ಮಕ್ಕಳಿಲ್ಲದ ಹೆಣ್ಣು ಬಂಜೆಯಾದರೆ
ಹೆತ್ತ ಮಕ್ಕಳನ್ನು ಬೀದಿಗೆ ಬಿಡುವ ಗಂಡಸಿನ ಹೆಸರೇನು ❓
ಗಂಡ ಸತ್ತೋಡನೆ ಹೆಣ್ಣು ವಿಧವೆಯಾದರೆ
ಹೆಂಡತಿ ಸತ್ತ ಮೇಲೆ ಆ ಗಂಡಸಿನ ಹೆಸರೇನು ❓
ಸೆರಗು ಹಾಸಿ ಗಳಿಸಿದವಳು ವೇಶ್ಯೆಯಾಗುವುದಾದರೆ
ಚಪಲಕ್ಕಾಗಿ ಆ ಸೆರಗಿನ ಹಿಂದೆ ಬಿದ್ದ ಆ ಗಂಡಸಿನ ಹೆಸರೇನು ❓
ತಪ್ಪು ಹುಡುಕುವವನೇ ನ್ಯಾಯವಾಧೀಯಾದರೆ
ಇಲ್ಲಿ ತಪ್ಪೇ ಮಾಡದೇ ಬದುಕಿ ಸತ್ತವಳ ಹೆಸರೇನು ❓-
ಕನ್ನಡವು ಕನ್ನಡವನ್ನು ಕನ್ನಡಿಕರಿಸುತ್ತಿರಬೇಕು..!
ಕಾಣದ ಕವಿಯ ಕಲ್ಪನೆಗೆ ಕಥೆಯಾದವಳು ನಾನು..... read more
|| ಅವಶ್ಯಕತೆ ಮುಗಿದ ಮೇಲೆ ಎಲ್ಲವೂ ಭಾರ ||
ಊಟ ಮುಗಿದ ಮೇಲೆ ತಟ್ಟೆ ಭಾರ
ನೀರು ಕುಡಿದ ಮೇಲೆ ಬಾಟಲ್ ಭಾರ
ಮಳೆ ನಿಂತ ಮೇಲೆ ಕೊಡೆ ಭಾರ
ಶಿಕ್ಷಣ ಪಡೆದ ಮೇಲೆ ಪುಸ್ತಕ ಭಾರ..!
ಮಾಡದಿ ಬಂದಮೇಲೆ ಒಡಹುಟ್ಟಿದವರು ಭಾರ ಅಸ್ತಿ ಭಾಗವಾದಮೇಲೆ ಹೆತ್ತವರು ಭಾರ
ಗಂಡನ ತೊರೆದ ಹೆಣ್ಣು ತವರಿಗೆ ಭಾರ
ಮೋಹ ಕಳೆದ ಮೇಲೆ ಸಂಸಾರ ಭಾರ..!
ಸಹಾಯ ಪಡೆದ ಮೇಲೆ ಸ್ನೇಹ ಭಾರ
ಗುರಿ ತಲುಪಿದ ಮೇಲೆ ಗುರು ಭಾರ
ಉಸಿರು ನಿಂತ ಮೇಲೆ ದೇಹ ಭಾರ
ಸಂಕಷ್ಟ ಕಳೆದ ಮೇಲೆ ಆ ದೇವರೇ ಭಾರ...!
ಹರೇ ಕೃಷ್ಣ 🙏🏻-
ಸತ್ಯ ಎಲ್ರಿಗೂ ಇಷ್ಟ ಆಗಲ್ಲ
ಸಧ್ಯಕ್ಕೆ ಯಾರನ್ನೂ ಮೆಚ್ಚಿಸೊಕೊಗಲ್ಲ
ಎಲ್ರಿಗೋಸ್ಕರ ಬದ್ಕೋಕಾಗಲ್ಲ
ಒಬ್ರಿಗೆ ಒಂದು ಇಷ್ಟ ಅದ್ರೆ ಇನ್ನೊಬ್ರಿಗೆ
ಇನ್ನೊಂದ್ ಇಷ್ಟ ಆಗಲ್ಲ
ಇನ್ನೊಬ್ರಿಗೋಸ್ಕರ ಬದ್ಕೋದನ್ನ
ಬಿಟ್ಟಾಗ ನಮ್ ಜೀವನ ಶುರುವಾಯ್ತದೆ
ಮೋಸ ಯಾರ್ ಬೇಕಾದ್ರು ಮಾಡ್ತಾರೆ ನಂಬಿಕೆ ದ್ರೋಹ ನಮ್ ಜೊತೇಲಿರೋರು ಅರ್ಥ
ಮಾಡ್ಕೊಂಡೊರೆ ಮಾಡ್ತಾರೆ
𝓢𝓸 𝓦𝓱𝓪𝓽 𝓘 𝓽𝓮𝓵𝓵𝓲𝓷𝓰 𝓚𝓷𝓸𝔀
ಸ್ವಾವಲಂಭಿಯಾಗಿ ಒಬ್ರೇ ಬದ್ಕೋದ್ ಕಲಿರಿ 😎-
ನೆನಪಿರಲಿ ಸತ್ತರೂ ಸಾಕ್ಷಿ ಕೇಳುವ ಜನರಿರುವರು
ನಕ್ಕರೂ ಕಾರಣ ಕೇಳುವ
ಸಮಾಜವಿದು.
ಯಾವುದಕ್ಕೂ, ಯಾರಿಗೋಸ್ಕರನೂ
ನೆಮ್ಮದಿ ಕಳ್ಕೊಬೇಡ.-
ಹೂಂ
ಎಲ್ಲರ ಬೆನ್ ಹಿಂದೆ ಒಂದು ಕಥೆ ಇರುತ್ತೆ.
ಒಂದು ಕಷ್ಟ ಇರುತ್ತೆ ಆ ಕಷ್ಟವನ್ನ ಎದುರಿಸಿ ಮೆಟ್ಟು ನಿಂತು ಅದು ಇಲ್ಲದ ಹಾಗೇ ನಕ್ಕು ಬದುಕನ್ನ ಸವಾಲಾಗಿ ತಗೋಳೋದೆ ಬದುಕು.
ಇಷ್ಟು ವರುಷಗಳಲ್ಲಿ ನಾ ಕಂಡು ಕೊಂಡ ಮೂರ್ನಾಲ್ಕು ಸತ್ಯಗಳು.
* ಜೀವನ ಒಂದು ಉತ್ಸವ
ಹಾಡೋದೊಂದು, ಸಂಭ್ರಮ, ಹೂ ಅರಳೋದು ಒಂದು ಸಂಭ್ರಮ, ಅದನ್ನ ನೋಡುವ ದೃಷ್ಟಿ ನಮಗೆ ಬರಬೇಕು.
* ಒಂದು ಕೋಟಿ ಜನ ಇದ್ದಾರೆ ಅಂದ್ರೆ ಅಷ್ಟೇ ಕೋಟಿ ಮನಸ್ಸುಗಳಿರುತ್ತೆ, ಅಷ್ಟೇ ಕೋಟಿ ಆಸೆಗಳು, ಆಕಾಂಕ್ಷೆಗಳು, ಪರ, ವಿರೋಧಗಳ ನಿಲುವುಗಳಿದೆ. ನಿಮ್ಗೆ ಸರಿ ಅನ್ಸುದ್ರೆ ಒಪ್ಕೋಳಿ ಇಲ್ಲ ಅಂದ್ರೆ ಬಿಟ್ಟಾಕಿ.
* ಅಂಗ್ಲಾಚ್ಕೊಂಡು, ಆತ್ಮ ಗೌರವ ಬಿಟ್ಟು ನಿಮ್ಗೆ ಬೆಲೆ ಸಿಗ್ಲಿಲ್ಲ ಅಂದ್ರು ಅಲ್ಲೇ ಇರಿ ಆರಾಮಗಿರಿ ಅಂತ ಹೇಳೋರಿಗೇನ್ ಗೊತ್ತಿದೆ ವಾಸ್ತವದಲ್ಲಿ ನಮ್ಗೆನಾಗಿದೆ ಅಂತ.
* I don't care
ನೋಡೋರು ಏನ್ ಅಂತಾರೆ ಅಂತ
I care myself
ಜೀವ ನಂದು ಗುರು ನೋಡೋರ್ದಲ್ಲ.
At lost ಗೊತ್ತಿಲ್ಲ ಹೃದಯವಂತು ಒಡೆದು ಹೋಗಿದೆ ಆದ್ರೂ ಹೃದಯ ಒಡೆದವರು ಇನ್ನೂ ಹೃದಯದಲ್ಲೇ ಇದ್ದಾರೆ.
ಪ್ರೀತಿ ಅಂದ್ರೆ
ಋಣ ಇದ್ರೆ ಸಿಗೋದಲ್ಲ
ಪ್ರಯತ್ನ ಪಟ್ಟು ಪಡ್ಕೊಳೋದು.-
ಸರಿ ತಪ್ಪುಗಳನ್ನ ಹುಡುಕುತ್ತಾ ಕುಂತರೆ ಯಾವ ಸಂಬಂಧವು ಉಳಿಯಲ್ಲ..
ನಂಬಿಕೆಯಿಂದ ಜೊತೆಗಿದ್ದರೆ ಯಾವ ಸಂಬಂಧವು ದೂರಾಗಲ್ಲ.-
ಆತ್ಮಗೌರವದಿಂದ ಬದುಕಬೇಕು ಅನ್ನೊಂಡೆ
ಅಹಂಕಾರಿಯದೆ....
ಮನ ಬಿಚ್ಚಿ ಮಾತನಾಡಬೇಕು
ಅನ್ನೊಂಡೆ ಸಂಸ್ಕಾರವಿಲ್ಲದವಳಾದೆ...
ಮೌನವಾಗಿದ್ದು ಬಿಡಬೇಕು
ಅಂದುಕೊಂಡೆ ಅಪರಾಧಿಯಾದೆ...
ನನಗಾಗಿ ಬದುಕಬೇಕು ಅಂದುಕೊಂಡೆ ಸ್ವಾರ್ಥಿಯಾದೆ...
ಸಾಧನೆಯ ಹಾದಿಗೆ ಇಳಿಯಬೇಕೆಂದುಕೊಂಡೆ ಹಾದರದ ಹೆಸರು ಪಡೆದೆ...
ಬರಹದೊಳಗೆ ಉಸಿರಾದವಳು..
ಕೇವಲ ಜೀವವಿದ್ದು ಜೀವವಿರದ
ಭಾವದವಳಾದೇ.....!-
ಅವಶ್ಯಕತೆ ಇದ್ದಾಗ ನನ್ನವಳು ಎಂದವನು ಅವಶ್ಯಕತೆ ಮುಗಿದ ಮೇಲೆ ಸೂಳೆ ಅಂದನಂತೆ
ಓ ಹೆಣ್ಣೆ ಪ್ರೀತಿಯಲ್ಲಿ ಬೀಳುವಾಗ ಎಚ್ಚರಿಕೆ
ನಿಜ ಸೂಳೆ ಒಂದೇ ಪದ ಅಲ್ಲಾ ಇನ್ನು ಕೆಲವು ಬೈಗಳು ಕುಡ ಬೈತಾರೆ.
-
ಬರೋವಾಗ ಬಿಳಿ ಬಟ್ಟೆ ಹೋಗುವಾಗಲು ಬಿಳಿಯದೆ ಬಟ್ಟೆ,, ಇವೆರೆಡರ
ನಡುವೆ ಬಣ್ಣ ಬಣ್ಣದ ಆಸೆ,ಅಸೂಯೆ,
ಅಹಂಕಾರವ ಕೊಟ್ಟೆ..
ಈ ಆಟವ ಅರಿತ ಮೇಲೆಯೇ
ನಿನ್ನ ಮುಂದೆ ಬೆತ್ತಲೆಯಾಗಿ
ನಿಂತು ಬಿಟ್ಟೆ....!
-