ಅಮೃತವರ್ಷಿಣಿ   (𝙰𝚖𝚛𝚞𝚝𝚑𝚊 𝙼 𝚁𝚊𝚖)
980 Followers · 84 Following

read more
Joined 24 July 2019


read more
Joined 24 July 2019

Was never meant to send you!
Backspaced thousand times,
Typed many more times
But atlast..

It never meant to send you!!

-



ಪ್ರೀತಿ,ಪ್ರೇಮ,ಕಾಮ
ಎಲ್ಲವೂ ಸುಲಭ;
ಮನವ ತೆರೆದಿಟ್ಟಾಗ...
ಅಷ್ಟೇ ಕಠಿಣ
ಮುಚ್ಚಿಟ್ಟಾಗ!!!!!

-



ಎಡವಿದ ಪಾದಕ್ಕೆ ಸಿಕ್ಕಿದ್ದು,

ನನ್ನದೇ ಹೃದಯದ ಇನ್ನೊಂದು ಚೂರು!

-



#ರಾಮ

ಸಾಗರದ ನೋವಿಗೆ ಸಾಂತ್ವನ ನೀಡುವ
ರವಿಯ ಉರಿಯ ತಣಿಸಿದವನು,
ನೋವು ಮರೆಸೋ ಸಂಗೀತದ ಒಂಟಿತನದ
ರಾಗಕ್ಕೆ ತೆಳುನಗುವಿನ ಮುಲಾಮು ಹಚ್ಚಿದವನು!

-



ಹೈವೆ ಸಾಗಿ ಸೇರಬಹುದಾದ ನೂರು ಮೈಲಿಯ ಶಹರಲ್ಲ,
ಕಾಲುದಾರಿಯ ಕೊನೆತುದಿಯಲ್ಲೇ ಕಾನನ ಅಲೆಸುವ ಕಂಪು;

#ನಿನ್ನ ನೆನಪು!

-



ನೀ ಬರುವ ನಾಳೆಗಳ
ಇಂದು ನಾ ಕಾಯಲಾರೆ,
ನೀನಿರದ ಬದುಕಿನಲಿ
ಖುಷಿಯನೆಂದು ಹುಡುಕಲಾರೆ!

ಸಂಜೆ ತಂಗಾಳಿಗಳನ್ನು
ನಿನ್ನ ದನಿಗಿನ್ನೆಂದು ಹೋಲಿಸಲಾರೆ,
ಸಾಮ್ಯತೆ ಹುಡುಕುವ ನೆಪದಲ್ಲಿ
ಕಣ್ಮರೆಯಾದ ಮಾತುಗಳ ನೆನೆಯಲಾರೆ!

ಇನ್ನೆಂದು ಮುಂಜಾವಿನ ಬೆಳಗಿನಲ್ಲಿ
ನಿನ್ನ ನೆನಪನ್ನೇ ಮೊದಲಾಗಿಸಲಾರೆ,
ನಿದಿರೆ ಇರದ ರಾತ್ರಿಗಳಿಗೆ
ನಿನ್ನ ಹೆಸರನೆಂದೂ ಇಡಲಾರೆ!

ಮುಗಿದುಹೋದ ಸಮಯಕ್ಕೆ
ಮತ್ತೆ ಹಿಂದುರುಗಿ ಹೋಗಲಾರೆ,
ಅನಂತಕಾಲಕ್ಕೂ ನಿನ್ನ ಪ್ರೇಮಿಸು-
ವುದನೆಂದೂ ಮರೆಯಲಾರೆ!!

-



ನಿನ್ನ ಪ್ರೇಮದ ಪ್ರತೀ ನೆನಪೂ ಕರಗುತಿದೆ ನನ್ನೊಳಗೆ;


ಮಸಣದಿಂದ ಹೊರಟ ಧೂಳೊಂದು ಕಣ್ಣಾಲಿಯ ಕೆಂಪಾಗಿಸುವಂತೆ!

-



ನಿನ್ನ ಮಾತುಗಳಿಲ್ಲದ ಸಂಕ್ರಾಂತಿಯ
ಸಿಹಿಯಾಗಿಸಲು ಆ ಸಕ್ಕರೆಯ ಕಬ್ಬು ಸೋತಿತ್ತು!

-



ನನ್ನೆಲ್ಲ ಕಣ್ಣೀರಿನ ಚೂರುಗಳ ಕೂಡಿಸಿದವನಿಗೆ ಕಂಡಿದ್ದು,

ಅವನದೇ ಪ್ರತಿಬಿಂಬ!

-



#Krishna

The only name which bring backs darkened souls from the black holes of saddness.

-


Fetching ಅಮೃತವರ್ಷಿಣಿ Quotes