QUOTES ON #ಸಿಂಚನ

#ಸಿಂಚನ quotes

Trending | Latest
23 JUN 2020 AT 17:25

ಭಾವಗಳ್ಬರುಡಾಗಿ
ಒಣಗಿದ್ದ ಮನಕೆ ನವ
ಋತುವಿನಾಗಮನ,
ಸ್ವಪ್ನಗಳ ನಿರ್ಗಮನವಾಗಿದ್ದ
ಮನದಲೀಗ ಮತ್ತೆ
ಮೋಡಗಟ್ಟಿದ ವಾತಾವರಣ,
ತುಂತುರು ಸಂತಸದಲಿ
ಮಿಂದ ಮನದಲೀಗ ಮತ್ತೆ
ಮುಂಗಾರಿನ ಸಿಂಚನ...

-


24 AUG 2019 AT 12:47

ಈ ದೇಗುಲ ತಂಪಿನ ಇಂಪಿನ
ಜ್ಞಾನದ ಸ್ಪಂದನ,
ಪಾಠ ಪ್ರವಚನ ನೀತಿ
ಬೋಧನೆಗಳ ಸಿಂಚನ,
ಆಟ, ಚರ್ಚಾಕೂಟಗಳ
ಕಂದನ ಕಂಪನ,
ಚಿತ್ರ ಕಲೆ, ರಂಗೋಲಿಗಳ
ಭಾವಪೂರ್ಣ ಕಲ್ಪನ,
ತಮಾಷೆ ಉತ್ತರ ಪ್ರಶ್ನೆಗಳ
ಸುರಿಮಳೆಯ ನಂದನ,
ಸುಂದರವಿಲ್ಲಿ ನನ್ನೀ ಬದುಕು
ನವನವೀನ ಪ್ರತಿ ದಿನ ಅನುಕ್ಷಣ .

-


30 JUN 2020 AT 23:02

ನಿನ್ನ ನೆನೆಯುತಲೆ
ಸುಮ್ಮನೆ
ಬರೆಯುತ್ತಿರುವೆ
ಕವನ..!
ಅದೆಲ್ಲಿ ಅಡಗಿ
ಕುಳಿತಿವೆಯೋ
ಸಾಲು ಸಾಲು
ಪದಗಳು ನನ್ನ
ತಲೆಯಲ್ಲಿ ಈಗ
ನೀನೆ ಹೇಳು
ನನ್ನ ಸಿಂಚನ..!

-



ಹುದುಗಿದವುಗಳೆಲ್ಲಾ ಹೊರಗೆ
ಈಡೆರಿಕೆಗೆ ನಿನ್ನದೇ ಶ್ರೀರಕ್ಷೆ
ಅನುಮಾನಗಳ ಮಂಜು
ಕರಗಿದರೂ ಮುಸುಕಿದ ಭಾವ
ತಂಪಿನ ಸಿಂಚನ ಮನಕ್ಕಾದರೂ
ಬಿಸಿಯಿಂದ ತನುವಿಗಿಲ್ಲ ಸಮಾಧಾನ.

-



ಮಳೆ ಸಿಂಚನ
ನಿನ್ನಾಗಮನಕ್ಕೊಂದು
ಭಾವ ಕಂಪನ.

-



ಇಂದು ಸೂರ್ಯೋದಯಕ್ಕೂ
ಮುನ್ನ ಮೂಡುತ್ತಿದೆ ಮನದಲಿ
ನಿನ್ನದೇ ಮಳೆ ಹನಿಯ ಸಿಂಚನ
ಮನ ಬೇಡುತ್ತಿದೆ ನಿನ್ನದೇ ಭಾವ ಬಂಧನ

-



ನನ್ನನ್ನು ಅನುಮಾನಿಸಬೇಡವೋ ಗೆಳೆಯ ನಿನ್ನ ಬಗ್ಗೆ ಯಾವುದೇ ತಪ್ಪು ತಿಳುವಳಿಕೆಗಳು ನನಗಿಲ್ಲ

ನನ್ನ ಬರಹವೆಲ್ಲ ನನ್ನ ಭಾವನೆಯ ಪ್ರತಿರೂಪ ,ನಿನ್ನ ಗೆಳೆತನ ನನಗೆ ದೇವರು ಕೊಟ್ಟರುವ ವರದ ಸ್ವರೂಪ.

ಅರ್ಥೈಸಿಕೊ ಈ ನಿನ್ನ ಗೆಳತಿ ಮನಸನ್ನ ಯಾವ ಕಲ್ಮಶವಿಲ್ಲದ ಹೃದಯದಲ್ಲಿ ನಿನಗಾಗಿ ಕೊಟ್ಟಿರುವಳು ಸ್ನೇಹವೆಂಬ ಸಿಂಹಾಸನವನ್ನ.

ಕೋಪವ ಬಿಡು ,ಸ್ನೆಹವ ಕೊಡು, ಉಳಿದು ಹೋಗಲಿ ನಮ್ಮಿಬ್ಬರ ಗೆಳೆತನ ಇನ್ನೊಬ್ಬರಿಗೆ ಮಾದರಿಯಾಗಿ
ಹೋಗಲಿ ಸ್ನೇಹದ ಸಿಂಚನ.

-


25 APR 2019 AT 16:02

ಅವಳೊಂದು ಹೃದಯದ ಸಿಂಚನ ನೀಡುವಳು ಕನವರಿಕೆಯ ಕಂಪನ, ಹಾಕುವಳು ಅನಪೇಕ್ಷಿತ ಭಾವಗಳಿಗೆ ಬಂಧನ ಜೊತೆಗಿದ್ದರೆ ಒಲವೇ ಬದುಕಿನ ಸುಂದರ ಸಂಚಲನ,,,

-


24 APR 2019 AT 16:53

ಕಾದು ಕೂತಿತ್ತು
ಪ್ರೀತಿಭಾವಕೆ ಇಳೆ!
ಸುರಿದ ಮಳೆ!!

-


27 JAN 2020 AT 16:45

ನೀ ಕವಿ ವರ್ಣನೆಯ ನಿತ್ಯಾ ನೂತನ
ನಿನ್ನ ಹೆಸರ ಕಲ್ಪನೆಯ ವಿನೂತನ
ಒಲವ ಸುಮಧುರಮಯ ನರ್ತನ
ಹೃದಯದಿ ಕಣ್ಣೋಟನಿಯ ಸಿಂಚನ
ಮಾಸಿಹೋಗದ ಹೆಜ್ಜೆಯ ಮಿಂಚಿನ
ಶುರುವಾಗಿದೆ ಹೊಸನೀಯ ಪ್ರೇಮಯಾನ..

-