QUOTES ON #ಶಿಕ್ಷಕರದಿನಾಚರಣೆ

#ಶಿಕ್ಷಕರದಿನಾಚರಣೆ quotes

Trending | Latest

ಪುಸ್ತಕ ಪುಟದ ಭಾಷೆಯ
ಮನಮುಟ್ಟುವಂತೆ ಒಪ್ಪಿಸಿ
ಜ್ಞಾನ ಅಜ್ಞಾನದ ಅರಿವಿರದ
ಎಳೆಯರ ಬಾಳ ಬೆಳಕಾಗಿ.

ಕಪ್ಪುಹಲಗೆಯ ಮೇಲೆ ಮಗುವಿನ
ಸ್ವರ್ಣ ಭವಿಷ್ಯವ ರೂಪಿಸಿ
ಛಾಟಿ ಏಟನಿಟ್ಟರು ಚಟವೇರದಂತೆ
ಎಚ್ಚರಿಸಿ, ಸುದಿನಕೊಟ್ಟಿರಿ.

ಲೋಕದ ಮಹಾನಾಯಾಕರ ಸಾಧನೆ
ಕದದ ಕೊಂಡಿಯೇ ನೀವಾಗಿರುವಿರಿ
ಕಾಣದಕಡಲ ದಾರಿಯ ಕರುಣಿಸಿ ದಾಟುವ
ಮಾರ್ಗವ ವಿಧ್ಯೆ ರೂಪದಿ ಕೊಟ್ಟಿರಿ.

ಬಂಧು ಅಲ್ಲದಿದ್ದರೂ ಬಹುಆಯ್ಕೆ
ನೀಡಿದಿರಿ ಬಾಳ ರೂಪಿಸಲು ಗೆಲ್ಲಿಸಿದಿರಿ
ಕೋಟಿ ನಮನವಿತ್ತರೂ ತೀರದು ಗುರುವಿನ
ಋಣ, ಆದರೂ ಇದು ಅಮೃತ ದಿನ.

ಸಮಸ್ತ ಶಿಕ್ಷಕವೃಂದಕ್ಕೆ ಗುರುನಮನ
ಸಲ್ಲಿಸುವ ಸುದಿನ.......🙏🙏🙏
ವಿದ್ಯೇಯನಿತ್ತ ಗುರುಕುಲಕ್ಕೆ ನನ್ನ ವಂದನೆ
ಶಿಕ್ಷಕರ ದಿನಾಚರಣೆಯ ಶುಭಾಶಯಗಳು.

-



💐💐💐💐💐💐💐💐💐💐💐💐💐💐💐💐💐💐💐
ಬಾಳ ಹೆಜ್ಜೆ ಹೆಜ್ಜೆಯಲೂ ಹೊಸತನವ ಕಲಿಸುವ , ದೋಷಗಳ ತಿದ್ದಿ ನವರೂಪ ನೀಡುವ ನನ್ನಯ
ಸಮಸ್ತ ಗುರು ವೃಂದಕೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು 💐💐💐💐💐💐💐💐💐💐💐💐💐💐💐💐💐💐💐

ಶ್ರೀಕೃಷ್ಣನ ಕರದಲ್ಲಿ ರಾರಾಜಿಸುವ ★'ಪಾಂಚಜನ್ಯ'★ ದ ರಹಸ್ಯ ಮತ್ತು ಮೇಳೈಸಿದ ಗುರು - ಶಿಷ್ಯರ ಬಾಂಧವ್ಯದ ಕಿರು ಅವಲೋಕನ ಈ ವಿಶೇಷ ದಿನದಂದು.. ನಲ್ಮೆಯ ಓದುಗರಿಗಾಗಿ..

( ಪೂರ್ಣ ಬರಹ ಕ್ಯಾಪ್ಚನ್ ನಲ್ಲಿದೆ )
👇👇👇👇👇
✍️ ನಯನ ಭಟ್ 💞

-



ನಮಗೆಲ್ಲ ಪಾಠ ಹೇಳಿಕೊಡುವವರು ಟೀಚರ್
ತಪ್ಪು ಮಾಡಿದಾಗ ಇವರೇ ಸರಿಯಾದ preacher
ತರಗತಿಯಲ್ಲಿ ಕೊಡುತ್ತಾರೆ ಉದ್ದುದ್ದ ಲೆಕ್ಚರ್
ಇದೇ ಅವರ ಮುಖ್ಯವಾದ feature...

Read in caption 👇👇👇

-


4 SEP 2020 AT 23:43

ಅಕ್ಕರೆಯಿಂದ ಅಕ್ಷರವ ಕಲಿಸಿ
ಅತ್ತಾಗ ಮಗುವಂತೆ ಸಮಾಧಾನ ಪಡಿಸಿ
ಗೆದ್ದಾಗ ಹುರಿದುಂಬಿಸಿ
ಸೋತಾಗ ಹೆಗಲ ಮೇಲೆ ಕೈ ಹಾಕಿ ಆತ್ಮಸ್ಥರ್ಯ ತುಂಬಿ
ತಪ್ಪಾದಾಗ ತಿದ್ದಿ ಬುದ್ಧಿ ಹೇಳಿ
ಗುರಿಯೆಡೆಗೆ ದಾರಿ ತೋರಿದ
ನನ್ನೆಲ್ಲಾ ಗುರುಗಳಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು🆚

-


5 SEP 2021 AT 20:26

ಅಕ್ಷರದಿಂದ ಅನ್ನ ಆರ್ಜನೆಯ ಪಾಠ ಆಜ್ಞಾಪಿಸಿದ
ಸಮಸ್ತ ಗುರುವರ್ಯರಿಗೆ
ಶಿಕ್ಷಕರ ದಿನಾಚರಣೆಯ ಶುಭಾಷಯಗಳು

(ಕಿರಿಯನ ಭಕ್ತಿಪೂರ್ವಕ ನಮನಗಳು)

-


5 SEP 2022 AT 16:06

ದೀಪ ತಾನು ಉರಿದು ಜಗತ್ತಿಗೆ
ಬೆಳಕು ನೀಡುವ ಹಾಗೆ
ಅಜ್ಞಾನದಿಂದ ಜ್ಞಾನದೆಡೆಗೆ
ಕರೆದೊಯ್ಯುವ ಪ್ರತಿಯೊಬ್ಬ
ಗುರುವಿಗೂ ನನ್ನ ಕೋಟಿ ಕೋಟಿ ನಮನಗಳು

ಯುವರ್ ಕೋಟ್ನಲ್ಲಿರುವ ಎಲ್ಲ ಸಮಸ್ತ ಗುರುವೃಂದಕ್ಕೂ ಶಿಕ್ಷಕರ ದಿನದ ಶುಭಾಶಯಗಳು.

-


5 SEP 2020 AT 9:57

ಶ್ರೇಷ್ಠ ದಾನಗಳಲ್ಲಿ ವಿದ್ಯಾದಾನವೂ ಕೂಡ ಒಂದು.
ಪುಸ್ತಕದ ಅಕ್ಷರ ಜ್ಞಾನವನ್ನು ಮಸ್ತಕದಲ್ಲಿ ಉಳಿಸುವಂತೆ ಮಾಡಿ
ಶಿಕ್ಷಣದ ಮೌಲ್ಯಗಳೊಂದಿಗೆ ಬದುಕಿನ ಪಾಠಗಳನ್ನು ಬೋಧಿಸುತ್ತಾ
ಯಾವುದೇ ಅಪೇಕ್ಷೆ ಇಲ್ಲದೆ ವಿದ್ಯಾರ್ಥಿಗಳ ಏಳಿಗೆಯನ್ನೇ ಸದಾ ಬಯಸುವ
ಎಲ್ಲಾ ಗುರುಗಳಿಗೂ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು

-


5 SEP 2019 AT 11:05

ಗುರುವೇವ ನಿನ್ನ ಚರಣಕೆ
ಶರಣು ಶರಣು ಎನ್ನುವೆವು||
3
ಸಾಯುವವರೆಗೆ ನಮ್ಮ
ರಕ್ಷಣೆಯ ಸದ್ಗುರು ನೀವು.
ಈ ಬದುಕಿನ ಹಾಡಿನ
ಉಚ್ವಾಸ ನಿಶ್ವಾಸ ನೀವು.
ಉಸಿರಿನಾ ಕೊನೆಯವರೆಗೂ
ಮರೆತಿರೆವು ನಾವು ನಾವು.

-


5 SEP 2022 AT 12:23

ತಪ್ಪುಗಳ ತಿದ್ದಿ ಅಕ್ಷರ ಕಲಿಸಿ
ನಡೆ,ನುಡಿ,ಶಿಸ್ತು ತಿಳಿಸಿ
ನನ್ನೊಳಗಿನ ಪ್ರತಿಭೆ ಗುರುತಿಸಿ
ಹಿಂಜರಿದಾಗ ಬೆನ್ನು ತಟ್ಟಿ ಪ್ರೋತ್ಸಾಹಿಸಿ
ಸದಾ ಒಳಿತಾಗಲೆಂದು ಹಾರೈಸಿ
ಆಶೀರ್ವದಿಸಿದ ಎಲ್ಲಾ ಗುರು ವೃಂದಕ್ಕೂ
ನನ್ನ ಧನ್ಯವಾದಗಳು
ಎಲ್ಲಾ ಶಿಕ್ಷಕ ವೃಂದದವರಿಗೂ
ಶಿಕ್ಷಕರ ದಿನಾಚರಣೆಯ ಶುಭಾಶಯಗಳು

-


5 SEP 2019 AT 10:13

ಗುರುವೇವ ನಿನ್ನ ಚರಣಕೆ
ಶರಣು ಶರಣು ಎನ್ನುವೆವು||
1
ಮುಕ್ಕೋಟಿ ದೇವತೆಗಳ
ಶಕ್ತಿ ಸ್ವರೂಪವು ನೀವು.
ಸಾಗರ ಹೃದಯದ
ಸಹನಾ ಮೂರ್ತಿಯು ನೀವು.
ಈ ಕಲ್ಲು ಬಂಡೆಯಾ
ಕೆತ್ತಿದ ಶಿಲ್ಪಿಗಳು ನೀವು.

-