QUOTES ON #ಸ್ನೇಹದ

#ಸ್ನೇಹದ quotes

Trending | Latest
27 JUL 2021 AT 15:06

ನಿನ್ನಿಂದ ಬಯಸುವುದೇನು ನಾನು,
ಕೇವಲ ಸ್ನೇಹ ಮಾತ್ರ
ಆದರೆ, ಅದಕ್ಕೂ ಬರಗಾಲ ಯಾಕೆ
ಬಂತೆಂದು ಅರಿವಾಗದೆ ಹೋಯಿತೆನಗೆ...

-


9 OCT 2020 AT 17:32

ಗೆಳೆತನದ ಜೊತೆ ಮಂದಸ್ಮಿತ 
ಪ್ರೀತಿಯ ಜೊತೆ ಗೌರವ 
ಭಾವನೆಗಳ ಜೊತೆ ಸ್ಪಂದನೆ 
ನಂಬಿಕೆಯ ಜೊತೆ ಆತ್ಮವಿಶ್ವಾಸ 
ನಿನ್ನ ಮುಗ್ಧ ಮನಸಿನ ಜೊತೆ ನಾನು 
ನನ್ನ ಸ್ನೇಹಕ್ಕಿಂತ ಮಿಗಿಲಾದ 
ಉಡುಗೊರೆ ಬೇಕೇನು..??

-


8 OCT 2020 AT 19:08

ಸ್ನೇಹದ ಕಡಲು ಒಲವಿನ ರೀತಿ
ಕಂಡವರನೆಲ್ಲ ಸೆಳೆಯುವ ಮಾಯಾಶಕ್ತಿ
ಬಂಧು ಬಳಗವ ಮೀರಿದ ಬಂಧ
ಒಂದೇ ಮನದ ಭಾವನೆಗಳ ಗಂಧ..!!

ಸಿಡುಕು ಮುನಿಸುಗಳ ಆಗರದ ಸಂತೆ
ಸಾಂತ್ವನ ಹೇಳಿ ಮುದ್ದಿಸುವ ಮಮತೆಯ ಕಂತೆ
ಗೆಲುವಿನ ಗರಿಮೆಗೆ ಚಿನ್ನದಂತ ಮುನ್ನುಡಿ
ಮೌನಕ್ಕೆ ಮಾತ ಬೆರೆಸುವ ಹೃದಯದಗನ್ನಡಿ..!!

ವಿನೂತನ ವಿನೋದಕ್ಕೆ ನಂಬಿಕೆಯ ವರದಿ
ಆತ್ಮೀಯತೆ ಮರೆಯದ ಸ್ನೇಹೈಕ್ಯತೆಯ ಬುನಾದಿ
ಆರಂಭದ ಸಮಾಗಮ ನಗುವಿನ ಮೆರವಣಿಗೆ
ಕೊನೆಯ ಘಳಿಗೆಯು ನೋವಿನ ಬೀಳ್ಕೊಡುಗೆ..!!

-



ನೆನಪು ಹೀಗಿರಲಿ
ಯಾವ ಸೀಮೆಯೂ
ತಡೆಯಾಗದಿರಲಿ..
ನಂಬಿಕೆ ಹೀಗಿರಲಿ
ಅಪನಂಬಿಕೆ ಹತ್ತಿರವೂ
ಸುಳಿಯದಿರಲಿ..
ಕಾಯುವಿಕೆ ಹೀಗಿರಲಿ
ಕಾಲದ ಕಟ್ಟಳೆ
ಅಡ್ಡ ಬರದಿರಲಿ..
ಸ್ನೇಹ ಹೀಗಿರಲಿ
ದ್ವೇಷದ ಛಾಯೆ
ನುಸುಳದಿರಲಿ..!

-


4 MAR 2021 AT 9:32

ಸ್ನೇಹದ ಆಳವು ಬಹಳ
ಅರಿಯುವ ಮನವು ವಿರಳ

-


19 JAN 2020 AT 19:24

ನಾವ್ ಮಾಡಿರೋ ದೊಡ್ಡ ತಪ್ಪನ್ನೇ ಕ್ಷಮಿಸಿ ನಮ್ ಪ್ರೀತಿಗಾಗಿ ಕಣ್ಣೀರಿಡೋರನ್ನ ಯಾವುದೇ ಕಾರಣಕ್ಕೂ ದೂರ ಮಾಡ್ಕೋಬೇಡಿ ಯಾಕಂದ್ರೆ ಅವರು ಪ್ರೀತ್ಸಿದ್ದು ನಿಮ್ಮನ್ನು ಮಾತ್ರ
ನಿಮ್ಮನ್ನು ದೂರ ಮಾಡೋ ಮನಸ್ಸು
ಅವರಿಗೂ ಇರಲ್ಲ....

-


22 DEC 2021 AT 16:39

ನ್ಯಾನೋ ಕಥೆ
ವಿಷಯ: ನೆನಪಿನ ಜೋಕಾಲಿ
ಶೀರ್ಷಿಕೆ - ಸ್ನೇಹದ ಕಡಲಲ್ಲಿ

ಇಪ್ಪತ್ತೈದು ವರ್ಷಗಳ ನಂತರ ಹಳೆ ವಿದ್ಯಾರ್ಥಿಗಳ ಸ್ನೇಹ ಮಿಲನದಲ್ಲಿ ರವಿಗೆ ನವೀನ್ ನನ್ನು ನೋಡಿದಾಗ ಕಣ್ಣಂಚಿನಲ್ಲಿ ಕಣ್ಣೀರ ಹನಿ ಜಿನಿಗಿತ್ತು. ಬಡತನದ ಬವಣೆಯಲ್ಲಿ ವಿದ್ಯಾಭ್ಯಾಸ ಮುಂದುವರಿಸಲು ಸಾಧ್ಯವಾಗದ ಸಮಯದಲ್ಲಿ ನವೀನ್ ಮಾಡಿದ ಆರ್ಥಿಕ ಸಹಾಯವನ್ನು ನೆನಪಿಸಿ,ಇಂದು ಸಮಾಜದಲ್ಲಿ ಘನ ವ್ಯಕ್ತಿಯಾಗಲು ನೀನೇ ಕಾರಣವೆಂದು ರವಿ ಹೇಳಿದಾಗ,ಇಬ್ಬರೂ ಗೆಳಯರು ಸ್ನೇಹದ ಸವಿ‌ನೆನಪಿನ ಜೋಕಾಲಿಯಲ್ಲಿ ತೇಲಿದರು.

-



ಸ್ನೇಹಕ್ಕಿದೆ ಪಾವಿತ್ರ್ಯತೆಯ ಬಂಧ
ಅರಿಯದವರಿಗೆ ಗೊತ್ತಿಲ್ಲದರ ಗಂಧ.

-


27 JUL 2021 AT 15:14

ಯಾರು ದೂರಾದರೇನು?
ನಮ್ಮ ಬದುಕು, ಭಾವನೆ, ಮನಸು, ಬದಲಿಸಬಲ್ಲರೇನು?
ಬೇಕು ಎನ್ನುವವರು ಜೊತೆಯಿರುವರು
ಸಮಯ ಹೇಗಿದ್ದರೇನು?
ಅರಿವಾಯಿತಲ್ಲ ಸತ್ಯ ಅದಕ್ಕಿಂತ ಮಿಗಿಲಾದದ್ದು ಮತ್ತಿನ್ನೇನು?

-



ಸ್ನೇಹ ಅನ್ನುವುದು ಹುಳಿ ಮತ್ತು ಸಿಹಿಯ ಸಮ್ಮಿಶ್ರಣ
ನಿಂಬೆಹಣ್ಣು ನೋಡಲೆಷ್ಟು ಚೆನ್ನಾಗಿ ಕಂಡರೂ ಅದರ ಸ್ವಭಾವ ಹುಳಿಯೇ... ಮಾಗಿದ ಹುಣಸೆಹಣ್ಣು ಹುಳಿ ಮತ್ತು ಸಿಹಿ ಸಮ್ಮಿಶ್ರಣ.. ನೋಡಿ ಆಯ್ಕೆ ಮಾಡಿ...🤝

-