Vijayalaxmi S  
251 Followers · 31 Following

read more
Joined 5 June 2022


read more
Joined 5 June 2022
28 FEB AT 22:08

ಕಷ್ಟ ಸುಖ, ನೋವು ನಲಿವುಗಳೆಲ್ಲವು ಇದ್ದರೂ, ಎಲ್ಲವನ್ನು ಸ್ವೀಕರಿಸಿ ಜೀವನವನ್ನು ಸಾಗಿಸುತ್ತಾ,
ತಿಳಿನೀರಿನಂತೆ ಹರಿಯುವ ನದಿಯಂತಿರಬೇಕು
ನಮ್ಮ ಈ ಬದುಕು.

-


28 FEB AT 22:00

ಯೋಚನೆಗೆ ಆಳವಾದ ವಿಚಾರ,
ಮನಸ್ಸಿಗೆ ಹೊರಲಾರದ ಭಾರ.

-


9 FEB AT 22:03

ಸಹನೆಯ ಕಟ್ಟೆ ಒಡೆದು,ಮನದಲ್ಲಿ ಬಚ್ಚಿಟ್ಟ ಅದಮ್ಯ
ನೋವು,ಕಣ್ಣೀರಾಗಿ ಹರಿಯುವ ವ್ಯಥೆ.

-


6 FEB AT 22:12

ಭವಿಷ್ಯದ ಬಗ್ಗೆ ಮೂಡುವ ಹೊಸ ಹೊಸ ಕನಸು,
ರಂಗನ್ನು ತುಂಬಿ ಮನದಲ್ಲೇ ಚಿತ್ರಿಸುವ ಮನಸ್ಸು.

-


5 FEB AT 20:21

ಅದ್ಹೇಗೆ ವಾಲಲಿ ನಿನ್ನತ್ತ ಮನದ ಸಮೇತ,
ನೀ ಕೇಳಿದರೂ, ನನಗಿರದೆ ಹೋದರೆ ಸೆಳೆತ.

-


5 FEB AT 20:17

ವಿಷಯದ ಬಗ್ಗೆ ಸರಿಯಾದ ಸ್ಪಷ್ಟತೆ ಇಲ್ಲದೆ, ಅಸ್ತವ್ಯಸ್ತವಾಗಿರುವ ಯೋಚನೆಯೇ ಗೊಂದಲ.

-


6 DEC 2024 AT 21:48

ಸೋಲೇ ಗೆಲುವಿಗೆ ಸೋಪಾನ.
ಬದುಕಲ್ಲಿ ಗೆಲ್ಲಲು ಅನುಭವಗಳು ಬೇಕೇಬೇಕು.
ಅನುಭವ ಪ್ರಯತ್ನದಿಂದ ಲಭಿಸಿ, ಜ್ಞಾನ ವೃದ್ಧಿಯಾಗುವುದು. ಜ್ಞಾನವೇ ಗೆಲುವಿಗೆ ದಾರಿ.

-


6 DEC 2024 AT 21:40

ಸಾವನ್ನು ಸನಿಹದಲ್ಲಿ ಅರಿತವರಿಗೇ ಗೊತ್ತು,
ಬದುಕಿನ ಸಂಬಂಧಗಳ ಸಂಪತ್ತು,
ಅರಿಯಲಾರದ ಹೊತ್ತು.

-


31 OCT 2024 AT 9:10

ಮನೆಗಳಲ್ಲಿ ಬೆಳಕಿನ ದೀಪ ಬೆಳಗಿದಂತೆ,
ಮನಗಳಲ್ಲಿ ಸಂತಸದ ದೀವಿಗೆ
ಸದಾ ಬೆಳಗಲಿ.
ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು 💥

-


5 SEP 2024 AT 10:15

ಮುಂದೆ ಗುರಿ, ಹಿಂದೆ ಗುರುವಿದ್ದರೆ...
ಕಠಿಣ ವಿದ್ಯೆಯು ಕೂಡಾ ಸುಲಭದ ಹಾದಿ ಎನಿಸುವುದು.
ಗುರುವಿನ ಗುಲಾಮನಾಗುವವರೆಗೂ
ಸಿಗದಯ್ಯ ಮುಕುತಿ.
ಗುರುವಿನ ಸ್ಥಾನವನ್ನು ತುಂಬಿದ ನಿಮಗಿದೋ,
"ಶಿಕ್ಷಕರ ದಿನದ ಶುಭಾಶಯಗಳು"💐💐💐💐💐.

-


Fetching Vijayalaxmi S Quotes