ಮಳೆ ಸುರಿವಸೂಚನೆ ನೀಡಿವೇ
ಬಿಳಿ ಮೋಡಗಳು ಕಪ್ಪಾಗಿವೇ
ಪ್ರಕೃತಿಯಲ್ಲಿ ಪ್ರೇಮ ಸಂಚಲನ ಮೂಡಿಸಿವೇ
ಬಿಳಿ ಮೋಡಗಳು ಕಪ್ಪಾಗಿವೇ
ಎಲ್ಲೆಡೆ ತಂಗಾಳಿಯನ್ನು ಬೀಸಿವೇ
ಬಿಳಿ ಮೋಡಗಳು ಕಪ್ಪಾಗಿವೇ
ಧರೆಯ ಬಾಯಾರಿಕೆ ತೀರಿಸಿವೇ
ಬಿಳಿ ಮೋಡಗಳು ಕಪ್ಪಾಗಿವೇ
ಹನಿಗಳ ಇಂಚರ ಸೃಷ್ಟಿಸಿವೇ
ಬಿಳಿ ಮೋಡಗಳು ಕಪ್ಪಾಗಿವೇ.-
ಅನುರಾಗದ
ಸಂಗೀತದಲೆಗಳಿಗೆ
ತಲೆದೂಗುತಾ
ಬೀಸೋ ತಂಪಾದ
ಸುಳಿಗಾಳಿಗೆ ನಾಚುತಾ
ಒಂದಕ್ಕೊಂದು ಬಿಗಿದಪ್ಪಿ
ಮುತ್ತಿಕ್ಕಿದ ಬಿಸಿಯುಸಿರಿಗೆ
ಸುರಿಸುತಿವೆ
ಪ್ರೀತಿಯ ಹೂ ಮಳೆಯ-
ರಾತ್ರಿ ಬಾನಲ್ಲಿ
ಮೋಡಗಳ ಜೊತೆಯಲ್ಲಿ
ಚಂದಮಾಮನ ಸರಸಾಟ
ಸವಿಯುವ ಕಣ್ಣಿಗಳಿಗೆ
ಅದ್ಭುತ ಹಬ್ಬದೂಟ.-
ಹಾಳಾಗಿ ಹೋಯ್ತಲ್ಲ ನಿದಿರೆ.
ನೆನಪ ಚಾಚಿದರೆ..ಸಿಕ್ಕಬಹುದೇನೋ?
ಮನದಿ ಇದ್ದ ಬಿಳಿಮೋಡ..ಕಪ್ಪಾಗಿ ಕಟ್ಟಿದ್ಯಾವಾಗ?
ಸುರಿಮಳೆಯ ಸೂಚನೆ.
ಕಣ್ಮರೆಯಾದವನ ನೆನೆದು...
ಹೃದಯದ ಬಡಿತ ಅಪಾಯದಲ್ಲಿ.
ಮಿಂಚಿನ ಒಂದು ಕ್ಷಣದಲ್ಲಿ..
ಅವನ ನೆರಳು. ಹೆದರಲೇ?
ಅಪ್ಪಲೇ?ಕನವರಿಕೆಯಲೂ ಕಾರ್ಮೋಡವೇ.
-
ಮೋಡಗಳು ಥೇಟ್ ಕೆಲವು
ಬಂಧಗಳಂತೆಯೆ ಗಾಲಿಬ್ !
ಚದುರಿ ಹೋಗುತ್ತವೆ, ಒಮ್ಮೆಲೇ
ಸಾಲುಗಟ್ಟಿ ಮಳೆ ಸುರಿಸುತ್ತವೆ,
ಭಣಗುಡುವ ಬಿಸಿಲನು ಎದುರು
ತಂದು ನಿಲ್ಲಿಸುತ್ತವೆ...-
ನೆನಪುಗಳೇ ಹಾಗೆ 💭
ಚಲಿಸುವ ಮೋಡಗಳಂತೆ,
ಕೆಲವೊಮ್ಮೆ ಚದುರಿ ಹೊಂಬಿಸಿಲ
ಶಾಖ ತಾಕಿಸುವಂತೆ,
ಹಲವೊಮ್ಮೆ ಕವಿದ ಮೋಡಗಳು ತಾಕಿ
ನಡುವೆ ತುಂತುರು ಮಳೆ ಸುರಿಸುವಂತೆ..!!-
ಮೋಡದೊಡನೆ ಬೀಸುವ ಗಾಳಿಗೆನು ಗೊತ್ತು
ಅದು ಹೊತ್ತು ತರುವುದು ಬರೀ ತಂಪನಲ್ಲ...
ನೀ ಜೊತೆಗಿದ್ದಾಗಿನ ಕಂಪನ್ನು...
ನಿನ್ನ ಧ್ವನಿಯ ಇಂಪನ್ನು...
ಬಿಟ್ಟು ಹೋದಾಗ ಹರಿಬಿಟ್ಟ ಕಣ್ಣೀರ ನೆನಪನ್ನು...
ಅದೇ ನೆನಪಲ್ಲಿ ಸಂಜೆ ಬಿಟ್ಟುಕೊಳ್ಳುವ ಎಣ್ಣೆಯ ನೆಪವನ್ನು ಎಂದು.....-
ಮೇಘ ಮಾಲೆಗಳು ಗಾಂಭೀರ್ಯ ತಾಳಿವೆ,
ಮಿಂಚಿನ ಬಳ್ಳಿಗಳಲಿ ಭರವಸೆಯ ಬೆಳಕುಗಳು ಕಾಣಿಸಿವೆ-
ತಿಳಿಬಾನ ನಭದಲ್ಲಿ
ತಂಪಸೂಸುವ ಹೊತ್ತಲ್ಲಿ
ತಂಗಾಳಿಯ ತಿಳಿಯಲ್ಲಿ
ಮುಗಿಲಿಗೆ ರಂಗಿಲ್ಲ, ಬಾನ
ಮೆತ್ತೆಯಲಿ ನಗುವ ಮಗುವಿಲ್ಲ...
ಸೊಂಪಾದ ಬೆಳಕಿಹುದು
ಸಾಲುಗಟ್ಟಿದ ಮೋಡವೇಕೋ
ಬೆಳ್ಳನೆ ಬಿಳುಚಿಕೊಂಡಿಹುದು
ಸರಿದ ಸಮಯದಲಿ
ಸಂತಸವ ಹೊತ್ತುತರುವ
ಸೋಜಿಗದ ಚೆಂಡಿಲ್ಲ...
ಕಾಣೆಯಾಗಿಹನೇಕೊ
ಕಾರ್ಮುಗಿಲ ಮರೆಯಲ್ಲಿ
ನನ್ನವನೆನುವ ವಿಭಾಕರನು
ಕಂಡಿರೇನು ನೀವೇನಾದರು
ಮುಗಿಲ ಕಡಲ ಆ ನನ್ನ ದೊರೆ
ಕೆಂಗದಿರನನ್ನು...-