ಮುದ್ದು ಹುಡ್ಗ
(✍ ಮಹೇಶ ಬಿ ಕವಲ್ದಾರ್)
893 Followers · 117 Following
Joined 15 November 2018
15 FEB 2022 AT 9:35
ಗಜಲ್ ;
ಎಳೆ ಮನಸುಗಳ ಕದಡಿಸಲಾಗುತಿದೆ ಗಾಲಿಬ್
ಬಿಳಿ ಹಾಳೆಯಲಿ ಕೆಸರು ಎರಚಲಾಗುತಿದೆ ಗಾಲಿಬ್
ಕೇಸರಿ ಬಿಳಿ ಹಸಿರು ಮದ್ಯೆ ನೀಲಿ ನಮ್ಮ ಗುರುತು
ಬಣ್ಣಬಣ್ಣಗಳ ದಿಕ್ಕಲಿ ಕತ್ತಲೆಸೆಯಲಾಗುತಿದೆ ಗಾಲಿಬ್
ಆಟ ಪಾಠಗಳು ಭವಿಷ್ಯದ ಮಹಲಿಗಿಟ್ಟ ಕನಸುಗಳು
ಹೋರಾಟ ಒಳಿತೆ ಜಂಡದಿಂದ ಸುಡಲಾಗುತಿದೆ ಗಾಲಿಬ್
ತಟ್ಟೆಯೊಂದೆ ಕೈ ಎರಡು ಭಾವವೊಂದೆ ಧರ್ಮ ನಾಕು
ಜೈ ಝೇಂಕಾರಗಳಿಂದ ಕಡೆಯಲಾಗುತಿದೆ ಗಾಲಿಬ್
ಕಣ್ಣು ಬಿಡಿ ಕಣ್ಣು ಬಿಡಿ ಮಹಿ ಸಾಯುವ ಮುನ್ನವೇ
ಬೆಳಕಿಗಾಗಿ ದೀಪ, ಜ್ವಾಲೆ ಉರಿಸಲಾಗುತಿದೆ ಗಾಲಿಬ್— % &-