ಸರ್ವರಲ್ಲೂ ನಾನು ಎಂಬುದ ತೊರೆದು
ನಾವು ಎನ್ನುವ ಸರ್ವಶಕ್ತಿಯ ಬಿತ್ತುವವನೇ
ನಿಜವಾದ ಮಾನವತೆಯುಳ್ಳ "ಮಾನವ" ❤️💙
👉ಆಡಿಬರಹವನ್ನೊಮ್ಮೆ ಗಮನಿಸಿ👇-
''ಆಕಾಶದ ನೀಲಿಯಲ್ಲಿ
ಚಂದ್ರ ತಾರೆ ತೊಟ್ಟಿಲಲ್ಲಿ
ಬೆಳಕನಿಟ್ಟು ತೂಗಿದಾಕೆ
ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ಎಂದರೆ ಅಷ್ಟೇ ಸಾಕೆ?...''
ಎಂದು ಎದೆ ತುಂಬಿ ಹಾಡಿದ
ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ
ಅವರ ಜನ್ಮ ದಿನ ಇಂದು.
ರಾಷ್ಟ್ರಕವಿ ಡಾ|| ಜಿ.ಎಸ್. ಶಿವರುದ್ರಪ್ಪ ಅವರ ಜನ್ಮದಿನದಂದು ಅವರಿಗೆ ಗೌರವಪೂರ್ಣ ಪ್ರಣಾಮಗಳು. ಕನ್ನಡ ಸಾಹಿತ್ಯ ಲೋಕಕ್ಕೆ ಅವರು ನೀಡಿದ ಅಪಾರ ಕೊಡುಗೆಗಳನ್ನು ಸ್ಮರಿಸೋಣ..🙏❤️-
ಕನ್ನಡದ ಹೆಮ್ಮೆಯ ಕವಿ,
ಲೇಖಕ ಪ್ರಬುದ್ಧ ವಿಮರ್ಶಕ,
ರಾಷ್ಟ್ರಕವಿ ನಾಟಕಕಾರ
ಸಮನ್ವಯ ಕವಿಗಳಲ್ಲಿ
ಒಬ್ಬರೆಂದು ಗುರುತಿಸಲಾಗುವ
ಕನ್ನಡದ ನಿಷ್ಠಾವಂತ ಹೋರಾಟಗಾರ
ಉತ್ತಮ ಪ್ರಾಧ್ಯಾಪಕ,
ಡಾ. ಜಿ.ಎಸ್ ಶಿವರುದ್ರಪ್ಪನವರ
ಜನ್ಮ ದಿನೋತ್ಸವದ ಹಾರ್ದಿಕ
ಸವಿನೆನಪಿನ ಶುಭಾಶಯಗಳು.
ಅವರ ಹುಟ್ಟು ಹಬ್ಬಕ್ಕೆ
ನನ್ನ ಭಾವಪೂರ್ಣ ನಮನಗಳು.
🎂🎂🎂🙏🙏🙏💐💐💐-
ವಿಶ್ವಕ್ಕೆ ಮಾದರಿಯಾಗಿ ಕನ್ನಡದ
ಕಂಪನ್ನು ಎಲ್ಲೆಡೆ ಹರಡಿ,ಹಲವಾರು
ಕವಿತೆಗಳ ಮೂಲಕ ಕನ್ನಡದ ಛಾಪನ್ನು
ಮೂಡಿಸಿದ ರಾಷ್ಟ್ರಕವಿ
ಕುವೆಂಪು ಅವರಿಗೇ ಜನ್ಮ ದಿನದ
ಶುಭಾಶಯಗಳು.-
ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲುಮಣ್ಣುಗಳ ಗುಡಿಯೊಳಗೆ..
ಇಲ್ಲೇ ಇರುವ ಪ್ರೀತಿ ಸ್ನೇಹ ಗಳ
ಗುರುತಿಸದಾದೆವು ನಮ್ಮೊಳಗೆ...!
==>ಜಿ ಎಸ್ ಎಸ್ .-
ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ..
ಇಲ್ಲೇ ಇರುವ ಪ್ರೀತಿ ಸ್ನೇಹಗಳ ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆನು ನಮ್ಮೊಳಗೆ..
ಎಲ್ಲಿದೆ ನಂದನ ಎಲ್ಲಿದೆ ಬಂಧನ ಎಲ್ಲಾ ಈ ಇಹದು ನಮ್ಮೊಳಗೆ...-
ಯುಗದ ಕವಿಗೆ ನಮನ
°°°°°°°°°°°°°°°°°°°°°°°°°°°°°°
ಯುಗದ ಕವಿ ಜಗದ ಕವಿ ಎಂದು ಕರೆಯಿಸಿ
ವಿಶ್ವಮಾನವ ಸಂದೇಶವ ನಾಡಿಗಿತ್ತು ಹರಸಿ
ರಾಷ್ಟ್ರಕವಿ ಬಿರುದು ಗಳಿಸಿದ ಸಾಹಿತ್ಯ ರತ್ನ
ಕನ್ನಡದ ಚೆಲುವನ್ನು ಪರಿಚಯಿಸಿದ ಚೇತನ!
ಪ್ರಾಧ್ಯಾಪಕ, ಪ್ರಾಂಶುಪಾಲ, ಉಪಕುಲಪತಿಗಳಾಗಿ
ಮಾನಸ ಗಂಗೋತ್ರಿಯ ಕಟ್ಟಿ ಬೆಳೆಸಿದ ಯೋಗಿ
ರಾಮಾಯಣ ದರ್ಶನಂ, ಕಾಲಕ್ಕೆ ಬೇಕಾದ ದರ್ಶನ
ನಾಟಕಗಳಲ್ಲಿ ವೈಚಾರಿಕ ಸ್ಪರ್ಶವನಿತ್ತು ಹಿರಿತನ.!
ಹೊಸಗನ್ನಡದ ಅಂದವನು ಹೆಚ್ಚಿಸಿದ ಸಾಹಿತಿ
ಅಮೃತತ್ವದ ಸಾರವಿರುವ ಕಾವ್ಯದ ಅನುಭೂತಿ
ಕುವೆಂಪುರವರ ಮಹಿಮೆಯೇ ಸಾಹಿತ್ಯಕ್ಕೆ ಅಪಾರ
ಜನಮಾನಸದಲಿ ಶಾಶ್ವತವೀ ಹೆಸರು ಅಜರಾಮರ.!-
ಮಲೆನಾಡ ಮಡಿಲಿನಲಿ
ಗಿರಿ ಶೃಂಗಗಳ ನಡುವಿನಲಿ
ನವೋದಯದ ಕಾಲದಲಿ
ಶತಶತಮಾನಗಳ ಅಕ್ಷರ ವಂಚಿತರ ಹಟ್ಟಿಯಲಿ
ಉದಯಿಸಿತ್ತೊಂದು ಅಕ್ಷರ ಜ್ಯೋತಿ
ಸಾರಿತೊಂದು ಮನುಕುಲಕ್ಕೆ ನೀತಿ
ಅದುವೇ "ಮನುಜ ಮತ ವಿಶ್ವ ಪಥ".-
ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರ ಜನ್ಮದಿನದ ನೆನಪು:
ಶಿವಮೊಗ್ಗದಿ ಅರಳಿದ ಮೊಗ್ಗು
ಶಿಕಾರಿಪುರದ ಶಿವರುದ್ರಪ್ಪನವರು
ಕನ್ನಡದ ವಿಮರ್ಶಕ, ಸಂಶೋದಕ
ಮೂರನೇ ರಾಷ್ಟ್ರಕವಿ ಇವರು!
ಕಾವ್ಯ ಕುಸುರಿಯ ಮನ
ಇವರ ಸಮಾಗಮ
ದೇವಶಿಲ್ಪನ ಒಲವು
ಗಂಗೆ ಶಿಖರಗಳ ಕರ್ಮಯೋಗಿ
ಸಂಪೂರ್ಣ ಸಿದ್ದರಾಮ!
ಬೆಡಗಿನ ನವೋದಯ
ಸವಿಗನ್ನಡ ಕಾವ್ಯ ಚಿಂತನ
ಪ್ರತಿಕ್ರಿಯಿಸುವ ಗತಿಬಿಂಬ
ಮಹಾ ಕಾವ್ಯ ಸ್ವರೂಪ ಅನುರಣನ!
ಗೋಡೆಗಳೇ ಇಲ್ಲದ ತೆರೆದ ದಾರಿ
ಇವರ ದೀಪದ ಹೆಜ್ಜೆ
ಕಾರ್ತಿಕ ತೀರ್ಥವಾಣಿಗಳು
ತೊರೆದು ಬಿಟ್ಟಿದ್ದವು ಲಜ್ಜೆ!
ಆಹಾ ಏನಿದು ಎದೆತುಂಬಿ
ಹಾಡಿದ ಆ ಸಾಲುಗಳು
ಕಾಡಿನ ಕತ್ತಲಲ್ಲಿ
ಚಕ್ರಗತಿಯ ಹೊನಲುಗಳು!
ವಿಮರ್ಶೆಗೆ ನೀವು
ತೆರೆದಿಟ್ಟ ಅನಾವರಣ
ಸೌಂದರ್ಯ ಸಮೀಕ್ಷೆಗೆ
ನಿಮ್ಮ ಕಾವ್ಯಗಳೇ ಪರಿಶೀಲನ!-