ಪ್ರಸ್ತುತತೆಯಲ್ಲಿ ಜೀವಿಸಿಬಿಡಬೇಕು;
ಅಲಭ್ಯವಾದುದಕೆ ಹಾತೊರೆದರೆ
ಬದುಕು ಮುಂದೆ ಸಾಗಿಬಿಟ್ಟಿರುತ್ತೆ ಅಷ್ಟೇ!
•
#ನಿರೀಕ್ಷೆಗೂ ಮೀರಿ ಅಚ್ಚರಿಗಳೇ ನಡೆಯಬಹುದು
-
ಸಂಗೀತ ಪ್ರಿಯೆ🍁
ನೆಮ್ಮದಿಯ ಉಸಿರು ! ಆರಾಧ್ಯ ಶಿವನ್ಹೆಸರು💙 #ಶಿವಧ್ಯಾನಿ
ಲತೆಯ ಚಿಗುರೊಂ... read more
ಅವನೆಂದರೆ
ಹಿಮವ ಕರಗಿಸೋ
ಮಿಹಿರನಂತೆ!
ನನ್ನ ಮೌನಕೆ
ದನಿಯಾಗ ಬಯಸೋ
ತರಂಗದಂತೆ!
ಹಿಡಿ ಪ್ರೀತಿಗೆ
ವಾಸ್ತವತೆ ಮರೆಸೋ
ಮಾಂತ್ರಿಕನಂತೆ!
ಪದಗುಚ್ಛದಿ
ಉಸಿರಾಗಿ ಮಿನುಗೋ
ಛಂದಸ್ಸಿನಂತೆ!-
ಕದಪುಗಳ ಸೋಕುವ ಕಂಬನಿಯೂ ಅಣಕಿಸುವುದೀಗೀಗ
ಅದಕ್ಕೂ ನಿನ್ನಂತೆ ಹೊಸ ಖಯಾಲಿ ಶುರುವಾಗಿದೆ ಗೆಳೆಯ!
ಹಾಂ! ಕೇಳುವುದನ್ನೇ ಮರೆತಿದ್ದೆ;
ಅಪರಿಚಿತನ ಸೋಗು ಹಾಕಿ ಮರೆಮಾಚಿಕೊಳ್ಳುವ ಮುನ್ನ
ತರಾತುರಿಯಲ್ಲಿ ಪರಿಚಿತನಾಗುವ ಉಸಾಬರಿ ಏಕೆ ಬೇಕಿತ್ತು?-
ಒಲವನ್ನಷ್ಟೇ ಚಿವುಟಿ ಹಾಕಿದ್ದು;
ನೆನಪುಗಳಿನ್ನೂ ಚಿಗುರುತ್ತಲೇ ಇವೆ!
•
ಬಿಂಬವನ್ನಷ್ಟೇ ಕದಡಿದ್ದು;
ಅವನಿನ್ನೂ ಬೆಳಗುತ್ತಲೇ ಇದ್ದಾನೆ!-
ತನ್ನ ಅಸ್ತಿತ್ವವನ್ನೇ ಉಳಿಸಿಕೊಳ್ಳಲಾಗದ ಕೆಲವು ಅವಿವೇಕಿಗಳು
ಪರರ ವ್ಯಕ್ತಿತ್ವಕ್ಕೆ ಬೆಲೆಕಟ್ಟಲು ಸರತಿ ಸಾಲಲ್ಲೇ ನಿಲ್ಲುವರಲ್ಲ ಗಾಲಿಬ್!?-
ಒಡಂಬಡಿಕೆಯ ಮಾತೇನಾಗಿರಲಿಲ್ಲ
ಆಣೆ ಪ್ರಮಾಣದ ಪ್ರಮಾದವಿರಲಿಲ್ಲ
ನಿಬಂಧನೆಗಳ ಪರಿವಾಕ್ಯವೇ ಇರಲಿಲ್ಲ;
•
ಆದರೂ ನೀ ಮನದೊಳಗೆ ಕಾಲಿಟ್ಟೆ!
ಮತ್ತೀಗಾ ನನ್ನ ಅನುಮತಿಯ ವಿನಃ
ಹೊರಗ್ಹೋಗುವ ರಹದಾರಿಯ ಆವ
ಸುಳಿವೂ ಸಹ ಸಿಗಲಾರದು ಗೆಳೆಯ!-
ಕುಲುಮೆಯಲಿ ಬೆಂದ ಕಬ್ಬಿಣಕ್ಕಾದರೂ ಮುಕ್ತಿ ಸಿಕ್ಕೀತು;
ಪ್ರತಿಘಳಿಗೆಯೂ ಇರಿಯುವ ನೋವ ಕಾವಿಗೆ ಕೊನೆಯೇ ಇಲ್ಲ ಗಾಲಿಬ್!-
ಸಂಬಂಧಗಳೆಂದರೆ ಮಣ್ಣಿನ ಪಾತ್ರೆಗಳಂತೆ!
ಅತಿ ಹೆಚ್ಚೇ ಸ್ವಾದ; ಸೂಕ್ಷ್ಮತೆಯೂ ವಿಪುಲ
ಜತನವಾಗಿಟ್ಟುಕೊಂಡಷ್ಟು ಮೌಲ್ಯ ಅಧಿಕ-