ನಾಡಿನ ಗತವೈಭವ ಸಾರುತಿರುವ ಹಬ್ಬದ ವೈವಿದ್ಯತೆ
ನೋಡುಗರ ಕಣ್ಮನ ಸೆಳೆಯುವ ಜಂಬೂಸವಾರಿಯ ಭವ್ಯತೆ
ಭರಪೋರ ಮನರಂಜನೆಯ ಹೊತ್ತು ತರುವ ದಸರದ ಗಮ್ಯತೆ
ಈ ಹಬಕ್ಕೆ ಸಂಭ್ರಮ ಕಳೆಕಟ್ಟುತಿರುವ ಸೌಂದರ್ಯತೆ
ಅಂಬಾರಿಯಲಿ ದೇವಿ ಚಾಮುಂಡಿಯ ಮೆರವಣಿಗೆ
ಕನ್ನಡನಾಡಿನ ಸಂಸ್ಕೃತಿಯ ಜೊತೆಯಲ್ಲೆ ಭಾರತೀಯ
ಸಾಂಸ್ಕೃತಿಕ ಪರಂಪರೆಯ ವಿಶ್ವವಿಖ್ಯಾತಿಗೊಳಿಸುತ್ತಿರುವ
ಪರಿಯಂತು ಅದೆಷ್ಟೊಂದು ಸುಮಧುರವೂ
ಸಾಂಸ್ಕೃತಿಕ ಕಾರ್ಯಕ್ರಮಗಳ ಮೇಳ
ಯುವ ದಸರೆಯ ಮಹಾ ಮೇಳ
ಶಕ್ತಿದೇವತೆಗಳ ಆರಾಧನೆ
ಜಂಬೂಸವಾರಿಯ ಮೇರವಣಿಗೆ ಎಲ್ಲವೂ
ವೈವಿದ್ಯಮಯ ನೃತ್ಯ ˌನಾಟಕ ಪ್ರದರ್ಶನ
ವಿವಿಧತೆಯ ಕವಾಯುತುಗಳು ಪಂಜಿನ ಮೆರವಣಿಗೆ
ಒಂದ ಎರಡಾ ಕಣ್ಮನ ತಣಿಸುವ ನೂರಾರು
ಕಾರ್ಯಕ್ರಮಗಳ ಸಾಲು ಸಾಲು ಪ್ರದರ್ಶನ
ಮೈನೆವರೇಳಿಸುವ ದೃಶ್ಯಗಳು
ಮನಕ್ಕಾನಂದವೂ ನೋಡುಗರಿಗೂ ಸಂತಸ ಸಂಭ್ರಮವೂ!-
ನಮ್ಮೂರಿನಲ್ಲಿ ಕಂಗೊಳಿಸುತ್ತಿರುವ ದೀಪಾಲಾಂಕಾರ,,
ನಮ್ಮೂರ ಸೊಬಗು ಕೈ ಬೀಸಿ ಕರೆಯುತ್ತಿದೆ ಎಲ್ಲರ,,
ಎಲ್ಲಾರು ಒಟ್ಟುಗೂಡಿ ನೋಡುವ ಬನ್ನಿ ನಮ್ಮೂರ ದಸರಾ,,
ನಮ್ಮೂರಿನಲ್ಲಿ ನಾಡಹಬ್ಬವಾದ ದಸರಾನೇ ಬಲು ಸುಂದರ,,
ಎಲ್ಲಾ ವಿಶೇಷತೆಯಿಂದಾಗಿಯೇ ನಮ್ಮೂರಿಗೆ
ಇನ್ನೊಂದು ಹೆಸರೆ ಸಾಂಸ್ಕೃತಿಕ ನಗರ.....
❤😍❤😍❤😍❤😍❤
-
ನೋಡಲು ಹರಿದು ಬಂತು ಜನಸಾಗರ ...
ಆನೆಯ ಮೇಲೆ ಚಿನ್ನದ ಅಂಬಾರಿ ...
ನೋಡಲು ಎರಡೂ ಕಣ್ಣು ಸಾಲದು ಆ ಜಂಬೂಸವಾರಿ ....-
ಮೈಸೂರೆಂದರೆ ಚಂದನ
ಸುವಾಸನೆಯ ನಿವೇದಿಸುವುದು,
ಮೈಸೂರೆಂದರೆ ಮಹಿಷಾಸುರ
ಕೇಡಾದರೆ ಬರುವಳು ಚಾಮುಂಡಿ,
ಮೈಸೂರೆಂದರೆ ರಾಜ ಮಹಾರಾಜರು
ನಾಡು ನುಡಿಗಳ ಪೋಷಿಸಿದವರು,
ಮೈಸೂರೆಂದರೆ ಸಿಹಿ ಸಿಹಿ ಪಾಕು
ನಾಲಿಗೆಯ ಕಹಿ ಓಡಿಸುವುದು,
ಮೈಸೂರೆಂದರೆ ಸಾಂಸ್ಕೃತಿಕ ನಗರಿ
ಸಾಹಿತ್ಯ,ಲಲಿತಕಲೆಗಳ ನೆಲೆವೀಡು,
ಮೈಸೂರೆಂದರೆ ಜಂಬೂ ಸವಾರಿ
ತಾಯಿ ಚಾಮುಂಡೇಶ್ವರಿ ಜಾತ್ರೆ.-
**ಗಜಲ್**
ಮನವನ್ನೆಲ್ಲಾ ಹರುಷಗೊಳಿಸಿದೆ ನವರಾತ್ರಿ
ದೈವಿಕ ಭಕುತಿಯ ರೂಪದಿ ಬಂದಿದೆ ನವರಾತ್ರಿ
ಮನಕೆ ಚೇತನ ಮನೆಗೆಲ್ಲಾ ವಿನೂತನ ಹಬ್ಬ
ನವಬಗೆಯ ಪೂಜೆಯಲಿ ಮಿಂದಿದೆ ನವರಾತ್ರಿ
ನವ ಅವತಾರಗಳದಿ ದೇವಿಯ ಆಗಮನ
ಇಷ್ಟಾರ್ಥಗಳ ಹೊಸಿಲಲ್ಲಿ ನಿಂತಿದೆ ನವರಾತ್ರಿ
ಹಸಿರು ತೋರಣಗಳ ನಡುವೆ ಕಂಗೊಳಿಸಿ
ಭಕ್ತಿಗೆ ಉಸಿರಾಗುತಾ ಒಲಿದಿದೆ ನವರಾತ್ರಿ
ಮನದಲ್ಲಿ ಭಕ್ತಿಭಾವದ 'ಕಾಂತಿ'ಯ ಸೂಸಿ
ಹರುಷದ ಅಮೃತವಿಕ್ಕಿ ಮೇಳೈಸಿದೆ ನವರಾತ್ರಿ-
ನಮ್ಮ ಸೂರು ಸುಂದರ ಮೈಸೂರು
ಮಲ್ಲಿಗೆಯ ಕಂಪು ಎಲೆಯ ಕೆಂಪು
ಸ್ವಚ್ಛ ನಗರಿ ಸಂತೃಪ್ತ ಜನರು
ನಮ್ಮ ನಗರಿ ಮೈಸೂರು
ನಗರದ ತುಂಬೆಲ್ಲಾ ಚೆಂದದ ಮನೆ
ಅದರಲ್ಲಿ ಒಂದು ನಮ್ಮ 'ಅರಮನೆ '
ಚೆಂದದಿ ಬಣ್ಣದಿ ಅರಳಿ ನಿಂತ ಹೂಗಳು
ಕೈಬೀಸಿ ಕರೆಯುತ್ತಿವೆ ನಮ್ಮೆಲ್ಲರನು
ಅಂದ ನೋಡಲು ಸಾಲದು ಎರಡು ಕಣ್ಣು
ಹೊಗಳಲು ಪದಗಳು ಸಾಲದು ನಿನ್ನನ್ನು
ಮೈಮರೆಸುವ ಶಕ್ತಿ ನಿನ್ನದು
ನಾ ನೋಡುತ ಕುಳಿತೆ ನಿನ್ನನ್ನು
ಎಂಥಾ ಅದ್ಭುತ ಆ ಶಿಲ್ಪಕಲೆ
ಮೂಡಿಸಿದ ಶಿಲ್ಪಿಗೆ ನನ್ನ ವಂದನೆ
ಏನೆಂದು ಬಣ್ಣಿಸಲಿ ನಾ ನಿನ್ನ
ಮುಂದೆ ಹೇಳಲು ಪದಗಳೇ ಸಾಲುತ್ತಿಲ್ಲ !!
-
ಸಂಭ್ರಮಿಸೋಣ ನಾಡಹಬ್ಬ,
ಕೆಟ್ಟದ್ದರ ವಿರುದ್ಧ ಒಳ್ಳೆತನದ ಗೆಲುವನ್ನು ಆಚರಿಸೋಣ..!
ಸಂಭ್ರಮಿಸೋಣ ನಾಡಹಬ್ಬ,
ಪ್ರಾಚೀನ ಕಾಲದ ಸಂಸ್ಕೃತಿ, ಸಂಪ್ರದಾಯ,
ಆಚರಣೆ, ವೈಭವವ ಉಳಿಸೋಣ..!-
ಮೈಸೂರು ದಸರಾ ವೈಭವ
******************
ಮೈಸೂರು ದಸರಾ
ಎಷ್ಟೊಂದು ಸುಂದರ
ನೋಡುವ ಕಣ್ಣಿನ ಆಯಾಸ ದೂರ
ನಮ್ಮ ಮನಸ್ಸೆಲ್ಲಾ ಆನಂದ ಸಾಗರ
ಚಾಮುಂಡಿ ಬೆಟ್ಟದ ಪ್ರಕೃತಿ ವೈಭವ
ಚಾಮುಂಡೇಶ್ವರಿ ಅಮ್ಮನ ಸಿರಿ ಸಿಂಗಾರವ
ನೋಡುತ ಮನದಲಿ ಚಿಮ್ಮಿತು ಭಕ್ತಿ ಭಾವ
ಅರಮನೆಯ ಅಂದ ಚೆಂದ ನೋಡುತ
ಬೆಳಕಿನ ಮಳೆಯಲಿ ಮನವಾಯ್ತು ತಕದಿಮಿತ
ಸಾಂಸ್ಕೃತಿಕ ಕಾರ್ಯಕ್ರಮದ ಝೇಂಕಾರ
ಮೈಸೂರು ನಗರದಲ್ಲಿ ಮೊಳಗಿದೆ ಓಂಕಾರ
ಬಗೆ ಬಗೆ ಪುಷ್ಪಗಳ ಸೌಂದರ್ಯ ಸವಿಯುತ
ಕಣ್ಣುಗಳಿಗೆ ಸಿಕ್ಕಿತು ಒಲವಿನ ಸಿಹಿ ಹಿತ
ಕಲೆ, ಸಂಸ್ಕೃತಿ, ಸಾಹಿತ್ಯಕ್ಕೆ ಮೈಸೂರೆಂದೆಂದೂ ಅನವರತ
ದಸರ ಮಹೋತ್ಸವದ ನೆನಪೆಂದೂ ನಮಗೆ ಜೀವನಪರ್ಯಂತ.-
ಆ ಚಾಂಮುಡಿ ತಾಯಿಯ ವೈಭವದ ಸಡಗರ
ಎಲ್ಲೆಲ್ಲೂ ಸಂಭ್ರಮಿಸೋ ಪ್ರವಾಸಿಗರ ಸಾಗರ
ಎಲ್ಲೆಲ್ಲೂ ಧ್ವನಿಸಲಿದೆ ತಾಯಿಯ ಝೇಂಕಾರ..
ಇತಿಹಾಸದ ಪುಟದಿ ಸಂಭ್ರಮಿಸೋ ಮೈಸೂರು
ದಸರಾ ಕಾರ್ಯಕ್ರಮ ಕಲೆಗಾರನಿಗೆ ತವರು
-