Mamatha R   (The Prosperity Mind 🥰)
8 Followers · 6 Following

read more
Joined 21 May 2023


read more
Joined 21 May 2023
18 APR AT 20:12

ನೀನು...
ಕನಸಿನಯಾನ..
ಮರೆಯಾದ ನೆನಪು..
ಮನಸಿನ ಆಸೆ..
ನೀನು...
ಭವಿಷ್ಯದ ಪ್ರೀತಿ..
ನನಸು..
ನೀನು..
ನನ್ನೇಜ್ಜೆಗುರುತು..
ನನ್ನೊಳಗಿನ ಭಾವ..
ನೀನು...
ನನ್ನೊಳಗೆ ಮೂಡಿದ
ಛಾಯೆ..


-


17 FEB AT 22:53

ನಾ ನನ್ನ ಅರಿತಾಗ ,
ನನ್ನ ಮನಸ್ಸಿನ ಗೊಂದಲಗಳಿಗೆ ಉತ್ತರವಾಗುವೇ,
ನನ್ನನ್ನೇ ನಾ ಅರಿಯಲಿಲ್ಲವೆಂದಾಗ,
ನಿನ್ನ ನಾ ಹೇಗೆ ತಿಳಿಯಲಿ,
ಈ ಬದುಕಿನ ಪಯಣದಲ್ಲಿ ,
ನೀ ನನ್ನ ಗೊಂದಲವಾಗಿರುವೆ,
ನಾ ನಿನ್ನ ಗೊಂದಲವಾಗಿರುವೆ,
ನನ್ನ ಮನಸ್ಸಿನ ಮಾತನ್ನು ನಾ
ಒಪ್ಪಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ.

-


6 FEB AT 17:55

ನಿನ್ನ ಅರ್ಥ ಮಾಡಿಕೊಳ್ಳುವುದೇ
ಕಷ್ಟವೆಂದಾಗ ,
ನಾ ಏನು ಹೇಳಲಿ,
ಕೆಲವೊಮ್ಮೆ ತೋರುವ ಮುಗ್ಧತೆ,
ಕೆಲವೊಮ್ಮೆ ತೋರುವ ಕೋಪ,
ಕೆಲವೊಮ್ಮೆ ತೋರುವ ಕರುಣೆ,
ಕೆಲವೊಮ್ಮೆ ತೋರುವ ಸ್ನೇಹ,
ಕೆಲವೊಮ್ಮೆ ನುಡಿಯುವ ಹುಸಿ ಮಾತು,
ಇವೆಲ್ಲವೂ ಆಕಸ್ಮಿಕವೋ..
ಅರಿತು ತೋರುವುದೋ ,
ಹೆಸರಿಗಾಗಿ ತೋರುವುದೋ,
ನನಗೆಂದೂ ತಿಳಿದಿಲ್ಲ..
ನನ್ನೊಳಗಿನ ಗೊಂದಲ ನೀನು..

-


31 JAN AT 22:45

ನೆನಪುಗಳ ಹಾದಿಯಲ್ಲಿ !
ನೀ ನೋಟಕ್ಕೆ ದೂರವಿರಬಹುದು,
ಆದರೆ, ಮನಸಿನೊಳ ನೆಲೆಸಿರುವ ಕಣ್ಣು ನೀ,
ಶ್ವಾಸದೊಳಗಿನ ಉಸಿರು ನೀ,
ಬದುಕಿನ ಪಯಣಕ್ಕೆ ಹೆಸರು ನೀ,
ಸದಾ ಬಡಿಯುವ ನನ್ನ ಹೃದಯ ನೀ...

-


31 JAN AT 21:57

How to shape on your life depends upon you,
In my life some special persons are bestest gift from God,
Every special persons are the forever green stars,
Whenever I angry,sad,happy I remembering those peoples,
They are the backbone of my life.

-


5 JAN AT 21:28

ಓ ಮೂಡಿ ಮನಸೇ ನೀ ಯಾವಾಗಲೂ ನನ್ನ ಜೊತೆಯಾಗಿರು!
ನನ್ನ ಜೀವನದ ಅತ್ಯುತ್ತಮ ಮಾರ್ಗದರ್ಶಕ ನೀ..
ನನ್ನ ಗೆಲುವಿನಲ್ಲಿ ನಿನ್ನ ಗೆಲುವು ಕಂಡವ ನೀ..
ಸೋಲುಗಳಲ್ಲಿ ಜೊತೆಯಾಗಿ,
ಜೀವನ ಮಾರ್ಗ ತೋರಿದವ ನೀ..
ಪ್ರಕೃತಿಯ ಪರಿವಿಡಿ ನೀ,
ಸದಾ ಬೆಳಗುವ ಸಮೃದ್ಧಿ ಮನಸು ನಿನ್ನದು,
ಈ ಬಂಧ ನನ್ನ ಕೊನೆಯ ಉಸಿರು ಇರುವವರೆಗೂ
ಹೀಗೆಯೇ ಹಸಿರಾಗಬೇಕು...

-


1 JAN AT 21:17

ಹೇ ಮನಸೇ ನೀ ಯಾವಾಗಲೂ ನಗುವಾಗಿರು!
ವರ್ಷದ ಆರಂಭದಲ್ಲಿ ನೀ ತೋರಿದ ಮುಗುಳುನಗೆ,
ಅಚ್ಚರಿಯ ನಗು,
ನೆನಪುಗಳ ನಗು,
ಹಾಸ್ಯದ ವ್ಯಂಗ್ಯ ನಗು,
ನಿನ್ನ ಮೊದಲ ಮಾತಿನ ಮುತ್ತಿನ ನಗು,
ನಿನ್ನ ಜೀವನದ ಅಂತ್ಯದವರೆಗೂ ಈ ನಗು ನಿನ್ನದಾಗಲಿ!

-


11 DEC 2024 AT 0:17

ನೀ ಏಕೆ ಇಷ್ಟು ಸುಂದರ!

ಸುತ್ತ- ಮುತ್ತ ಹಚ್ಚ -ಹಸಿರಿನಿಂದ ಕೂಡಿದ
ಪರಿಸರದಲ್ಲಿ ರಸ್ತೆ ನೀ,
ಕೋಪ-ನಗು ಕೂಡಿದ ಮೊಗ್ಗು -ಹೂವು ನೀ,

ನಿನ್ನ ನಗೆಗೆ ನವಿಲಾದೆ ನಾ..
ನಿನ್ನ ನುಡಿಗೆ ಕೋಗಿಲೆಯಾದೆ ನಾ..
ಮುಗ್ಧತೆಗೆ ಮಗುವಾದೆನಾ..
ನಯನಗಳ ನೋಟಕ್ಕೆ ಗುಬ್ಬಿಯಾದೆನಾ..

ಕಲಿಕೆಗೆ ನನಸಾದೆ ನೀ..
ಪ್ರಕೃತಿಯ ಪರಿವಿಡಿ ನೀ..
ಎಷ್ಟು ನೋಡಿದರೂ ಮತ್ತೆ ನೋಡುವಾಸೆ ನನಗೀಗ..
ಎಷ್ಟು ತಿಳಿದರೂ ಮತ್ತೆ ತಿಳಿಯುವ ಕುತೂಹಲ..


-


31 OCT 2024 AT 20:24

ನೀ ಹೋದೆಯಾ...ಕಡೆಗೆ..
ಹೇಗಿರಲಿ... ನಿನ್ನ ಹೊರತು
ನೀನೇ... ನನ್ನ ಗುರುತು
ಪರದಾಟ ನನಗಿನ್ನೂ ...
ಬಿಡದೇ ನೆನಪು ಸುಡುತ್ತಾ..
ಇರಲೂ ನನ್ನನ್ನು..
ಎಂದಿಗೂ...ಒಗಟಾಗಿದೆ..
ಈ ಜೀವ...
ನಿನದೇನೇ ನಿನದೇನೇ...
ಈ ಭಾಷೆ..
ನಿನ್ನ ನುಡಿಯೇ ಹೃದಯಂಗಮ...
ನಿನದೇನೇ ನಿನದೇನೇ...
ಈ ನಾಡು..
ನಿನ್ನ ನುಡಿಯೇ ಹೃದಯಂಗಮ....
ನೀನಿರದೆ ನಾ ಇರೆನೂ...
ಓ ಕನ್ನಡಿತಿಯೇ
ನಿನ್ನನೆನಪೆ ಕಾಡುತ್ತಿದೆ....
ನೀನಿರುವೆ ಎಲ್ಲೆಲ್ಲೂ...
ಈ ಮಿಡಿತ-ಎದೆಬಡಿತ
ನನ್ನುಸಿರೇ ನೀನು...
ನಿನ್ನಿಂದಲೇ ಸದಾ
ಬದುಕುವೇನೂ ನಾ...
ಈ ದಿನ...
ನಿನ್ನಿಂದಲೇ ಸದಾ ಬೆಳಗುವುದು
ಈ ನಾಡು...ಈ ಭಾಷೆ...


- The Prosperity Mind 🥰

-


11 OCT 2024 AT 0:54

ಓ ಮಾನವ ಈ ಜೀವನ ಶಾಶ್ವತವಲ್ಲ,
ಆದರೆ ನಿನ್ನ ಸಾಧನೆ ಶಾಶ್ವತವಾಗಿರುವಂತೆ ನೀ ಬದುಕಿ ತೋರಿಸು.
ಜೀವನದಲ್ಲಿ ಸೋಲು-ಗೆಲುವುಗಳು ಸಹಜ. ಸೋತೆನೆಂದು ಕುಗ್ಗದೆ ಸೋಲು-ಗೆಲುವುಗಳನ್ನು ಸಮನಾಗಿ ಸ್ವೀಕರಿಸಿ ನೀ ಬದುಕಿದ ರೀತಿಯೇ ಇನ್ನೊಬ್ಬರಿಗೆ ಮಾರ್ಗದರ್ಶನವಾಗುವಂತೆ ನೀ ಸಾಗು ಈ ಬಾಳ ಪಯಣದಿ.

-


Fetching Mamatha R Quotes