ಮನದ ಕಡಲಲ್ಲಿ
ಮೂಕ ಕನಸುಗಳು
ನನಸಾಗದೆ ಉಳಿದು ...
ಮಣ್ಣಿನ ದೋಣಿಯಂತೆ ಕರಗಿತು..
ಯೌವ್ವನದ ಬದುಕಿದು
ಯಾತನೆಯಲ್ಲಿ ನಲುಗಿತು
ಆದರೂ ಭರವಸೆಯೊಂದಿಗೆ
ಬದುಕಿರುವೆ
ಬದುಕುತ್ತಲೇ ಇರುವೆ.
-
ಹೆಚ್ಚಿಗೆ ಹೇಳುವಂತಹ ವಿಷಯ ಏನಿಲ್ಲ
ನಿಮ್ಮಲ್ಲಿ ಏನಾದ್ರೂ ಹೇಳೋದು ಇದ್ರೆ
... read more
ಮುಟ್ಟಿದ್ದೆಲ್ಲ ಚಿನ್ನ ಆಗಲೇಬೇಕು
ಅನ್ನೋ ಉದ್ದೇಶ ನನಗಿಲ್ಲ ಆದರೆ ನಾನು ಮುಟ್ಟೋದೆಲ್ಲ
ಚಿನ್ನನೇ ಆಗಿರಬೇಕು ಅನ್ನೋದೇ ನನ್ನ ಮನದಾಸೆ.-
ಕಾಮನಬಿಲ್ಲು ಬೆಳಕಲ್ಲಿ
ಮನವು ಅರಳಿತು
ಅವಳ ಹೆಜ್ಜೆ
ಗುರುತುಗಳಿಂದ....!!
ಅರ್ಧ ನೆನಪು ಅರ್ಧ ಕನಸು
ನಗುವನ್ನು ಕೊಂದಿತ್ತು
ಹೇಳದೆ ಉಳಿದಿದ್ದ
ಭಗ್ನ ಪ್ರೇಮಿಯ
ಒಡಲಾಳದ ನೋವು
ಬಾನಂಚಿನ ಆಚೆಗೂ
ಕೂಗಿ ಸಾರಿತ್ತು.-
ಅವಳಿಲ್ಲದ
ಆ ಸಂಜೆಗಳ ದಿನಗಳು
ಸುಡುವ ಕನಸುಗಳೊಂದಿಗೆ
ನನ್ನೆದೆಯ ಭಾವನೆಗಳು...!!
ನೆನಪಿನ ಪುಟಗಳಲ್ಲಿ
ಕಳೆದ ದಿನಗಳ ಮೆಲುಕು ಹಾಕಿ
ನಸು ನಗುತ್ತಾ ದಿನಗಳ ಕಳೆದಂತೆ..-
ನಾನು ನಿನ್ನ ,
ಬಳಿ ಬರಲು ಬಯಸುವುದು,
ಪ್ರೀತಿ, ಪ್ರೇಮ, ಸ್ನೇಹ ಎಂಬ ಆತ್ಮೀಯತೆಯಿಂದ
ಅದೇ ನಿನಗೆ ತೊಂದರೆಯಾದರೆ ...!
ಭಯವೇಕೆ ಮನವೇ
ದೂರನೇ ಇರುವೆ ನಾ ಬಲು ದೂರನೇ ಇರುವೆ.
-
ಉಸಿರು ಇದ್ದಾಗ
ನಾನು ನನ್ನದೆಂಬ ಸೊಕ್ಕಿನಿಂದ
ಮರೆಯುವ ಮನ...!
ಸತ್ತ ಮೇಲೆ ಸೊಂಟದ ಮೇಲೆ ಇರುವ
ಉಡುದಾರ ಕಳಚಿ ಹೂತಿಟ್ಟು
ಸಮಾಧಿ ಮೇಲೊಂದು
ಹೂವೊಂದು ಇಟ್ಟು
ಕಾಣೆಯಾದರು ನನ್ನವರೆಂಬ ಜನ.-
ಎಷ್ಟು ವರ್ಷದಿಂದ
ಪರಿಚಯ ಆಗಿದ್ದೀವಿ ಎನ್ನುವುದಕ್ಕಿಂತ.....!!
ಪರಿಚಯ ಆದ ವ್ಯಕ್ತಿಯೊಂದಿಗೆ
ಎಷ್ಟು ಆತ್ಮೀಯವಾಗಿ ಇದ್ದೇವೆ ಎನ್ನುವುದು ಜೀವನದಲ್ಲಿ ತುಂಬಾ ಮುಖ್ಯ.-
ನೋವಿನ ನಂತರದ
ಜೀವನ ನಗುತ್ತಲಿರಬಹುದೆಂದು
ನಂಬಿರುವೇ ....!!
ಬಹುಶಃ ನನಗನಿಸುತ್ತಿದೆ ಇನ್ನಾದರೂ,ಮುಂದಾದರು ಕೊನೆಯಾಗಬಹುದೆಂದೂ
ನೋವಲ್ಲ ನಗುವೇ
ಎನ್ನುವ ನಂಬಿಕೆ.-
ಮಾತಿಗೆ ಬೆಲೆ ಇಲ್ಲದ
ಕಡೆ ಮಾತನಾಡಿ
"Self Respect "
ಕಳೆದುಕೊಳ್ಳುವುದುಕ್ಕಿಂತ
ಮೌನಿಯಾಗಿದ್ದು ,
ನಮ್ಮಷ್ಟಕ್ಕೆ ನಾವು
ಜ್ಞಾನಿಯಾಗುವುದು ಒಳ್ಳೆಯದು.-
"ಹೃದಯವೆಂಬ"
ಮೊಬೈಲ್ ನಲ್ಲಿ ಪ್ರೀತಿಯ
ಹೆಸರಿನ "ಅಪ್ಲಿಕೇಶನ್ " ಒಂದನ್ನು
ಡೌನ್ಲೋಡ್ ಮಾಡಿಕೊಂಡಿದ್ದೆ ,
ಅತಿಯಾದ "ಕಾಳಜಿ ಮತ್ತು ಪ್ರೀತಿ
ಎನ್ನುವ ವೈರಸ್" ಅಟ್ಯಾಕ್ ಆಗಿ
ಅಪ್ಲಿಕೇಶನ್ ಜೊತೆಗೆ ಮೊಬೈಲ್ ಕೂಡ
ಹಾಳಾಗಿ ಹೋಯ್ತು
ಹಾಳಾಗಿ ಹೋಯಿತು.........!-