ಲೇಖನಿ
___________
ಶಿಕ್ಷಕರ ದಿನಾಚರಣೆ
••••••••••••••••••••••
(ಅಡಿಬರಹದತ್ತ ನೋಡಿ 👇)-
ಶಿಲ್ಪಿಯು ಕಲ್ಲನ್ನು ಕಡಿದು
ಸುಂದರ ಮೂರ್ತಿಯ ಮಾಡುವಂತೆ,
ಪ್ರತಿ ವಿದ್ಯಾರ್ಥಿಗಳನ್ನು ತಿದ್ದಿ ತೀಡಿ
ವಿದ್ಯಾ ಮೂರ್ತಿಗಳಾಗಿ ಬೆಳಗಿಸುವ,
ಎಲ್ಲಾ ಶಿಕ್ಷಕರಿಗೂ "ಶಿಕ್ಷಕರ ದಿನಾಚರಣೆಯ"
ಶುಭಾಶಯಗಳು 💐💐💐💐💐.-
ದೀಪ ತಾನು ಉರಿದು ಜಗತ್ತಿಗೆ
ಬೆಳಕು ನೀಡುವ ಹಾಗೆ
ಅಜ್ಞಾನದಿಂದ ಜ್ಞಾನದೆಡೆಗೆ
ಕರೆದೊಯ್ಯುವ
ಪ್ರತಿಯೊಬ್ಬ ಗುರುವಿಗೂ
ನನ್ನ ಕೋಟಿ ಕೋಟಿ ನಮನಗಳು...!
ಶಿಕ್ಷಕರ ದಿನದ ಶುಭಾಶಯಗಳು..!-
*
ಉದಾತ್ತ ನಾಯಕ **
ಶಿಕ್ಷಣ ಕ್ಷೇತ್ರವಾಳಿದ ಉದಾತ್ತ ನಾಯಕ
ಶಿಕ್ಷಣದ ಮೌಲ್ಯ ಅರುಹಿದ ಧೀಮಂತ
ಶೈಕ್ಷಣಿಕ ರಂಗಕ್ಕೆ ಕಳಶಪ್ರಾಯವಾದಾತ
ವೃತ್ತಿಯ ಮಹತ್ವ ಲೋಕಕೆ ತಿಳಿಸಿದಾತ
ಉತ್ತಮ ಕಾಯಕ ನಿರುತವು ಗೈಯ್ಯುತ
ಭಡ್ತಿಯ ಪಡೆದರು ಉನ್ನತ ಸ್ಥಾನಕೆ
ಬೇಧವ ತೋರದೆ ಬೋಧನೆ ಮಾಡುತ
ಪ್ರಖ್ಯಾತಿ ಪಡೆದರು ದೇಶದುದ್ದಗಲಕೆ
ಅರಸುತ ಬಂದವು ಪ್ರಶಸ್ತಿ ಪುರಸ್ಕಾಗಳು
ಭಾರತ ರತ್ನವ ಪಡೆದ ಮಾಣಿಕ್ಯದಂತವರು
ಉಪರಾಷ್ಟಪತಿಯಂತ ಉನ್ನತ ಹುದ್ದೆಗಳು
ಅಲಂಕರಿಸಿದರೂ ಒಂದಿನಿತು ಬೀಗದವರು
ಇಮ್ಮಡಿಸಿರೆ ಹುದ್ದೆಯ ಮೇಲಿನ ಭಕ್ತಿ ಗೌರವ
ಶಿಕ್ಷಕ ವೃಂದವೇ ಮಾನ್ಯತೆ ಪಡೆಯಲು
ಸಲ್ಲಲಿ ಸಮ್ಮಾನ ಎನ್ನುವ ಕಳಕಳಿಯದುವೆ
ಜನ್ಮದಿನವದು ಸಾರ್ವತ್ರಿಕ ಹಬ್ಬದಂತಾಗಲು
ರಾಜಕಾರಣದಿ ನಿಷ್ಠೆಯ ಮೆರೆಯಲು
ದೇಶಸೇವೆಗೂ ಸೈ ಎನುವ ವ್ಯಕ್ತಿತ್ವ
ಭಾರತ ಸಂಸ್ಕೃತಿಯ ವಿಶ್ವಕೆ ಸಾರಲು
ಸರ್ವಪಲ್ಲಿ ರಾಧಾಕೃಷ್ಣನ್ ಎನುವ ಜ್ಞಾನದಾತ
ಮಾಲಾ ಚೆಲುವನಹಳ್ಳಿ-
ವಂದನೆ-ಅಭಿನಂದನೆ
ಹಸುರಾಗಸ-ಹಸುರು ಮುಗಿಲು ಎಂದು ಸಂಕಲ್ಪ ಮಾಡುತ್ತಾ,ಭಾವನೆಗಳ ಬೆರೆಸಿ ಚಂದದ ಛಂದಸ್ಸು ಕಲಿಸಿದ ಕನ್ನಡ ಶಿಕ್ಷಕರಿಗೆ ವಂದನೆ ಅಭಿನಂದನೆ.
ಕರುಣೆಯಿದ್ದರೂ ಮೇಲ್ನೋಟಕ್ಕೆ ಕರುಣೆ ತೋರದೆ,ಬೇರೆ ರಾಜ್ಯದವರೊಂದಿಗೆ ವ್ಯವಹಾರ ಮಾಡಲು ಕಲಿಸಿದ ಆಂಗ್ಲ ಭಾಷೆಯ ಶಿಕ್ಷಕರಿಗೆ ವಂದನೆ ಅಭಿನಂದನೆ.
ರಾಜ್ಯ ಮಾತ್ರವಲ್ಲದೆ ರಾಷ್ಟ್ರದ ಬಗ್ಗೆ ತಿಳಿಸಿ,ರಾಷ್ಟ್ರಭಾಷೆ ಕಲಿಸಿದ ಹಿಂದಿ ಶಿಕ್ಷಕರಿಗೆ ವಂದನೆ ಅಭಿನಂದನೆ.
ಜೀವನದ ಲೆಕ್ಕಾಚಾರ ಕಲಿಸಿದ ಗಣಿತ ಶಿಕ್ಷಕರಿಗೆ ವಂದನೆ ಅಭಿನಂದನೆ.
ಇತಿಹಾಸ ಮರೆತವನು ಇತಿಹಾಸ ಸೃಷ್ಟಿಸಲಾರ ಎಂದು ಸಂವಿಧಾನ ಪಾಠ ಕಲಿಸಿದ ಸಮಾಜ-ವಿಜ್ಞಾನ ಶಿಕ್ಷಕರಿಗೆ ವಂದನೆ ಅಭಿನಂದನೆ.
ವೈಜ್ಞಾನಿಕವಾಗಿ ಯೋಚಿಸುವಂತೆ ಕಲಿಸಿದ
ವಿಜ್ಞಾನ ಶಿಕ್ಷಕರಿಗೆ ವಂದನೆ ಅಭಿನಂದನೆ.
ಪ್ರಕತಿಯ ಬಗ್ಗೆ ಪ್ರೀತಿ, ಮಾನವನ ಅಂಗಾಂಗ ವ್ಯವಸ್ಥೆ, ಭಾಷೆಗಳು ವ್ಯಾವಹಾರಿಕವಾಗಿ ಎಷ್ಟುಮುಖ್ಯ ಎಂಬುದ ಕಲಿಸಿದ ಜೀವಶಾಸ್ತ್ರ ಶಿಕ್ಷಕರಿಗೆ ವಂದನೆ ಅಭಿನಂದನೆ.
ನಿತ್ಯ ಜೀವನದಲ್ಲಿ ಬಳಸುವ ಇಲೆಕ್ಟ್ರಾನಿಕ್ ವಸ್ತುಗಳ ಬಗ್ಗೆ, ನಮ್ಮ ಶಕ್ತಿಯ ಬಗ್ಗೆ ತಿಳಿಸಿದ
ಭೌತಶಾಸ್ತ್ರ ಶಿಕ್ಷಕರಿಗೆ ವಂದನೆ ಅಭಿನಂದನೆ.
ಬಣ್ಣ-ಬಣ್ಣಗಳ ಪ್ರಯೋಗ ಕಲಿಸಿ,ಬಣ್ಣಗಳಿಗೂ ಹೆಸರು ಕೊಡುವ ರಸಾಯನ ಶಾಸ್ತ್ರ ಶಿಕ್ಷಕರಿಗೆ ವಂದನೆ ಅಭಿನಂದನೆ.
ಬಿದ್ದಾಗ ಮೇಲೆತ್ತಿ, ಧೈರ್ಯವಾಗಿರವುದ ಕಲಿಸಿದ ದೈಹಿಕ ಶಿಕ್ಷಣ ಶಿಕ್ಷಕರಿಗೆ ವಂದನೆ ಅಭಿನಂದನೆ.
ವಿಶ್ವಮಾನವನ್ನಾಗಿ ಬದುಕಲು ಕಲಿಸಿದ ವಿದ್ಯಾದಾತನಿಗೆ ವಂದನೆ ಅಭಿನಂದನೆ.
-
ಬೆಳ್ಳಂಬೆಳಗ್ಗೆ ಒಂದೇ ರಾಗ...
ನಮ..ಸ್ತೇ..... ಟೀಚರ್..
ಪ್ರಶ್ನೆ ಕೇಳಿದ್ರೆ ಬಾಯಿಗೆ ಬೀಗ...
ಗೊತ್ತಿ...ಲ್ಲಾ.. ಸರ್..
ಉತ್ರ ಹೇಳ್ತಾರೆ ಅಷ್ಟೇ ಬೇಗ...
ಟ್ಯಾಂ...ಕ್ಯೂ(ಥ್ಯಾಂಕ್ಯೂ).... ಸರ್..
(ಮನ್ಸಲ್ಲಿ ಇಷ್ಟೇನಾ... ಸರ್)
ಹೇಳ್ಬೇಕು ಅನ್ಕೊಂಡೆ ಆಗ..
ತಪ್ಪಾದ್ರೆ ನಗ್ತಾರೆ ಈ ನನ್ನ ಬಳಗ..
ಅದಕೇ ಹೇಳಿಲ್ಲಾ.... ಸ..ರ್...
ತಪ್ಪಿಲ್ಲದೆ ನಡೆಯದು ಈ ಜಗ..
ತಪ್ಪಿಂದಲೇ ಕಲಿಕೆಯ ಹೊಸ ಪ್ರಯೋಗ..
ಆ ವಿವರಣೆ ಎಂಥಾ ಸೋಜಿಗ..
ಹೌದಾ ಸರ್..
ತಮಾಷೆಯಾಗಿತ್ತು ಆವಾಗ..
ನಲಿಯುತ್ತಾ ಕಲಿಯುವ ವ್ಯಾಸಂಗ...
ಪಾಠದಿ ಕೇಳಿದ್ದ ಸ್ವರ್ಗ..
ಚಿಂತೆಯೇ ಇರದಂಥ ಈ ಜಾಗ..
ಅದಕೆ ಮುಖ್ಯ ಕಾರಣವೂ ನೀವೇ ಸರ್..
ಕಾರಣ ನೀವೇ ಟೀಚರ್...
ಜೀವನ ಸಾಗುತ್ತಿದೆ ಅತೀ ವೇಗ..
ದಿಕ್ಕು ದಿಕ್ಕುಗಳಲ್ಲಿ ಒಬ್ಬೊಬ್ಬರ ಉದ್ಯೋಗ..
ಮತ್ತೆ ಮರಳದ ನೆನಪು
ಮತಿಯ ಸೆಳೆಯುತಿದೆ...
ಮೊದಲ ಕಲಿಕೆಯ ಹುರುಪು
ಮನಸ ಎಳೆಯುತಿದೆ..
ಅರಿವೇ ಇರದೆ ಅರಿತಿರುವೆವು ಅಂದು..
ಅರಿವಾಗಿದೆ ಇಂದು ಅರಿವೆಂಬುದು ಏನೆಂದು..
ಮತ್ತೊಮ್ಮೆ ಧನ್ಯವಾದಗಳು ಸರ್..
ಮತ್ತೊಮ್ಮೆ ಧನ್ಯವಾದಗಳು ಟೀಚರ್..
-
ಸರ್ಕಾರಿ ನೌಕರರನ್ನು
ವರಿಸದ ಶಿಕ್ಷಕರಿಗೆ
ಕೋರಿಕೆ ವರ್ಗಾವಣೆ
ಕನಸಿನಬುತ್ತಿ
ಕಡ್ಡಾಯ ವರ್ಗಾವಣೆ
ಕಟ್ಟಿಟ್ಟಬುತ್ತಿ ☹️😔😭
-
*ಗುರುವರ್ಯರು *
ನನ್ನೊಳಗಿನ ನನ್ನಿರುವ ಅರಿಯಲು
ಸಜ್ಜನಿಕೆ, ಸಚ್ಚಾರಿತ್ರ್ಯಗಳ ಕಲಿಯಲು
ಬದುಕುವ ಪಾಠವ ವಿದ್ಯೆಯ ಮೌಲ್ಯವ
ತಿಳಿಸಲು ಬೇಕಿದೆ ಗುರುವರ್ಯರು
ಸತ್ಯದ ಮಾರ್ಗದಿ ನಡೆಸುವ ನಾಯಕ
ನೆಲೆ ಬೆಲೆ ಲಭಿಸಲು ಬೇಕಿದೆ ಕಾಯಕ
ತಿದ್ದುತ ತೀಡುವ ಜೀವನ ರೂಪಕ
ಅವರೊಡನಾಟದಿ ಬಾಲ್ಯವೊಂದು ರಂಜಕ
ಭುವಿಯ ಬೆಳಗೋ ನೇಸರನಂತೆ
ಈ ಬಾಳ ಮಾಡಿರುವಿರಿ ಸುಂದರ ಲತೆ
ಕಲಿಸುತಲಿ ವಿದ್ಯೆ, ವಿನಯ, ವಿಧೇಯತೆ
ತುಂಬಿಹರು ವಿಜ್ಞಾನ, ವಿಚಾರಗಳ ಬೊಂತೆ
ಶಿಕ್ಷಣವೇ ಆಗಿರಲು ವ್ಯಕ್ತಿತ್ವಕ್ಕೆ ಲಕ್ಷಣ
ಕಲಿಯುವ ಬಯಕೆಯಿರಲಿ ಜೀವದ ಕಣಕಣ
ವಿಧ್ಯೆಯ ಮಹತ್ವದ ಅರಿಯದಿರೆ ವ್ಯಸನ
ಕಲಿತು, ಕಳಿಸಲು ಶಿಕ್ಷಕರ ಜೀವನ ಪಾವನ
ಮಾಲಾ ಚೆಲುವನಹಳ್ಳಿ-