Mala   (ಮಾಲಾ)
153 Followers · 10 Following

Joined 13 December 2018


Joined 13 December 2018
17 SEP 2023 AT 23:53


ಪ್ರಕಾರ....ಮಣಿಗಣನಿಕರ ವೃತ್ತ

ಸರಸರ ನಡೆಯುತ ಬರುತಿಹ ಗಿರಿಜೇ
ನರರಿಗೆ ಸಡಗರ ತರುತಲಿ ನಲಿಯೇ
ಭರಣಿಯ ತಿಲಕವ ಧರಿಸುವೆ ನಿನಗೇ
ಚರಣಕೆ ನಮಿಸುವೆ ವರಕೊಡೆ ಎಮಗೇ

ಮಾಲಾ ಚೆಲುವನಹಳ್ಳಿ

-


17 SEP 2023 AT 20:06

:ಮೋದಕ ಪ್ರಿಯ

ಕೋಟಿ ದೇವರ ಹಿಂದೆ ಅಟ್ಟಿದೆ
ಗಣಪ ನಿನಗೆ ನಮ್ಮ ವಂದನೆ
ಮೇಟಿ ವಿದ್ಯೆಯ ಅಧಿಪತಿಯಾದೆ
ಕಡುಬು ಮೋದಕಗಳ ಪ್ರಿಯನೆ

ಅಮ್ಮ ಗಿರಿಜೆಯ ಮೆಲ್ಲ ಕಳುಹಿಸಿ
ಹಿಂದೆ ಓಡುತ ಬರುವೆ ನೀನು
ನಮ್ಮ ಜನ್ಮವ ಪಾವನವ ಗೊಳಿಸಿ
ಬೆಳ್ಳಿ ಬೆಟ್ಟಕೆ ತೆರಳೋ ದೇವನು

ಗಲ್ಲಿ ಗಲ್ಲಿಲೂ ಪೂಜೆಗೊಳುವನೆ
ಪಡ್ಡೆ ಹೈಕಳಿಗೆಲ್ಲ ಬಹಳ ಇಷ್ಟವು
ಬಲ್ಲ ಇಷ್ಟಾರ್ಥಗಳ ನೆರವೇರಿಸುವನೆ
ನಿನ್ನ ಬರುವಿಕೆ ಜಗಕೆಲ್ಲ ನಲಿವು

ಪುಟ್ಟ ಮೂಶಿಕವಾಗಲು ವಾಹನ
ನಿನ್ನ ಗಾತ್ರಕೆ ಎಲ್ಲಿಯ ಹೋಲಿಕೆ
ಉಟ್ಟು ದಟ್ಟಿಯ ಚಂದ ಸೊಗಸಿನ
ಸುತ್ತಿಕೊಂಡಿಹೆ ಉರಗವ ಉದರಕೆ

ಮಾಲಾ ಚೆಲುವನಹಳ್ಳಿ.

-


25 AUG 2023 AT 23:14

ದ್ಯೋತಕ

ಚಂದ್ರಮನ ಅಂಗಳದಿ ಸಾಗಿದೆ ವಿಜ್ಞಾನ
ಹಗಲಿರುಳೂ ಶ್ರಮಗೈದ ತಂತ್ರಜ್ಞಾನ
ನವ ಭೂಮಿಕೆಯತ್ತ ವಿಕ್ರಮನ ಪಯಣ
ಭಾರತೀಯರ ಹೆಮ್ಮೆಯ ದ್ಯೋತಕವಿದೇನ

ಧರೆಯ ಮಕ್ಕಳಲಿದೆ ಅಚ್ಚರಿ ಕುತೂಹಲ
ಅನ್ಯ ಗ್ರಹಗಳ ವಿಸ್ಮಯಗಳನರಿವ ಹಂಬಲ
ಹೂಗುಚ್ಛದಂತೆ ಒಗ್ಗೂಡಿ ಪರಿಣಿತರ ಸಮಬಲ
ಸಾಕಾರಗೊಂಡಿತಿಂದು ಭಾರತೀಯರ ತುಮುಲ

ತ್ರಿವರ್ಣ ದ್ವಜದ ಮುದ್ರೆಯನೇ ಒತ್ತಿದೆ
ದಶ ದಿಕ್ಕುಗಳಿಗೂ ವಿಜಯದ ಕಹಳೆ ಯೂದಿದೆ
ಸೋತರೂ ಮೆಟ್ಟಿ ಪ್ರಜ್ಞಾನ ಉಡಾವಣೆಗೈದೆ
ಲೋಕಕ್ಕೇ ಮಾದರಿಯಾಗಿ ವಿಶ್ವಗುರುವಾಗಿದೆ.

ಮಾಲಾ ಚೆಲುವನಹಳ್ಳಿ

-


25 AUG 2023 AT 21:42

ದ್ಯೋತಕ

ಚಂದ್ರಮನ ಅಂಗಳದಿ ಸಾಗಿದೆ ವಿಜ್ಞಾನ
ಹಗಲಿರುಳೂ ಶ್ರಮಗೈದ ತಂತ್ರಜ್ಞಾನ
ನವ ಭೂಮಿಕೆಯತ್ತ ವಿಕ್ರಮನ ಪಯಣ
ಭಾರತೀಯರ ಹೆಮ್ಮೆಯ ದ್ಯೋತಕವಿದೇನ

ಧರೆಯ ಮಕ್ಕಳಲಿದೆ ಅಚ್ಚರಿ ಕುತೂಹಲ
ಅನ್ಯ ಗ್ರಹಗಳ ವಿಸ್ಮಯಗಳನರಿವ ಹಂಬಲ
ಹೂಗುಚ್ಛದಂತೆ ಒಗ್ಗೂಡಿ ಪರಿಣಿತರ ಸಮಬಲ
ಸಾಕಾರಗೊಂಡಿಹುದು ಭಾರತೀಯರ ತುಮುಲ

ತ್ರಿವರ್ಣ ದ್ವಜದ ಮುದ್ರೆಯನಲ್ಲಿ ಒತ್ತುತಿದೆ
ದಶ ದಿಕ್ಕುಗಳಿಗೂ ವಿಜಯದ ಕಹಳೆಯೂದಿದೆ
ಸೋತರೂ ಮೆಟ್ಟಿ ಪ್ರಜ್ಞಾನ ಉಡಾವಣೆಗೈದೆ
ಲೋಕಕ್ಕೇ ಮಾದರಿಯಾಗಿ ವಿಶ್ವಗುರುವಾಗಿದೆ.

ಮಾಲಾ ಚೆಲುವನಹಳ್ಳಿ

-


24 AUG 2023 AT 19:24

. ನೀನು ಜೊತೆಗಿದ್ದರಷ್ಟೇ ಸಾಕು

ಎದೆಗೊಳದ ನಲ್ಮೆಯ ತಾವರೆಯೇ ನೀನು
ಅಂಬರಕೆ ಚಾಚಿರುವ ಸುಸ್ವಪ್ನವಾಗಿರುವೆ
ಪದೇ ಪದೇ ಗುನುಗಬೇಕೆನಿಸುವ ಸವಿಗಾನ
ತಂಬೂರಿ ಮೀಟುವ ಶೃತಿ ಪಲ್ಲವಿಯೇ

ಇನ್ನಿಲ್ಲದಂತೆ ಒಲವ ಮಳೆಗರೆಯುತಲಿ
ಅಕ್ಕರದ ಭಾವಗಳ ಮೊಳಕೆಯೊಡೆಸಿರುವೆ
ಪದಪದವನೂ ಬಲು ಪ್ರೀತಿ ಪ್ರೇಮದಲ್ಲಿ
ಕೈ ಹಿಡಿದು ಬರೆಸುತಲಿ ಮುನ್ನಡೆಸಿರುವೆ

ಭವ ಬಂಧನವ ಕಳಚುವ ದೀಕ್ಷೆ ತೊಟ್ಟಿರುವ
ಕಾವ್ಯ ಕನ್ನಿಕೆ ನೀನು ಜೊತೆಗಿದ್ದರೆ ಸಾಕು
ನೂರು ಕುಹಕಗಳಿಗೂ ಉತ್ತರವಾಗಬಲ್ಲೆ
ಎತ್ತರೆತ್ತರಕ್ಕೆ ಏರಿ ಮತ್ತಷ್ಟು ಸಾಧಿಸಲು ಬಲ್ಲೆ

ಬೇಸತ್ತ ಬದುಕಲ್ಲಿ ಶೂನ್ಯ ವಿನಃ ಬೇರಿಲ್ಲ
ಕೊಟ್ಟದ್ದು ಹೊರತು ಪ್ರತಿಯಾಗಿ ಪಡೆಯೆ
ಕನಸುಗಳು ಕಮರಿರಲು ಚೈತನ್ಯವಿರದು
ಭಾರವಾದ ಉಸಿರಿಗೆ ಶರೀರವೊಂದು ಹೊರೆ

ವಿಲಾಪದ ಬದುಕಲ್ಲಿ ದೈವದತ್ತ ವರವಾದೆ
ಮೊರೆ ಕೇಳಿ ಸಾಕ್ಷಾತ್ಕಾರವಾದ ಪ್ರಿಯಸಖನು
ಗಗನದoಚಿನ ಬಾನು ಭುವಿಯ ಮಿಲನದಂತೆ
ನಿನ್ನೊಳಗೆ ಒಂದಾಗಿ ನಾನಾದೆ ನಿಶ್ಚಿ0ತೆ

ಮಾಲಾ ಚೆಲುವನಹಳ್ಳಿ.

-


22 AUG 2023 AT 14:44


ವಿಷಯ :ಹಳ್ಳಿಗಳು ಮರೆಯಾಗದಿರಲಿ

ಹುಲ್ಲುಗಾವಲಿದೆ ಮಲ್ಲೆ ತೋಟವಿದೆ
ತಿಪ್ಪೆಗಳಿರುವುದು ಊರ ಹೊರಗಡೆಯೇ
ಗೋವು ಹೋರಿಗಳಿರದ ಮನೆಗಳಿಲ್ಲ
ಸದೃಢ, ಸಶಕ್ತ ಜನ, ರಾಸುಗಳೆದೆಯೊಳು
ಶ್ರದ್ಧೆ,ಭಕ್ತಿ,ಆಚಾರ ವಿಚಾರ ಸಾನುಭಾವವಿದೆ

ಒಲೆ ಕೋಡೊಲೆಗಳಲಿ ಕೆನೆಗಟ್ಟಿದ ಹಾಲು
ಮೊಸರ ಕುಡಿಕೆಯೊಂದಿದೆ ಹಂತಿಯಲಿ
ಸೆಗಣಿ ಸಾರಿಸಿದ ಅಂಗಳವು ಪವಿತ್ರವಿರೆ
ಚುಕ್ಕಿ ರಂಗೋಲಿ ನಕ್ಕು ಬೆಸೆದಿದೆ ಬಂಧಗಳ

ನೆರೆಹೊರೆಯಲಿದೆ ಕೊಟ್ಟು ಪಡೆವಂತ
ಹುಟ್ಟಿನಿಂದ ಬಂದ ಸಂಸ್ಕಾರ, ಸಾಮರಸ್ಯ
ಜಾತ್ರೆ ಉತ್ಸವ, ತೇರಬ್ಬ ತೆಪ್ಪೋತ್ಸವಗಳು
ವೈಭವದ ಪರಂಪರೆಯಿಹುದು ಹಳ್ಳಿಗಳಲಿ

ಕಣದಲಿ ತೂರಿ ಕೇರಿವೆ ಜೊಳ್ಳು ಗಟ್ಟಿಗಳು
ಬೆಲ್ಲ ಸಕ್ಕರೆಯ ಅಚ್ಚುಗಳು ಆಲೆಮನೆಗಳಲಿ
ಜಾನಪದ, ಸೋಬಾನೆಗಳು, ಅಡಗೂಲಜ್ಜಿ
ಎಲ್ಲಾ ಇಹ ಹಳ್ಳಿಗಳು ಮರೆಯಾಗದಿರಲಿ

ಕೈ ಚಾಚಿ ಸೆಳೆದರೇನು ತಂತ್ರಜ್ಞಾನ ಆಧುನಿಕತೆ
ವೈಜ್ಞಾನಿಕ ತಳಹದಿಯ ಮೂಲ ಹಳ್ಳಿಗಾಡೇ
ಬಿಗುಮಾನವಿರದ ಸ್ವಚ್ಛoದ ಬದುಕುoಟು
ಅನಿವಾರ್ಯತೆಗಷ್ಟೇ ನಗರದ ಬದುಕಾಯ್ತು

ಮಾಲಾ ಚೆಲುವನಹಳ್ಳಿ

-


16 AUG 2023 AT 12:40

ಸ್ವಾತಂತ್ರ್ಯ

ಜಾತಿ ಮತ, ಪಂಗಡಗಳಿರಲಿ ನೂರೆಂಟು
ಯಾರಿಗಿಲ್ಲ ಅದರೊಡನೆ ಅತೀವ ನಂಟು
ಒಗ್ಗಟ್ಟಾಗಿ ಬಾಳುವುದ ಕಲಿತವರುಂಟು
ಭಾವೈಕ್ಯವಾಯ್ತು ದೇಶ ಕಳಚಿ ಕಗ್ಗಂಟು

ಧರೆಯಲ್ಲಿ ಹರಿಯಿತು ನೆತ್ತರು ಅಂದು
ಸ್ವಾಭಿಮಾನ ಸಾಹಸಗಳಿಗೆ ನಾಂದಿಯಾಯ್ತು
ಶತ ಶತಮಾನಗಳ ದಾಸ್ಯ ಕಳೆದಿಹುದಿಂದು
ಹೊಸ ಮನ್ವoತರಕೆ ಮುನ್ನುಡಿ ಬರೆದಾಯ್ತು

ಹತ್ತು ಹೆಜ್ಜೆಗಳು ನೂರು ಸಾವಿರವಾಗಿರಲು
ಕಣ್ಣು ಹಾಯಿಸಿದತ್ತ ಪ್ರಗತಿ ಪತಾಕೆಯೆ
ಹೊತ್ತ ಭಾರತಿ ಬೀಗುತಿಹಳು ಹೆಮ್ಮೆಯಲಿ
ತನ್ಮಕ್ಕಳ ವೀರ, ಧೀರತನಕೆ ಸಾಟಿಯೇ

ಬೆಂದು ಬಸವಳಿದರಂದು ಕೆಚ್ಚೆದೆಯ ಕಲಿಗಳು
ಕುತಂತ್ರಿಗಳ ಕೃತ್ರಿಮತೆಗಳಿಗೆ ಸಿಲುಕಿ
ತಂದಿರಲು ಸ್ವಾತಂತ್ರ್ಯವ ಹರ್ಷೋದ್ಘಾರಗಳು
ಮೊಳಗುತಿಹವು ದಶದಿಕ್ಕುಗಳಲೂ ಜೀಕಿ

ರಣ ಹೇಡಿಗಳ ಬಡಿದಟ್ಟಿ ಮುನ್ನುಗ್ಗುತಿದೆ
ಕ್ರಾಂತಿ ಕಹಳೆಯೊಳು ಶಾಂತಿ ಮಂತ್ರ ಪಠಿಸಿ
ವಿಶ್ವ ಗುರುವಾಗುವತ್ತ ಧ್ಯೇಯ ಹೊಂದುತ್ತಿದೆ
ಸನಾತನ ಧರ್ಮದೊಳು ಬದುಕ ಮೌಲ್ಯ ಮಥಿಸಿ

ಮಾಲಾ ಚೆಲುವನಹಳ್ಳಿ

-


14 AUG 2023 AT 23:24

ದೇಶ ಕಾಯ್ವ ವೀರ ಯೋಧ

ಅಷ್ಟದಿಕ್ಕುಗಳಲ್ಲೂ ಭದ್ರ ಕವಚ
ಭಾರತ ಮಾತೆಯದೇ ಉವಾಚ
ಬೇಧ ಭಾವವಿರದು ಉಚ್ಚ ನೀಚ
ಭಾವೈಕ್ಯತೆಯ ಮೆರೆವ ಹೂಗುಚ್ಛ

ಕಾಶ್ಮೀರ,ಕನ್ಯಾಕುಮಾರಿಗಳ ಮಿಡಿತ
ದೇಶ ಕಾಯ್ವ ವೀರ ಯೋಧ ಸತತ
ಭಾರತ ಮಾತೆಯ ರಕ್ಷೆಯ ತುಡಿತ
ಕಣಕಣವೂ ಸ್ಪಂದಿಸುತಿಹುದು ನಿರುತ

ದೀಕ್ಷೆ ತೊಟ್ಟಿಹ ಬದುಕಲಿರದು ನಿರೀಕ್ಷೆ
ಕ್ಷಣಕ್ಷಣವೂ ಮಡದಿ ಮಕ್ಕಳ ಪ್ರತೀಕ್ಷೆ
ಮಾಡಬೇಕೇಕೆ ನಿಮ್ಮಾರೋಗ್ಯವ ಉಪೇಕ್ಷೆ
ಅಂತರಂಗದನುಭಾವಕೂ ಸತ್ವ ಪರೀಕ್ಷೆ

ನಿಮ್ಮ ತ್ಯಾಗದಲಿಹುದು ಪ್ರಜೆಗಳ ನೆಮ್ಮದಿ
ಶಾಂತಿ ಸೌಹಾರ್ದತೆಗೆ ಬರೆಯುವಿರಿ ಮುನ್ನುಡಿ
ಆತಂಕ ಅವಘಡಗಳೊಡನಿರೆ ಬಾಳ ತಕ್ಕಡಿ
ದಾಟಲಾಗದು ಶತ್ರುಗಳೆoದೂ ದೇಶದ ಗಡಿ

ಮಾಲಾ ಚೆಲುವನಹಳ್ಳಿ

-


30 JUN 2023 AT 19:34


ಚುಟುಕು . ಆಷಾಡ

ಮಾತೃ ದೇವತೆಗಳ ಆರಾಧನೆಯ ಮಾಸ
ದರ್ಶನದಿ ಕಳೆವುದು ದುರಿತ ನಿರಾಯಾಸ
ಶುಭಕಾರ್ಯಕೆ ಸೂಕ್ತವಲ್ಲ ವಿಘ್ನ ಪ್ರಯಾಸ
ನವ ದಂಪತಿಗಳಿಗೆ ಕ್ಷಣಕ್ಷಣವೂ ನೀರಸ.

ಮಾಲಾ ಚೆಲುವನಹಳ್ಳಿ

-


30 JUN 2023 AT 18:59


ಘನವು ಘನವನರಿವುದು
ಘನಕ್ಕೆ ಘನವೇ ಎಣೆಯು
ಮನ ಮನವನರಿವಡೆ
ಮನ ಮನದ ಕನ್ನಡಿನೋಡ
ಗುಣ ಗುಣವ ಪ್ರತಿಫಲಿಸುವುದು
ಕಣಮುತ್ತದ ನಿಮ್ಮ ಗುಣತೇಜಕ್ಕೆ
ಮನ ಗಗನ ವಿಸ್ತಾರಮುದ್ರಿತ
ಕನ್ನಡದ ಅನುಪಮ ಪ್ರೇಮಕ್ಕೆ
ಅನ್ಯರ ಪ್ರತಿಭೆಯ ಕೊಂಡಾಡಿ
ಮಾನ್ಯತೆಯಿತ್ತ ನಿಮ್ಮ ಶ್ರೀಚರಣಕ್ಕೆ
ಅನಂತ ವಿನಮ್ರ ನಮನವನ್ನರ್ಪಿಸುವೆ ತಾಯೇ...
ಕನ್ನಡವ ನಿಮ್ಮ ಹೃದಯ ಪದ್ಮದೊಳಿರಿಸಿ
ಕನ್ನಡ ಕಣಕಣ ವ್ಯಾಪ್ತವಾದ ಮಾಲ ಅಮ್ಮ ನಿನಗೆ ಶರಣೆಂಬೆನು 🙏🥺

ಧನ್ಯೋಸ್ಮಿ ಸಂಜಯ್🌹🌹🌹
ನನ್ನ ಮೇಲಿನ ನಿನ್ನ ಅನುಪಮ ಪ್ರೀತಿ, ಅಭಿಮಾನ, ಗೌರವಗಳಿಗೆ ಶರಣಾಗಿರುವೆ ❤️❤️❤️

-


Fetching Mala Quotes