QUOTES ON #ಸಂಬಂಧಗಳು

#ಸಂಬಂಧಗಳು quotes

Trending | Latest

ಸಂಬಂಧಗಳಲ್ಲಿ ಹಾಲು-ಜೇನಿನಂತ ಸವಿ ಇರಬೇಕು
ಸಂಬಂಧಗಳಲ್ಲಿ ಭರವಸೆಯ ಹೊಳಪು ತುಂಬಿರಬೇಕು
ಸಂಬಂಧಗಳೇ ತಮ್ಮೆಲ್ಲ ನೋವುಗಳಿಗೂ ಮುಲಾಮಾಗಿರಬೇಕು.

-



ತಪ್ಪಿಲ್ಲದಿದ್ದರೂ ತಪ್ಪೊಪ್ಪಿಗೆ ನೀಡಬೇಕು
ಗೆಲ್ಲುವ ವಿಶ್ವಾಸವಿದ್ದರೂ ಸೋಲೊಪ್ಪಬೇಕು

-



ಮುರಿದ ನಂಬಿಕೆಯನ್ನು ಫೆವಿಕ್ವಿಕ್ ಅಂಟನ್ನು
ಹಾಕಿ ಜೋಡಿಸಲು ಸಾಧ್ಯವಿಲ್ಲ ಗಾಲಿಬ್!

-


13 JUN 2021 AT 11:43

ಒಂದು ವರ್ಷದ ಪಯಣದ ದಾರಿಯುದ್ದಕ್ಕೂ ಆಸ್ವಾದಿಸಿದ ಸ್ವಾದದ ಮೆಲುಕು 🤗❤️😋

👇👇👇👇👇

-


6 NOV 2020 AT 17:59

ಹರಿದ ಸಂಬಂಧಗಳನ್ನು ಎಂಬ್ರಾಯಡರಿ
ಹೊಲಿಗೆಯಿಂದ ಮುಚ್ಚಲು ಸಾಧ್ಯವಿಲ್ಲ ಸಾಕಿ!

-


27 AUG 2020 AT 9:20

ಕೆಲವು ಸಂಬಂಧಗಳನು
ಮನದ ಅಣೆಕಟ್ಟಿನಲಿ
ಹಿಡಿದಿಟ್ಟು ನೆರೆ‌‌‌ ಸೃಷ್ಟಿಸುವುದಕಿಂತ
ಕೊಂಚ ಕೊಂಚವಾಗಿ
ಬಿಟ್ಟು ಬಿಡುವುದು ಲೇಸು..

-



ಬದುಕ ಬಂಡಿಯಲ್ಲಿ
ಸಾಗುತಿರ್ಪ ಕನಸುಗಳ ಸರಕು
ಹಳಿತಪ್ಪಿ ಬಿದ್ದಿತ್ತು
ಬಿರಿಬಿಟ್ಟ ಬದುಕ ಚಕ್ರದೊಳು..!

ತುರಗಾತಿವೇಗದಿ ಸಾರ್ದು
ಸೊಳ್ಳೆಗಳಂತೆ ಕಿರಿಕಿರಿ ವೇಷಮಾಡಿ
ಸಂಬಂಧಗಳು ರಕ್ತಹೀರಿತ್ತು
ಬಿರಿಬಿಟ್ಟ ಬದುಕ ಚಕ್ರದೊಳು..!

ಒಯ್ಯನೆ ತೀಡಿದತ್ತು ಅಷ್ಟರಲ್ಲಿ
ಆ ಹರನ ಮಾಯಾಚಳಕ.
ನಳಿನದಳದ ಮನ ಮುಗುಳ್ನಕ್ಕಿತು
ಬಿರಿಬಿಟ್ಟ ಬದುಕ ಚಕ್ರದೊಳು..!

-



ಪ್ರೀತಿ ನಂಬಿಕೆ ತಾಳ್ಮೆ ನಮ್ಮಲ್ಲಿ ದೃಢವಾಗಿರಬೇಕು.

-



ಗೆದ್ದು ಸಂಬಂಧ ಕಳೆದುಕೊಂಡು
ಬದುಕುವುದಾದರೆ ನೀ ಗೆಲ್ಲುವುದನ್ನೇ ಬಿಟ್ಟುಬಿಡು,,
ನೀ ಸೋಲುವುದರಿಂದ ಸಂಬಂಧ ಉಳಿಯುವುದಾದರೆ
ಸೋಲಿನೊಂದಿಗೆ ಬದುಕನ್ನೇ ರಾಜಿಮಾಡಿಬಿಡು!!..

ಆಗ ನೋಡು ಸೋಲಿನಲ್ಲೂ ಬದುಕು ಹೇಗೆ ಗೆಲುವಾಗುವುದೆಂದು...
✍️ಶಿಲ್ಪಾ ಪಾಲ್ಕಿ💞

-



ಜೀವನವನ್ನು ಅರ್ಥ ಮಾಡಿಕೊಳ್ಳುವುದು
ತುಂಬಾ ಪ್ರಯಾಸದ ಕೆಲಸ...
ಕೆಲವರು 'ಕನಸು' ಗಳಿಗಾಗಿ ತಮ್ಮವರಿಂದ
ದೂರ ಇರುತ್ತಾರೆ, ಇನ್ನೂ ಕೆಲವರು ತಮ್ಮವರಿಗಾಗಿ
'ಕನಸು' ಗಳನ್ನೇ ದೂರ ಮಾಡುತ್ತಾರೆ.

-