ಓ ಪ್ರೀತಿಯೇ ಎಸ್ ಎಸ್   (❤️ ಸುಮನ್ ಹೆಚ್ ಸಿ ❤️)
743 Followers · 37 Following

Joined 1 January 2019


Joined 1 January 2019

ಎಂಥಹ ಅಮೋಘ ಪ್ರೀತಿ 💞

ನಂಗೆ ಅವನ ಬಗ್ಗೆ ಹೆಚ್ಚು ಏನೂ ತಿಳಿದಿಲ್ಲ
ಅವನು ಯಾರು ಅಂತ ಕೂಡ ಗೊತ್ತಿಲ್ಲ
ಎಲ್ಲಿರುವನು ಅಂತ ಕೂಡ ಹುಡುಕಿಲ್ಲ
ಏನು ಈ ಅವಿನಭಾವ ಸಂಬಂಧ
ಎಲ್ಲಿಯದೋ ಈ ಅನುಬಂಧ.
ಯಾರವನು... ಯಾರವನು...?

ಮಾತು ಬಾರದ ಮುಖನಂತಿರುವನು
ಪ್ರೀತಿಯ ಅರ್ಥ ತಿಳಿದು ಓಲೈಸುವನು
ತರಲೆ, ತುಂಟಾಟದಿ ನೋವು ಮರೆಸುವನು
ನನ್ನೆಲ್ಲಾ ನಗುವಿಗೆ ಕಾರಣನಾಗಿರುವನು
ಪ್ರತಿ ಬರಹದಲ್ಲೂ ಪದವಾಗಿ ಬರುವನು
ಯಾರವನು... ಯಾರವನು...?

ಏನನ್ನೂ ಅರಿಯದ ಮುಗ್ದ ಮನಸಿನವನು
ಸದಾ ಹಸನ್ಮುಖಿಯಂತೆ ನಗುತಿರುವನು
ಮಂದಸ್ಮಿತ,ಮೃದು ಹೃದಯಿ, ಅಘಣಿತನವನು
ಯಾರಿಗೂ ಕಾಣದ ಮಾಯಾವಿಯವನು
ಕನಸಿನಲ್ಲಿ ಬಂದು ಕಾಡಿಸಿ, ಪೀಡಿಸುವನು
ಯಾರವನು... ಯಾರವನು..?

ಮುದ್ದು ಮೊಗದ ಚಂದಿರನೊಲುವನು
ಹೃದಯವಂತ ಮುದ್ದು ರಾಜಕುಮಾರನು
ಮನದ ಮಂದಿರದಲ್ಲಿ ನಿತ್ಯ ಬೆಳಗುವನು
ಬೆಳದಿಂಗಳಲ್ಲೂ ನಕ್ಷತ್ರದೊಡನೆ ಸಂಚರಿಸುವನು
ನನ್ನೊರ್ವ ಚಂದಿರ ಲೋಕದ ಚೆಲುವನವನು

ನನಗಾಗಿಯೇ ಹುಟ್ಟಿ ಬಂದಂತಹ ಧೀಮಂತ
ವ್ಯಕ್ತಿಯವನು...
ಸ್ನೇಹಿಯೋ....ಪ್ರೀತಿಯ... ಪ್ರೇಮಿಯೋ...
ಎಷ್ಟಾದರೂ ನಾಳೆ ನನ್ನವನು... ನನ್ನವನು..!!

-



ಮನದೊಡತಿಯವಳು..

ಮುಸ್ಸಂಜೆ ತಿಳಿ ತಂಪಲ್ಲಿ
ಚಂದಿರನ ಮಬ್ಬು ಬೆಳಕಲ್ಲಿ
ಪ್ರೀತಿಯ ಅರಸಿ ಬಂದವಳೆ
ಚೆಲುವಾದ ಚಂದ್ರಿಕೆಯವಳು
ನನ್ನಂತರಂಗದ ಒಡತಿಯವಳು..!

ರಂಗು ರಂಗಾದ ರಂಗಿನ ಓಕುಳಿಯಲ್ಲಿ
ಬಣ್ಣ ಬಣ್ಣಗಳ ಕನಸೋತ್ತು ಬಾಳಿಗೆ
ಬಲಗಾಲಿಟ್ಟು ಬಂದವಳು
ಸುಂದರ ಮೊಗದ ಸೌಂದರ್ಯ
ಗಣಿಯವಳು.

ಮುತ್ತಿನಂತ ಮಾತು, ಸಿಹಿಯಾದ ನಗುವ
ಸೂರೆಗೊಂಡ ನೀರೆ ಯಾರು ಗೊತ್ತೇನೋ..?

ಚೆಂಗುಲಾಬಿಯ ಕಣ್ಣೋಳು
ಶೃಂಗಾರ ರಸ ಕಾವ್ಯ ತುಂಬಿದ
ಕಾವ್ಯ ಕನ್ನಿಕೆಯವಳು..
ಪ್ರೇಮದಿ ಕರೆಯುವಳು
ಅಕ್ಕರೆಯ ಗೆಳತಿಯವಳು
ಸಕ್ಕರೆಯಂತೆ ನುಡಿಯುವಳು

ದೂರ ದೂರಿನಲ್ಲಿ ನನಗಾಗಿಯೇ
ಇನ್ನೂ ಕಾದಿರುವಳು...
ನನ್ನೊಡತಿಯವಳು...!

-



ಓ ಮುದ್ದು ಮನಸೇ just relax...
ಎಲ್ಲವನ್ನೂ ಅವನೊಂದಿಗೆ ಹೇಳಿ
ಕೊಳ್ಳುವ ಕಾತುರ,
ಮನಸಿನ ಭಾವನೆಗಳನ್ನ ಹಗುರ ಮಾಡಿ
ಕೊಳ್ಳುವ ಆತುರ,
ಏನೆಂದು ಕೊಳ್ಳುವನು ಅನ್ನೋ
ಕೊಂಚ ಬೇಸರ,
ಆದ್ರೂ ಎಲ್ಲವನ್ನೂ ಅವನಿಗೆ
ಹೇಳುವ ಅವಸರ,
ಅವನಿಗಾಗಿ ಕಾದಿದ್ದ ಇಷ್ಟು ದಿವಸದ
ಫಲದಿಂದ ಹೃದಯ ಹೂವಾಗಿ ಅರಳಿತ್ತು!
ಏನೋ ಧಾವಂತ... ಏನೆಂದು ಕೊಳ್ಳುವನೆಂದು,
ಒಂದೇ ಸಮನೇ ಮನಸು ಚಡಪಡಿಸುತ್ತಿತ್ತು.
ಯಾರಿಗೂ ಕಾಣದ ತನ್ನೊಳಗಿನ
ಭಾವಗಳು ಪ್ರೀತಿಯಿಂದ ಕರೆದು
ಮಾತಾಡಿಸಿತ್ತು.
ಕಳೆದೋದೆ ಆ ದನಿಗೆ, ಮೋಡಿ ಮಾಡಿದ
ಮಾತಿನಲ್ಲೇ..
ಕಲ್ಲಾಗಿದ್ದ ನಾನು, ಶಿಲೆಯಾದೆ!
ಇದು ಪ್ರೀತಿಯೋ,ಪ್ರೇಮವೋ ಒಂದನ್ನೂ
ನಾ ಅರಿಯದಾದೆ..!!

-



Haunting memories Painful days
Forgotten unforgettable beautiful feelings
Who to tell, what to tell..?
Remains imprinted in the heavy chest
He left Traces of love..!!

-



Life is very hard bt seeing a sweet dream forget the pain and keep smiling is a good tool..!!

-



No one can understand a beautiful mind,
But an understanding heart never
fades away...!!

-



ನನ್ನ ರೋಧನೆಯ ವೇದನೆ ನೋವು
ನಿನ್ನ ಮನಸಿಗೇಕೆ ತಿಳಿಯಲೇ ಇಲ್ಲಾ,
ಇನ್ನೂ ಎಷ್ಟು ಅಂತ ಹೇಳಲಿ
ಹತಾಶೆ ಭಾವನೆಯಲ್ಲಿ ಹೃದಯ ಬಿಕ್ಕುತ್ತಿದೆ..!!
😭

-



ಒಂದು ಸುಂದರ ನೆನಪು...
ನನ್ನ ಮೆಚ್ಚಿನ ಪ್ರೀತಿಯ ಗೆ....
ಎಷ್ಟೊಂದು ದೂರ ಇದ್ದರೂ
ಅಘಣಿತ, ಅಪರಿಮಿತ ಒಲವು.
ಅವನಿರುವಿಕೆ ಮೆಲುದನಿಯಲಿ
ನುಡಿಯುತ್ತಿರುವುದು.
ಒಮೊಮ್ಮೆ ಆತಂಕ ಹೆಚ್ಚಾಗುವುದು
ಒಳಗಿನೊಳಗಿನ ಕನವರಿಕೆ, ಬಳಲಿಕೆ,
ಆವರಿಸುವುದು.
ನನ್ನ ಮೆಚ್ಚಿನ ಪ್ರೀತಿಯ ಗೆ....
ಕೂಗಿ ಕೂಗಿ ಕರೆದಂತೆ ಒಳದನಿ
ಭಾವ ತುಂಬಿ ಅನುರಾಗವಾಗಿ
ಹಾಡುವುದು.
ದೂರವಿದ್ದರೂ, ಹತ್ತಿರವಿದ್ದಂತೆ
ಭಾಸವಾಗುವುದು.. ಆ ನೆನಪು
ಹೊದ್ದು ನಿತ್ಯ ಮಲಗುವುದು.
ನನ್ನ ಮೆಚ್ಚಿನ ಪ್ರೀತಿಯ ಗೆ....
ಅವನದೇ ಧ್ಯಾನ ಹೊಳೆವ
ಕನಸುಗಳಿಗೆಲ್ಲಾ ಜೀವ ತುಂಬುತ್ತಾ
ಘನಿಕರಿಸುತಿಹನು.
ಜೀವ ಜೀವದ ಗೆ.. ಸಂಭ್ರಮಿಸಿ
ಎದುರು ಬಂದಾಗ ನಗು ಬಂದರು
ನಗಲಾರದೆ ಮೌನದಿ ಮಾತುಳಿದಿತು.
ಉಸಿರು ಬಿಗಿಹಿಡಿದು ಬೇಸರಿಕೆ ದೂರಾಗಿ
ಸಂತಸದಿ ನಲಿದಿತ್ತು. ಹೃದಯ ಹೂವಂತೆ
ಅರಳಿ ನಿಂತಿತು.
ನನ್ನ ಮೆಚ್ಚಿನ ಪ್ರೀತಿಯ ಗೆಳೆಯನ... ಕಂಡು..!!

_❤️ಸುಮನ್ ಹೆಚ್ ಸಿ ❤️

-



ಗೆಳೆಯ...
ಏಕಾಂತದ ಏಕಾಂತಕ್ಕೆ ಟಿಪ್ಪಣಿ
ಬರೆಯಬೇಕಿಲ್ಲಾ,
ಉಳಿದಂತೆ ಅವನು ಮೃದು ಮಾತು
ಸಹೃದಯಿ.
ದೇವರ ವರದಂತೆ ನನಗಾಗಿಯೇ ಹುಟ್ಟಿ
ಬಂದಂತಹ
ಧೀಮಂತ ವ್ಯಕ್ತಿ. ಮಾರು ದೂರ ಇದ್ದರೂ
ಇತ್ತೀಚಿಗೆಕೋ
ಎಳೆ ಎಳೆಯಂತೆ ಕಾಡುತಿಹನು.
ಸವಿದ ನೆನಪುಗಳೇಲ್ಲಾ ಸಿಹಿ ಜೇನು
ಸವಿದಂತೆ,
ಕತ್ತಲ ರಾತ್ರಿಗೆ ಕುಣಿ ಕುಣಿದು ಕನಸಲ್ಲಿ
ಬರುವನು.
ಅಂದುಕೊಳ್ಳುತೇನೆ ನೀ ಏಕೇ ಅಷ್ಟೂ
ದೂರ ಹೋಗಿರುವೆ
ಎಂದು ದೇವರ ಶಪಿಸೊಲ್ಲ..
ದೇವರ ಕೃಪೆಯಿಂದನೆ
ಸಿಕ್ಕಿರುವೆಯಲ್ಲ ಎಂದು ನಿತ್ಯ
ಸ್ಮರಿಸುವೆ.. 🙏

-



ನಿನ್ನ ಹೃದಯಕ್ಕೆ ಹೊಕ್ಕು ನನ್ನ ಪ್ರೀತಿ ನೋಡುವ
ಕಾತುರ, ನಕಲಿ ಹೃದಯವಲ್ಲ ಅಸಲಿ ಹೃದಯವ ಕಂಡೆ
ಪ್ರತಿ ಸ್ಪಂದನೆಗಳಿಗೂ ನಿನ್ನ ನಗು ಮೊಗದ ಮರೆಯಲ್ಲಿ
ನನ್ನೇ ನಾ ಕಂಡೇ...
ಮನದೊಳಗೆ ಬಚ್ಚಿಟ್ಟು ಪ್ರೀತಿಸುವೆ...
ನನ್ನೆದೆಯಂಗಳದಿ ಕಣ್ಣಿಗೊತ್ತಿಕ್ಕೊಳುವ ರೀತಿ..!!

-


Fetching ಓ ಪ್ರೀತಿಯೇ ಎಸ್ ಎಸ್ Quotes