ಆದಿತ್ಯ ss   (✍️ Mr_ಆದಿತ್ಯ)
271 Followers · 173 Following

read more
Joined 20 May 2021


read more
Joined 20 May 2021
2 DEC 2021 AT 14:13

ಇವಳೇ ನೀನೊಮ್ಮೆ ನಕ್ಕರೇ ಸಾಕು.!
ಮೇಘವೇ ಧರೆಗಿಳಿದೂ ಮಳೆಹನಿ ಸೋಕಿ
ಬೇಲಿ ಸಾಲಿನ ಬಳ್ಳಿಯಲಿ ಹೂಜಾತ್ರೆ ಜರಗುತ್ತದೆ..

-


12 NOV 2021 AT 21:02

ತೇಯುವ ಕಲ್ಲು ನೀನಾದರೆ,
ಸುಗಂಧ ಸೂಸುವ ಶ್ರೀಗಂಧ ಅವಳಲ್ಲವೆ..!

ಭಯದಿ ಬೇವರುವ ಬಡವ ನೀನಾದರೆ,
ಅಭಯದ ಜೇನ ತಿನಿಸುವ ಸಿರಿವಂತೆ ಅವಳಲ್ಲವೆ..!

ಆಲಸ್ಯದಿ ಬಳಲುವ ಬೇನಿಗ ನೀನಾದರೆ,
ಅನುಗ್ರಹದ ಹಸ್ತ ನಿರಿಸುವಳು ತಾಯಲ್ಲವೆ..!

-


7 AUG 2021 AT 23:28

ಕರುಳಬಳ್ಳಿಯು ಕಣ್ಣೀರು ಸುರಿಸಿತ್ತು
ಹಿರಿಜೀವಗಳ ವೃದ್ಧಾಪ್ಯದ ಜೀವನೋಪಾಯಕ್ಕೆ..,
ಕಾಣದಾದ ಕಣ್ಣುಗಳ ಕಣ್ಣೀರಿಗೆ..,
ಬರಡಾದ ಬಡತನಕ್ಕೆ..,
ಅಳಿಯದ ನೋವಿಗೆ..,
ಒಪ್ಪತ್ತಿನ ಕೂಳಿಗೆ....!!

-


9 JUL 2021 AT 13:38

ಹೃದಯ ಈಗಲೂ ಅವಳ ನೆನಪುಗಳ ಅಳಿಸಲು ಒದ್ದಾಡುತ್ತಿದೆ,
ಅವಳು ಬಿಟ್ಟುಹೋದ ಯಾವ ನೆನಪಿಂದ ಶುರು ಮಾಡಬೇಕೆಂದು....!

-


15 JUN 2021 AT 15:40

ನೆಕ್ ಗೇ ನೆಕ್ಲೇಸ್ ಬೇಕನ್ನೊ
ಕಾಸ್ಟ್ಲಿ ಹುಡಗಿರ ಮಧ್ಯೇ..,

ಜಾತ್ರೆಲಿ ಜುಮ್ಕಿ ಕೊಡ್ಸಿದ್ರು
ಖುಷಿ ಪಡೊ ಸಿಂಪಲ್ ಹುಡ್ಗಿ ನನ್ನೊಳು...

-


2 DEC 2021 AT 11:23

ಅವಳು..ಮೋಡದೊಳಗಿರೊ ಮಳೆಹನಿ,
ಅವನು..ಕಲ್ಲೊಳವಿತು ಕುಳಿತ ಮರಳು,
ಪರಿಚಯವಿಲ್ಲದೆ ವರ್ಷದಿಂದಾಗಿ ಇದಿರಾದರು.!
ಮಳೆಹನಿಗೂ, ಮರಳಿಗೂ ಈಗ ಪ್ರೇಮ ಪ್ರಸಂಗ
ಒದ್ದೆಯಿಂದಾಗಿ ಸೂಸುವ ಆ ಸುವಾಸನೆಯೇ ಸಾಕ್ಷಿ
ಅವರಿಬ್ಬರ ಒಲವಿನ ಸರಸಕ್ಕೇ.!!

-


24 NOV 2021 AT 11:15

ನನ್ನೆದೆಯ ಬೀದಿಯಲಿ ಗಸ್ತು ತಿರುಗಿದವಳಿಂದು,
ಬೇರೊಂದು ಬೀದಿಯ ಎದೆಯೇರಿ ಕುಂತವಳೇ ಕಯ್ಕೂಲಿಗಾಗಿ..!!

-


18 NOV 2021 AT 11:52

ಮಾರು ಮಾರು ಮೂವತ್ತು;
ಮುದ್ದು ಮಲ್ಲಿಗೆ ಮಾರು;
ಮುಡಿಗೆ ಮುಗಿ ಮಾರು;

-


17 NOV 2021 AT 12:10


ಅವಳ ಮುಂಗುರುಳು ಸದ್ದಿರದೇ ಬಿಕ್ಕಿವೆ;
ಅವನ ಎರಡಕ್ಷರದ ಹೆಸರ ಅಳಿಸಿಹಾಕಿದ
ಕಿಡಿಗೇಡಿ ಅಲೆಯ ಕಂಡು..!!

-


16 NOV 2021 AT 16:13


ನನ್ ಏನ್ ನಿನ್ ಹಾರ್ಟ್ ನಾ ಕದಿತಿರಲಿಲ್ಲ,
ಅವಳು ಕಳ್ಳಿ; ನನ್ ಹಾರ್ಟ್ಗೇ ಹಾರ್ನ್ ಹೊಡೆದ್ಳು..!!

-


Fetching ಆದಿತ್ಯ ss Quotes