QUOTES ON #ಸಂಶಯ

#ಸಂಶಯ quotes

Trending | Latest
24 APR 2021 AT 22:06

ಅದನ್ನು ಪರಿಹರಿಸಿಕೊಳ್ಳುವುದು ಸೂಕ್ತ.
ವಾಸ್ತವಿಕತೆ ತಿಳಿಯದೇ ಸಂಶಯ ಪಟ್ಟರೆ,
ಆಂತರಿಕ ನೆಮ್ಮದಿಯನ್ನೇ ಕಸಿದುಕೊಂಡುಬಿಡುವುದು.
ಮನಸಿನ ಆಳ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು
ಮೊದಲು ನಂಬಿಕೆ ಇಡಬೇಕು.
ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡು ಎಂಬಂತೆ.


-


24 APR 2021 AT 17:17

ನಂಬಿಕೆ ಎಂಬ ದೋಣಿಯ
ಪಯಣಿಗರು ನಾವು
ಸಂದೇಹವೆಂಬ ಅಲೆಗಳು
ದೋಣಿಯ ಮುಳಿಗಿಸದಿರಲಿ
ನಂಬಿಕೆ ಧೃಡವಾಗಿರಲಿ
ಸಂದೇಹ ಸುಟ್ಟು ಬೂದಿಯಾಗಲಿ
ಪ್ರೀತಿ-ವಿಶ್ವಾಸ ಸದಾ ಚಿಗುರೊಡೆಯಲಿ....

- ಪ್ರಭಾ.

-


28 JAN 2022 AT 12:43

ಅನುಮಾನವನ್ನು ಅಂಗೈಯಲ್ಲಿ ಹಿಡಿದರೆ,
ಸುಂದರವಾದ ಬೆಳಕಿನಲ್ಲಿ ಕತ್ತಲೆಯನ್ನು ಹುಡುಕಿದಂತೆ....— % &

-


24 APR 2021 AT 21:44

ಮುಖಾ ಮುಖಿ‌ ಬೇಟಿ ಮಾಡಿ
ಕುಳಿತು ಪರಸ್ಪರ ಚರ್ಚೆ ಮಾಡಿ
ನ್ಯೂನತೆ ಇದ್ದರೆ ಸರಿಪಡಿಸಿಕೊಳ್ಳಿ
ಸಂಶಯಕ್ಕೆ ಪರಿಹಾರ ಕಂಡುಕೊಳ್ಳಿ
ಯಾರದೆ ತಪ್ಪಿದ್ದರೂ ಸರಿ ಒಪ್ಪಿಕೊಳ್ಳಿ
ಸಂಬಂಧ ಘಟ್ಟಿಯಾಗಿ ಉಳಿಸಿಕೊಳ್ಳಿ‌
ಸಂಬಂಧ ಸಡಿಲವಾದರೆ ಬದುಕೆ ನಶ್ವರ
ಸಂಬಂದ ಘಟ್ಟಿ ಇದ್ದರೆ ಬದುಕು ಬಂಗಾರ
ಬದುಕಿನ ದಾರಿ ಸುಗಮವಾಗಲಿ
ಬದುಕಿನಲ್ಲಿ ಬಿರುಕು ಬಾರದಿರಲಿ
ಘಟ್ಟಿಯಾಗಿದ್ದರೆ ಸಂಬಂಧ
ಜೀವನ ಬಹು ಆನಂದ

-



ಸಂಸಾರವೆಂಬ ನಾವೆಗೆ
ನಂಬುಗೆಯ ಹುಟ್ಟಾಡಿದಾಗ ಮಾತ್ರ
ಸಂಬಂಧಗಳು ತೀರಾ ಹಿತವಾಗಿ
ನಿರಾತಂಕಭಾವದಲಿ ತೇಲುವವು,,
ಒಂದೊಮ್ಮೆ ಸಂಶಯದ ಸಣ್ಣ
ರಂದ್ರವೊಂದು ಮೂಸಾಡಿದರೆ ಸಾಕು,,
ಎಂತಹ ಬಲಿಷ್ಟ ಕಲಾಸಿ ಇದ್ದರೂ ಸರಿಯೇ
ಆ ನಾವೆ ಭಾರ ಸಹಿಸದೆ ಮುಳುಗಿ ಹೋಗುವುದಷ್ಟೇ!!
✍️ಶಿಲ್ಪಾ ಪಾಲ್ಕಿ💞

-


24 APR 2021 AT 14:44

ಸಂಶಯದ ಸುಳಿಗಾಳಿ
ಸುರುಳಿ ಸುರುಳಿಯಂತೆ.
ನುಸುಳಿದರೂ..
ಹುರುಳಿಲ್ಲ..ತಿರುಳಿಲ್ಲ.
ಸುಳಿಗಾಳಿ ತಂಗಾಳಿಯಾದಾಗ
ಸಂಶಯದ ಕೊಳ್ಳಿದೆವ್ವ ..
ಬೇವಿನ ಗಾಳಿಗೆ ಹಾರಿತಂತೆ.
ಖುಷಿಯ ಹೋಳಿಯ ಮುಂದೆ
ಧೂಳಾಯಿತಂತೆ.

ಗಾಯತ್ರಿ⚘ಕಣೋ

-


1 SEP 2019 AT 20:48

ಹೇಳದೆ ಕೇಳದೆ ಒಲವಾಗಿ ಹೋಗಿದೆ
ಮುಳುಗುವುದೊ ತೇಲುವುದೊ ಎಂಬ ಸಂಶಯವೂ ಶುರುವಾಗಿದೆ

-


24 APR 2021 AT 11:57

ಒಂದೇ ಸಮನೇ ಕಿಡಿ ಕಾರಬಾರದು,
ಮತ್ತೊಂದು ಬಾರಿ ಕಾದು ನೋಡಬೇಕು,

-


24 APR 2021 AT 11:03

ಅನುಮಾನ ಎಂಬುದು ಚುಚ್ಚುವ ಮುಳ್ಳು
ಅದರೊಳಗೆ ಇರುವುದೆಲ್ಲ ಬರಿ ಪೊಳ್ಳು
ಮೂಡಿದರೆ ಮನದಲೊಂದು ಸಂಶಯ
ಬಗೆಹರಿಸಿಕೊಳ್ಳಲು ಮಾಡಿಬಿಡು ನಿಶ್ಚಯ

ಅಪನಂಬಿಕೆ ತರವಲ್ಲ ತಿಳಿ ವಲ್ಲಭೆ
ನಂಬಿಕೆ ಜೀವನದ ಬೆಳಕಿನ ಪ್ರಭೆ
ಪ್ರತ್ಯಕ್ಷ ಕಾಣುವುದೆಲ್ಲ ಸತ್ಯವಲ್ಲ
ಪ್ರಮಾಣಿಸಿ ನೋಡಿದರೆ ತಿಳಿಯುವುದೆಲ್ಲ

-



ತಾಳ್ಮೆಯಿಂದ ವರ್ತಿಸಿ,ಆಲೋಚಿಸಿ ಮಾತನಾಡಿಕೊಂಡು ಬಗೆಹರಿಸಿಕೊಳ್ಳಬೇಕು
ಮತ್ತೊಬ್ಬರಿಗೆ ಮಾತಾಡಿ ನೋವು ನೀಡುವ ಮುನ್ನ ಸರಿಯೋ ತಪ್ಪು ಎನ್ನುವುದು ನಾವು ಅರಿತುಕೊಳ್ಳಬೇಕು

-