ಪಯಣ ಶುರುವಾದಂತಿದೆ ನನ್ನವಳ ಕೊನೆಯ ಭೇಟಿಗೆ,
ಕೊಳ್ಳಿ ಇಡಬೇಕಾಗಬಹುದೇ ನನ್ನ ಅವಳ ಇಲ್ಲಿವರೆಗಿನ ನೆನಪಿಗೆ,
ಅಪ್ಪುಗೆ ತಬ್ಬುಗೆ ಆಸೆ ಕನಸುಗಳ ಪ್ರೇಮ ವಿಚ್ಚೇದನ,
ತಲೆಯ ಕೆಡಿಸಿ ದಿಕ್ಕೇ ತೋಚದಂತಾಗಿದೆ ಇನ್ನೇಲ್ಲಿ ವಿಮೋಚನ...
ಅಂದು ಕಂಡ ಕನಸುಗಳೆಲ್ಲಾ ನೀರಲ್ಲಿ ಹೋಮ ಹವನ,
ನನ್ನವಳ ಮನೆಯಲಿ ಮಾತುಕಥೆಯಾಗಿರಬಹುದು ಮದುವೆಗೆ ಅವನ ಇವನ,
ನನ್ನೆಲ್ಲಾ ಇಲ್ಲಿಯವರೆಗಿನ ಪ್ರೇಮಾಂಕುರಕ್ಕೆ ಎಳ್ಳು ನೀರು,
ಕೊನೆಯಾದ ಬಂಧಮುಕ್ತಿಗೆ ಎದುರಾದರೇ ಕೇಳಬಹುದು ನೀನ್ಯಾರು??..
ಒಲ್ಲದ ಮನಸಿನಲಿ ಹಾಡಬೇಕಾಗಿದೆ ಇತಿಶ್ರೀ,
ಅಂದ ಆನಂದದಿಂದ ಕೂಡಿರಲಿ ನಿನ ಜೀವನ ನವ್ಯಶ್ರೀ,
ನೀನಿಲ್ಲಾ ನನ್ನ ಬಾಳಿನಲ್ಲೇನ್ನುವ ವಾಸ್ತವ ಅರಿವಾಗದಿರಲಿ,
ನೀನೆ ಎಲ್ಲಾ ಅಂದುಕೊಂಡು ಜೀವನದಲಿ ಮತ್ಯಾರೂ ಜೊತೆಯಾಗದಿರಲಿ....
ಅನ_ಧಿಕೃತ ದೊರೆ-
Photography
APG
"ಬೆರಳೆಣಿಕೆಯ ಪ್ರೀತಿ,ಅತಿಯಾದ ನೋವು"
ಪಾಪಿ ಚಿರಾಯು
ಕ್ಲಾರಿಟಿ ಇ... read more
ಅವಳೊಂಥರ ಹೃದಯದಲ್ಲಿ ಚುಚ್ಚಿಕೊಂಡ ಗುಂಡು ಪಿನ್ನಿನ ಹಾಗೆ,
ಅವಾಗಿವಾಗೊಮ್ಮೆ ಅವಳ ಚಿತ್ರಪಟವನ್ನು ನೋಡಿದೊಡನೆ ಅವಳ ಚೆಲುವು ಒಲವು ಹಾಳದ ಹೃದಯಕ್ಕೆ ಹಿತವಾಗಿ ಚುಚ್ಚಿದಂತಾಗುವುದು...-
I see u ಅಂದ್ರೆ ನಾನು ನಿನ್ನನ್ನು ನೋಡ್ತಾ ಇದೀನಿ ಎಂದು ಅರ್ಥ,
ICU ಅಂದ್ರೆ ಬೇರೆಯವರು ನಿನ್ನ ನೋಡ್ತಾ ಇದಾರೆ ಅಂತ ಅರ್ಥ..😂😂😂😂😁-
ಬದಲಾದವರನ್ನ ಅವರಂತೆಯೇ ಬದುಕಲು ಬಿಡ್ಬೇಕು,
ಬದ್ಕಿಗೆ ಅದವರನ್ನ ಜೀವನದ ಕೊನೆಯವರೆಗೂ ಅಳವಡಿಸಿಕೊಳ್ಳಬೇಕು..-
ನನ್ನೆದೆಯ ಗರ್ಭಗುಡಿಯ ಒಳಗಡೆ ಪ್ರತಿಕ್ಷಣವೂ ಸಿಂಗಾರಿಸಿಕೊಂಡಿರುವ ಪ್ರೇಮ ದೇವತೆ ಅವಳು,
ನನ್ನ ಹೊಗಳಿಕೆಯೇ ಅವಳಿಗೆ ಪುಷ್ಪಾಲಂಕಾರ,
ನನ್ನ ಮನದ ಭಾವಗಳೇ ಅವಳಿಗೆ ಅಭಿಷೇಕ,
ಅವಳು ಅವಾಗಿವಾಗೊಮ್ಮೆ ನನ್ನ ಮಾತಿಗೆ ಸಿಗುವುದೇ ಅವಳು ಕೊಡುವ ವರ, ಫಲ,ದಯೆ ಎಲ್ಲಾನೂ...-
ಬದ್ಕೋಕೆ ನಂಬಿಕೆಗಳು ಬೇಕು,
ಮನಕ್ಕೆ ಪ್ರೀತಿ ಬೇಕು,
ಹೃದಯಕ್ಕೆ ಭಾವನೆಗಳು ಬೇಕು,
ನನಗೆ ನಿನ್ನ ಸನಿಹವೊಂದೇ ಸಾಕು..-
ಕೆಲವೊಮ್ಮೆ ಅನಿಸುವುದು ಪ್ರೀತಿ ಪ್ರೇಮ ಅಂದ್ರೆ ಹೀಗೆನಾ,
ಹೃದಯದೊಳಗೆ ದ್ವೀಪವೊಂದನ್ನು ಹಚ್ಚಿಟ್ಟಾಂತೆ,
ಒಮ್ಮೊಮ್ಮೆ ದೀಪವು ಹೌದು, ಒಮ್ಮೊಮ್ಮೆ ಜ್ವಾಲೆಯು ಹೌದು...-