ಇಂದ್ದೆಲ್ಲಾ ನೆನಪುಗಳು ಹೀಗೆ
ಮನದಾಳದಲಿಡುವವು ಕಚುಗುಳಿ
ನಗಯೇ ಮೂಡದ ತುಟಿಯ ಸೀಳಿ
ತೆರೆವುದು ಕಿರು ನಗೆಯ ಕೀಲಿ!
ಕಣ್ಣ ಮುಚ್ಚಿದರೆ ಸುಳಿಯುವೆ
ಕಣ್ಣ ಪರದೆಯ ಮರೆಯಲಿ
ಈಗಲೂ ಬೀಸುವುದು
ನಿನ್ನದೆ ಪಿಸು ಮಾತಿನ ತಂಗಾಳಿ!
ನಲ್ಲೇ ಹೀಗೇ ಉಳಿದೆಯಾ
ನೆನಪಿನಂಗಳದ ಮರೆಯಲಿ
ಪ್ರತಿ ಕವನದ ಭಾವದಾಳದಲಿ
ನಿನ್ನ ನೆನಪುಗಳು ಹೀಗೆ
ಮನದಾಳದಲಿಡುವವು ಕಚುಗುಳಿ!-
ಪಟಾಕಿಗೆ ಬೇಡ ಎಂದು ಹೇಳಿ..💥❌
ಆಚರಿಸುವ ಹಸಿರು ದೀಪಾವಳಿ🌱🪔
ಆಚರಣೆಯಲಿ ಇರಲಿ ನಿಮ್ಮದೇ ಹೊಸ ಶೈಲಿ💡
ಪರಿಸರ ಮಾಲಿನ್ಯದಕಡೆ ಗಮನವಿರಲಿ😷
ಇರುವುದು ಒಂದೇ ಭೂಮಿ ನೆನಪಿರಲಿ...🌏-
ಪಾದ ಪೂಜೆಯಲ್ಲ,
ಪ್ರತಿ ನಿತ್ಯ, ಎನ್ನ ಮನದ ಪೂಜೆ,
ನಿನಗೆ ಸಲ್ಲುತ್ತದೆ ಇನಿಯ!!
ನೀ ನನಗೆ,
ನಿತ್ಯ ಪೂಜನೀಯ!!
ನಿನ್ನ ಮನವೇ,
ನನಗೆ ದೇವಾಲಯ!!
ಪ್ರೀತಿ ಹಂಚುವೆ
ಪ್ರತಿ ನಿತ್ಯ!!
ಜೊತೆ ಗೂಡಿ ಸೇರುವ
ಬಾಳ ಕೊನೆಯ..-
ಇಲ್ಲ ಸಲ್ಲದ ಹೊಗಳಿಕೆ ನನ್ನದಲ್ಲ
ಹೇಳುವೆ ಗೆಳತಿ, ಸಿಹಿ ಸಲ್ಲಾ!!
ಕಂಡ ಕಂಗಳೇ ವಿವರಿಸಿದೆ
ನಿನ್ನ ಅಂದವ ನಾ ನಲ್ಲ!!
ಕೇಳು ಗೆಳತಿ ಕುರುಡ ನಾನಲ್ಲ...-
ನೀ,
ಸುಗಮ ಸಂಸಾರದ ನೌಕೆ,
ಪ್ರತಿ ಹಂತದಲ್ಲೂ
ಬಾಳ ಬೆಳಗುವ ದೀವಟಿಕೆ.
ಪ್ರೀತಿ, ಸ್ನೇಹ, ಮಮತೆಯ ಪತಾಕೆ
ನಿನ್ನಿಂದಲೇ ಜೀವನ, ಆರ್ಥಿಕತೆಗೆ ಚೇತರಿಕೆ
ಓ ಹೆಣ್ಣೇ,
ನೀ ಅಲ್ಲವೇ ಕಾರಣ
ಬದುಕಿನ ಸಿರಿತನಕೆ.
ನೀ,
ಸುಗಮ ಸಂಸಾರದ ನೌಕೆ
ಸಾಟಿ ಇಲ್ಲ ನಿನ್ನ ನೀಡಿಕೆಗೆ..
ಪ್ರತಿ ಹಂತದಲ್ಲೂ, ಸ್ನೇಹ, ಪ್ರೀತಿ, ಸಹಕಾರ ನೀಡಿದ ಎಲ್ಲ ಮಹಿಳೆಯರಿಗೆ,
ಮಹಿಳಾ ದಿನಾಚರಣೆಯ ಶುಭಾಶಯಗಳು! 💐💐💐💐
- ದಿ. ನ ರಘು...-
No matter how good or bad your day is, a beautiful smile greets you when you go home and you forget everything.
-
ಕನ್ನಡ ಭಾಷೆಯ ಇತಿಹಾಸ- ಭಾಗ ೧
1. ಭಾಷೆ ಉಗಮ ಮತ್ತು ವಿಕಾಸ..
2. ಕನ್ನಡ ಸಾಹಿತ್ಯ ಬೆಳೆದು ಬಂದ ರೀತಿ... 👇
-
ಸೋಲು ಗೆಲುವು ನೋವುಗಳ ನಡುವೆ
ಬಿಡಲಾಗದ ಬಾಂಧವ್ಯೊಂದು ಉಳಿದಿತ್ತು
ಕಣ್ಣಂಚಿನಲ್ಲೊಂದು ಕಂಬನಿ ಮಿಡಿದಿತ್ತು
ಮನದಲಿ ತೊರೆಯಲಾಗದ ತೊಳಲಾಟ ಒಂದಿತ್ತು
ಅಧಿಕಾರದ ನೆತ್ತಿಗೆ ಬರಿ ಸ್ವಾರ್ಥದ ಸುತ್ತಿಗೆ ಹೊಡೆದಿತ್ತು
ಮಮಕಾರವಿಲ್ಲದ ಮಡಿಲಲ್ಲಿ ನಿಸ್ವಾರ್ಥ ಸೇವೆ ಮರುಗಿತ್ತು
ಅಧಿಕಾರದ ಅಮಲು ತನ್ನದೇ ನೆರಳ ನುಂಗಿತ್ತು
ಅಭಿವೃದ್ಧಿಯ ಅರಮನೆಗೆ ಬರಿ ಕತ್ತಲು ಕವಿದಿತ್ತು....-
ಮುಗಿಯದ ಮಾತು ನನ್ನದು
ಕೇಳಿದರೆ ಹೇಳುವೆ ಪಿಸುಮಾತು
ಬರುವುದೇನೋ ನಿನ್ನ ನಿದ್ರೆಗೆ ಮುನಿಸು,
ಹೆಚ್ಚಾದರೆ ದಯವಿಟ್ಟು ಕ್ಷಮಿಸು
ಗೆಳತಿ ಮಾತನಾಲಿಸಿ ನಿದ್ರಿಸು....-