ನಿನ್ನನ್ನು ನಾ ಅಂದು ಬಹಳವೇ ನಂಬುತ್ತಿದ್ದೆ
ಈಗಲೂ ನಾ ನಂಬುತ್ತಿರುವೆ
ಅಂದು ಭಕ್ತಿ ಹೆಚ್ಚಾಗಿ
ಇಂದು ಭಯ ಹೆಚ್ಚಾಗಿ
-
ಲೋಪವಿದ್ದರೆ ತಿಳಿಹೇಳಿ..
ನಾ ಕೋಪವಿಲ್ಲದೆ ತಿದ್ದಿಕೊಳ್ಳುವೆ…
ನಿಮ್ಮೆಲ್ಲರ ಪ್... read more
ನೀನು ಇತರರೊಂದಿಗೆ ಹೇಗೆ ವ್ಯವಹರಿಸುತ್ತೀಯೋ, ಹಾಗೆಯೇ ಅವರೂ ಕೂಡ ನಿನ್ನೊಂದಿಗೆ ಹಾಗೆಯೇ ವ್ಯವಹರಿಸಬೇಕು ಎಂದು ಪಟ್ಟು ಹಿಡಿಯಬೇಡ…
ಏಕೆಂದರೆ ನಮ್ಮ ಹಾವ ಭಾವಗಳನ್ನು ಯಥಾವತ್ತಾಗಿ ತೋರಿಸುವ ಕನ್ನಡಿಯೂ ಕೂಡ
ಅದಲು ಬದಲಾಗಿ ತೋರಿಸುತ್ತದೆ..-
ನಿನಗೆ ಬುದ್ಧಿ ಹೇಳುವಷ್ಟು ಅರ್ಹತೆ
ನನಗಿದೆಯೋ ಇಲ್ಲವೋ ನನಗೆ ಗೊತ್ತಿಲ್ಲ..
ಆದರೂ ನಾ ಹೇಳುತ್ತಿರುವೆನೆಂದರೆ ಬೇರೆಯವರ ಮುಂದೆ ನೀನು ತಲೆತಗ್ಗಿಸಬಾರದೆನ್ನುವ ಒಂದೇ ಕಾರಣ..
ಇದನ್ನು ನೀನು ನನ್ನ ಅಹಂಕಾರ ಎಂದುಕೊಳ್ಳಬಹುದು..
ವಾಸ್ತವದಲ್ಲಿ ಅದು ನನ್ನ ಕಾಳಜಿ ಎಂದು ಅರ್ಥ ಮಾಡಿಕೊಂಡಿದ್ದರೆ ಬಹಳ ಒಳ್ಳೆಯದಿತ್ತು..-
ಬಾಯ್ಮಾತಿನಲಿ ಬದುಕನ್ನು ಬಣ್ಣಿಸುವುದು
ಬಹಳ ಸುಲಭ..
ಜೀವನ ನಾಲಿಗೆಯಿಂದ ಪದಗಳುದುರುವಷ್ಟು ಸರಾಗವಾಗಿ ಇರುವಂತಿದ್ದರೆ
ಜವಾಬ್ದಾರಿಗೆ ಅರ್ಥ ಇರುವುದಿಲ್ಲ.
ಇನ್ನೊಬ್ಬರ ದೂರುವ ಮುನ್ನ ನಿನ್ನ ತಪ್ಪಿರದಂತೆ ನೋಡಿಕೊ...
ಆಗ ನಿನ್ನ ಅಪ್ಪಿ ತಪ್ಪಿಯೂ ದೂರಲಾರರು..
-
ಒಮ್ಮೆ ಆಡಿದ ಮಾತು ಬದಲಾಗದು ನಿಜ.
ಆದರೆ ಅಚಾನಕ್ ಆಗಿ ಆಡಿದ ಮಾತು
ಮತ್ತೊಬ್ಬರಿಗೆ ಬೇಸರ ತರಿಸಿದರೂ
ಕೇಳಿಸಿಕೊಂಡವರಿಗಿಂತ ಹೆಚ್ಚಾದ ನೋವು ನುಡಿದವರಿಗೇ ಆಗಿರುತ್ತದೆ…
-
ಅವಾಗೆಲ್ಲ ಊಟ ಸರಿಯಾಗಿ ಸಿಗ್ತಿಲ್ಲ
ಅಂತ ಅಳ್ತಿದ್ರು..
ಈವಾಗ ಡೇಟಾ(Data) ಸರಿಯಾಗಿ ಸಿಗ್ತಿಲ್ಲ ಅಂತ ಅಳ್ತಿರೋರೆ ಜಾಸ್ತಿ.
-
ಹಾರಿಹೋಗು ಗೆಳೆಯ
ಹೇಳಿಬಿಡು ವಿದಾಯ ||ಅರಮನೆ ಗಿಳಿ||
ದಣಿದಿದೆ ಈ ಕಾಯ
ಆಶ್ರಯಿಸುವೆ ಈ ಮನೆಯ ||ಕಾಡಿನ ಗಿಳಿ||
ಅರಮನೆಯ ಸೆರೆಯ ಗಿಳಿ ನಾನು
ಅಡವಿಯಲಿ ಮೆರೆವ ಅರಗಿಣಿ ನೀನು
ನಿನದು ಸ್ವಚ್ಛಂದ ಬಾನಿನಲಿ ಹಾರಾಟ
ನನ್ನದೋ ಸಿಕ್ಕ ಸಿಕ್ಕವರ ಕೈಗೆ ಮಾರಾಟ||ಅ. ಗಿ||
ಹೊತ್ತು ಹೊತ್ತಿಗೆ ದವಸ ಧಾನ್ಯ
ಶ್ರಮಿಸದೇ ಸಿಗುವ ನೀನೇ ಧನ್ಯ
ನನದು ಕಾಳು ಕಡ್ಡಿಗಳಿಗಾಗಿ ಹುಡುಕಾಟ
ನಿನಗೆ ಯಾವ ಕಾಲಕ್ಕೂ ಬರದು ಸಂಕಟ||ಕಾ. ಗಿ||
ರೆಕ್ಕೆ ಬಡಿಯದೆ ಕಾಲು ಸೋತಿದೆ
ಹೆಕ್ಕಿ ತಿನ್ನದೆ ಕಾಲವಾಗಿದೆ
ಪಂಜರದೊಳಗೆ ಬಂಧಿಯಾದ ಕೈದಿ ನಾನು
ಪ್ರಪಂಚವನೇ ಸುತ್ತುವ ಸಂಚಾರಿ ನೀನು||ಅ. ಗಿ||
ಅತ್ತಿಂದಿತ್ತ ಹಾರುವ ಸಮಯ
ಬೇಟೆಗಾರನ ಬಾಣದ ಭಯ
ಮಳೆ, ಬಿಸಿಲಿಗೂ ಅಂಜುವ ಬಡಪಾಯಿ ನಾನು
ಬೆಚ್ಚಗೆ ಬಚ್ಚಿಕೊಂಡು ಬಲು ಸುರಕ್ಷಿತ ನೀನು||ಕಾ. ಗಿ||
ನಾ ಏನು ಹೇಳಲಿ ನನ್ನ ಕಥೆ
ಒಮ್ಮೆ ಬಂಧಿಯಾದರೆ ನೀ ಸತ್ತಂತೆ
ಹಾರಿಹೋಗು ಗೆಳೆಯ ಇವರ ಕಣ್ಣಿಗೆ ಕಾಣದಂತೆ
ನೀನಂದುಕೊಂಡಂತೆ ಇದು ಬಂಧವಲ್ಲ, ಬಂಧನದ ವ್ಯಥೆ||ಅ. ಗಿ||
ಹಾರಿಹೋಗು ಗೆಳೆಯ
ಸಂಭ್ರಮಿಸು ನಿನ್ನ ನಾಳೆಯ||ಅರಮನೆ ಗಿಳಿ||-
ಮಗು ಊಟ ಮಾಡುತ್ತಿಲ್ಲವೆಂದು ಗದರುತ್ತಿದ್ದ ಪತ್ನಿಗೆ
ತುಸು ಮುದ್ದಿನಿಂದ ಊಟ ಮಾಡಿಸು ಎನ್ನುತ್ತಿದ್ದ ಆತ...
ಯಾಕೋ ಊಟ ಸೇರುತ್ತಿಲ್ಲವೆಂದು ನಿರಾಕರಿಸಿ ಮಲಗಿದ್ದ ತನ್ನ ಅಪ್ಪ
ಒಂದು ಕಾಲದಲ್ಲಿ ಇದೇ ಮಾತನ್ನು ಅಮ್ಮನಿಗೆ ಹೇಳಿದ್ದನ್ನು ಮರೆತಿದ್ದ ಆತ...
ಒಂದು ವೇಳೆ ನೆನಪಾಗಿದ್ದರೆ ಆ ಅಪ್ಪನಿಗೂ ತುಸು ಮುದ್ದಿಸಿ ಉಣಿಸುತ್ತಿದ್ದನೇನೋ
ಮುಂಬರುವ ತನ್ನ ಮುಪ್ಪನ್ನಾದರೂ ಯೋಚಿಸುತ...-
ಎಚ್ಚರಿಸಿದಾಗಲೇ ಎಚ್ಚೆತ್ತುಕೊಳ್ಳದಿದ್ದರೆ
ಮೆಚ್ಚಿನದನ್ನು ಕಳೆದುಕೊಂಡು
ಪಶ್ಚಾತ್ತಾಪ ಪಡುವುದರ ಹೊರತು
ಅನ್ಯ ಪ್ರಾಯಶ್ಚಿತ್ತವಿರುವುದಿಲ್ಲ..
ಗಣಪತಿಯು ಮೂರು ಬಾರಿ ಕರೆದಾಗಲೂ
ರಾವಣ ಬರದೆ ಆತ್ಮಲಿಂಗವನು ಕಳೆದುಕೊಂಡ..-
ನಗಿಸಿ ನಂಬಿಸುವವರಿಗಿಂತ
ನಟಿಸಿ ನಂಬಿಸುವವರೇ ಹೆಚ್ಚಾಗಿರುವರು..
ಕೈಯ ಮೇಲಿನ ಗಾಯವೂ
ಮಾಯವಾದಂತೆ ನಟಿಸಿತ್ತಷ್ಟೇ...
ಮತ್ತೆ ಮೂಡಿದೆ ನೋಯಿಸುತ,
ಈ ಬಾರಿ ನೋವು ಬರಿಯ ಕೈಗಲ್ಲ..
ಕಾಯವೇ ಕಂಪಿಸುವ ಹಾಗೆ,
ಕಾರಣ ನೋವು ಮನದೊಳಗೆಲ್ಲಾ..
-