ಕದಪಿನ ಮೇಲೆ ಮೂಡಿದ
ಮೊಡವೆ ಚುಡಾಯಿಸಿದೆ ,
ಮುಂಗುರುಳು ಕೆನ್ನೆ
ಸವೆಯುವುದೆಂದು
ಸವರಲು ಹೆದರಿದೆ,
ನಿನ್ನ ನಲ್ಲ ಇಷ್ಟೊಂದು
ಪ್ರೀತಿಯ ಮಳೆ ಸುರಿಸಿ ,
ನಿನ್ನೊಳಗಿನ ಪ್ರೀತಿ ಚಿಮ್ಮಿಸಿ
ಉಕ್ಕಿ ಹೊರ ತೋರಿಸುತಲಿದೆ.-
ನೋವೆಂಬುದೇನೆಂದರಿವಾಗಲು
ದೇಹಕ್ಕೆ ಬಹುದೊಡ್ಡ ಗಾಯವಾಗಲೇ ಬೇಕೆಂದಿಲ್ಲ,
ಮೊಗದಲ್ಲಿ ಮೂಡುವ ಸಣ್ಣ ಮೊಡವೆಯ ಒಡವೆಯೇ ಸಾಕು..-
ಬಳಿ ಹಿಡಿದು ಕೂರಲೇ
ನಾನೊಂದು ದೃಷ್ಟಿ ತಾಕದ ಪುತ್ಥಳಿ,
ಸಾಕಾಗಿ ಹೋಗಿದೆ ಈ ನೋವೀವ
ಮೊಡವೆ ಗುಳ್ಳೆಗಳ ಹಾವಳಿ..
-
ನನ್ನ ನಿನ್ನ ಮೊದಲ ಬಾರಿಯ ಭೇಟಿಯ ತದ ನಂತರ ಇಬ್ಬರ ಮೊಗದಲೂ ಮೊಡವೆ ಮೂಡಿತ್ತಿಲ್ಲವೆ ಅದೇ ಪ್ರೇಮಾಂಕುರವಂತೆ..
-
ಯಾರ್ ಕಣ್ಣ್ ಬಿತ್ತೊ ಏನೋ
ಎಂದೂ ಮೂಡದ ಮುಖದಲ್ಲಿ
ಮೊಡವೆ ಪ್ರತ್ಯಕ್ಷವಾಯ್ತು...!!-
ಮೊಡವೆ ಒಡವೆಯಾಗಿದ್ದರೆ,
ಹದಿನೆಂಟಲ್ಲೇ ಕೋಟ್ಯಧಿಪತಿಯಾಗುತ್ತಿದ್ದೆ,
ಇಪ್ಪತ್ತೆಂಟರಲ್ಲಿ ಬೀದಿಪಾಲಾಗುತ್ತಿದ್ದೆ.-
ಮೂಡಿದೆ ಕೆನ್ನೆ ಮೇಲೆ ಮೊಡವೆ
ಒಲವ ಮುತ್ತಿನ ಒಡವೆ
ಆಗಾಗ ಮುಟ್ಟಿಕೊಳ್ಳುವೆ
ಮುಟ್ಟಿದಾಗ ನಿನ್ನ ನೆನೆಯುವೆ
ಕುತೂಹಲ ನೀನೇ ಕಣ್ಣಾಕಿರಬಹುದು
ಗೊತ್ತಿಲ್ಲದೆ ಹಿಂದಿಂದೆ ಸುತ್ತುವುದು
ಮೊಡವೆ ಪ್ರೀತಿಯ ಗುರುತು
ಬೇರಾರು ಬೇಕಿಲ್ಲ ನಿನ್ನ ಹೊರತು..!!-
ಮೊಡವೆಯ ಗಾಯದೊಡಲೊಳು ಅಡಗಿಹುದು ನೋವು...
ವಾಸಿಯಾಗಲೊಲ್ಲೆ ಎಂದಾಗ ಅರಿವಾಗುವುದು ನೋವಿನ ಕಾವು...-
ಪ್ರಾಯದ ಸೂಚನೆಯಿದು
ಮುಖದಲ್ಲಿ ಮೊಡವೆ ಮೂಡಿಹುದು
ಮದುವೆಯೇ ಇದಕ್ಕೆ ಮದ್ದು
ಆಸೆಗಳೀಡೇರದೆ ಇದು ಮಾಯವಾಗದು-
ಹೆಣ್ಣಿನ
ಮುಖದ
ಮೇಲೆ ನಗು
ಇದ್ದಿದ್ದಕ್ಕಿಂತ
ಹೆಚ್ಚಾಗಿ
ಮೊಡವೆಗಳು
ಇದ್ದಿದ್ದೆ ಹೆಚ್ಚು.
-