಿಡಿತವಿಲ್ಲವೆನ್ನುವ ಕೋಪ...
ಮಾತಿಗೂ ....ಮೌನಕು ನಡುವೆ ಅದೆಷ್ಟು ವ್ಯತ್ಯಾಸ ,
ಮಾತು.....ಮುಗಿದರೆ ಮೌನ,
ಮೌನ ಮುಗಿದರೆ ..(ಅಪ್ಪಿ ತಪ್ಪಿ ಮುನಿದರೆ)
ಅವರ್ಣನೀಯ.......
(ಕಲ್ಪನೆಯಾ ಹಾದಿಯಲಿ)-
ಬದುಕು ಒಂದು ಸಂಭ್ರಮ........ವೇ!!!!!!!!
ಹೌದು(yes) ಬದುಕು ಎಂದಿಗೂ ಸಂಭ್ರಮವೇ,
ಸವೆಸಿದ ಹಾದಿಯಲಿ ,ಸಾವಿರೋಪದಿಯಲಿ
ಸೆರೆ ಸಿಕ್ಕ ಸುಂದರ ಕ್ಷಣಗಳ ಸೆರೆಹಿಡಿದ
ನಮ್ಮಯ ಬದುಕಿನ ಅನುಭವಗಳ ಬುತ್ತಿ
ಬರ್ತಿಯಾಗುತ್ತಿದೆ ತುಸು ಬೇಗನೆ,,,
ಅದ ಬಳಸಿ ಸಂಭ್ರಮಿಸು ನೀ
ಇಲ್ಲಿಯ ಅನುದಿನದ, ಪ್ರತಿ ಕ್ಷಣವೂ ನಿನ್ನೊಡನೆಯೇ..
(ಕಲ್ಪನೆಯಾ ಹಾದಿಯಲಿ)-
ಯಾರನೊ ಕಾಣಲು ಹೋಗಿ ,
ತಾ ಎಲ್ಲಿಯೂ ಕಾಣದಾಗಿ,
ಮತ್ತೆಲ್ಲಿಯೋ ಪ್ರತ್ಯಕ್ಷವಾಗಿ
ಮತ್ತೇನನ್ನೋ ಕಂಡು
ಮತ್ತೇಕೆ ಮರಳಿ ಮೂಕನಾದನೂ!!!!!
ಈ ಮತಿಗೆಟ್ಟ ಮಾನವನು.....
(ಕಲ್ಪನೆಯಾ ಹಾದಿಯಲಿ)-
ಮುರಿದ ಕನಸುಗಳು ಅದೆಷ್ಟೇ ಬಾಡಿದರು ,
ಕಾಡುತ್ತಿರುವ ನೆನಪುಗಳು ಮಾತ್ರ ,
ಕಣ್ಣ ಹನಿಯ ನೀರು ಚುಮುಕಿಸಿ ,
ಅದಾವ ಕಾರಣಕೆ
ಮರಳಿ ಮರಳಿ ಜೀವ ತುಂಬುತ್ತಿವೆ....
(ಕಲ್ಪನೆಯಾ ಹಾದಿಯಲಿ)-