ಮನಿ ಸೊಸಿಯಾಗಿ ಹೊಂಟಿಯ ಕಣೆ
ಮನಿ ಬೆಳಗೋ ದಾರಿ ಹುಡುಕು....!
ಮನಗಳ ತುಂಬಿ ಪೋಷಿಸಲು ನಿಂತಿಯಾ
ನಾನು ಎಂಬುದ ತೊರೆದು ನಾವು ಎಂಬುದ ಮೆರೆಸು...!
ನಿನ್ನ ಕೆಣಕಿಸಿ ಅಣಕಿಸಿ ಮಾತಾಡ್ತಾರ
ಆ ಕೆಣಕಿಗ ಬೆನ್ನು ತೋರಿಸಿ , ಅಣುಕಿಗ ನಗು ಬೀರುತ ಹೂಂಡು...!
ನಿನ್ನ ಮನಸ್ಸಿಗ ಘಾಸಿ ಮಾಡ್ತಾರಾ
ಮರಿಬ್ಯಾಡ ನೀ ಯಾರಂತ, ಆ ಘಾಸಿ ನಿನ್ ಮುಂದೆ ಸೋತ್ಹೋಗ್ತದ...!
ದಿಗಲ್ನಾಗ ಕೊಟ್ಟ ಮನಿ ತೊರಿಬ್ಯಾಡ
ನೀನಾ ಬೆಳಕದಿ ಆ ಮನಿಗ, ನೀ ಹೊಂಟ್ರ ಅದು ಮಸಣ ಆಗ್ತೈತಿ....!
ತಿದ್ದಿ ತಿಡಾಕಿ ನೀ ಆಗ, ಆ ಸಂಸಾರಕ್ಕ ನೀ ಸಾರಥಿ ಆಗ್ತೀಯ
ತಲೆತಗ್ಗಿ ಮನಗೆದ್ದು ನೋಡ, ಆಗ ಆಗ್ತೀಯ ಆ ಮನಿಗ ನೀನ ಒಡತಿ...!-
ದರ್ಶಿನಿ ನೀನೊಂತರ ಸುಂದರ ಸುದರ್ಶಿನಿ
ನಿನ್ನ ನಗುವೆ ಮನಮೋಹಕ ಮಧುರ ಮಂದಾಕಿನಿ,
ಸಂಗೀತ ಅಲೆಗಳ ಸಪ್ಪಳದ ಮೃದು ನಗುವಿನ ಸರಮಾಲಿನಿ ನಿನ್ನ ಜೊತೆ ಕಳೆದ ದಿನಗಳ ಲೆಕ್ಕ ಹಾಕಬಹುದು ಸೌದಾಮಿನಿ.....-
ನಾನು ನಿಮ್ಮ ಅದ್ಭುತ ಸೃಷ್ಟಿಯಲ್ಲವೇ ದೇವಾ,
ಮಗಳಾಗಿಯು ನಾನು ಪರಕೀಯಳು,
ಸೊಸೆಯಾಗಿಯೂ ನಾನು ಪರಕೀಯಳು.-
ನಗುವ ವದನದಿ ಶೋಭಿಪ
ತುಂಟತನದಿ ಬೆಳೆಯುತಿರ್ಪ
ಚಿತ್ರದುರ್ಗದ ಪುಟಾಣಿ ಲಹರಿ
ತಾಯಿಯ ಮುದ್ದು ಕುವರಿ!
ನಿಮ್ಮ ಬಾಳು ಸುಂದರ ವನವಾಗಲಿ
ನಳನಳಿಸುವ ಹೂವುಗಳರಳಲಿ
ನಿಮ್ಮಯ ಹೆಸರು ಕೀರ್ತಿಯ ಶಿಖರವೇರಲಿ!
ಮುದ್ದಿನ ಸೊಸೆಗೆ ಜನುಮ ದಿನದ ಶುಭಾಶಯಗಳು.
💐💐💐💐💐💐💐💐💐💐
🎂🎂🎂🎂🎂🎂🎂🎂🎂🎂-
ನಿನ್ನ ಒರಟು ಕೆನ್ನೆಮೇಲೆ
ಕೆತ್ತನೆ ಆಗಬೇಕು
ಚೂಪಾದ ಕತ್ತಿಯ
ಆಮೇಲೆ ಮೂತಿ ತೋರಿಸು
ನಮ್ಮಪ್ಪನ ಅಳಿಯ..!-
ಮನೆಗೆ ಬರುವ ಸೊಸೆ ಮನೆಯ ದೀಪ ಬೆಳಗಲು ಬರಬೇಕೇ ಹೊರತು, ಮನೆಯ ದೀಪವನ್ನು ಆರಿಸಲು ಅಲ್ಲ...
-
ಲೋ ನಮ್ಮ ಅಪ್ಪನ ಶೋಕಿ ಅಳಿಯ
ನೀ ಬಂದಾಗಿಂದಾನು ಮನೆ ತೊಳಿಯಾ
ನಿನ್ನ ಕಂಡ್ರೆ ಕೋಪ ಬರ್ತಿದೆ ಹೋಗ್ತಿಯಾ
ಸುಮ್ಕೆ ನನ್ನ ಹಿಂದೆ ಬಂದು ನಾಟಕ ಮಾಡ್ತಿಯಾ
ಕಮ್ಮಿ ಇಲ್ಲಾ ನೀನು ಖತರ್ನಾಕ್ ಅಳಿಯ..!!-
ಯಾವಕಾಲಕ್ಕೂ ಸುದಾರಿಸಲ್ಲ ಈ ಅತ್ತೆ
ಅತ್ತೆಯಲ್ಲ ಅವಳು ಜೀವ ಹಿಂಡೊ ಕತ್ತೆ
ಕಾಲ ಕೆರೆದು ಜಗಳ ತಗಿತಾಳ ಮತ್ತೆ ಮತ್ತೆ
ಬರೀ ಒಟಾ ಒಟಾ ಒದರತ್ತೆ ನೋಡಿ ಕುತ್ತೆ.-