SINDHU RAJ   (ಮುದ್ದು ಗೊಂಬೆ✍)
368 Followers · 154 Following

ಮನಸ್ಸಿಗೆ ತೋಚಿದಂತೆ ಗೀಚುವ ಮುದ್ದು..❤ ಈ ಮುದ್ದು ಗೊಂಬೆ ಧರೆ ಕಂಡ ದಿನ dec 2th🌹.
Joined 7 April 2019


ಮನಸ್ಸಿಗೆ ತೋಚಿದಂತೆ ಗೀಚುವ ಮುದ್ದು..❤ ಈ ಮುದ್ದು ಗೊಂಬೆ ಧರೆ ಕಂಡ ದಿನ dec 2th🌹.
Joined 7 April 2019
26 DEC 2023 AT 23:40







ಅವಳೂ ಸ್ವಲ್ಪ ಕಡಿಮೆ ಹೈಟು😜,,
ಮೇಕಪ್ಪಿಲ್ಲದೆಯೇ ನೋಡೋಕೆ ಸಕ್ಕತ್ ಕ್ಯೂಟು😚,,
ಮಾತು ತುಸು ಹೆಚ್ಚಾದರೂ,ತುಂಬಾ ಸಾಫ್ಟು😊,,
ನಿಷ್ಕಲ್ಮಶ ಮನವಿದು ಬಲು ಸ್ವೀಟು😍,,
ಕೋಪಕಂತು ನೆಲೆಯೇ ಇಲ್ಲದ ಹಾರ್ಟು♥️..


- ಸಿಂಧುರಾಜ್✍️




-


9 DEC 2023 AT 1:27








ಮನಕ್ಕಿಗ,ನೀ ನನಗೆ ಮೀಸಲೆಂಬ ಭ್ರಮೆಯ ಕನವರಿಕೆ,,
ನಿನಗಿಲ್ಲದ ಎನಗೆ ಅತಿ ಪ್ರೀತಿಯಾದರು ಏಕೆ?
ಏಕಿದು,ನೀ ನೆಚ್ಚದ,ನಾ ಮೆಚ್ಚಿದ ಬಲು ಬಯಕೆ,,
ಕಲ್ಲುಮನವು ಕುರುಡು,ತಣಿಸಲು ನನ್ನೊಲವ ಬಳಲಿಕೆ,,
ಬಂಧದಲಿ,ಬಿಗಿಯಾಗದೆ ಬೇರೂರಿದೆ,ನಂಬಿಕೆಯ ಸಡಿಲಿಕೆ..

- ಸಿಂಧುರಾಜ್✍️







-


8 DEC 2023 AT 0:12




ಇದೊಂದು ಬರೆ ಬಣ್ಣದ ಜನರ ಬಯಲು,,
ನಲಿಯುತಿದೆ ನಕಲು, ಎತ್ತೆತ್ತಲು,,
ಅಸಾದ್ಯ ಕೆಲ ಕೊಳಕು ಮನವ ಅರಿಯಲು,,
ಬಿಕ್ಕಟ್ಟಾಗಿದೆ,ಯಾರ ನಂಬುವುದೆಂಬ ಇಕ್ಕಟಿನ ಸವಾಲು..


- ಸಿಂಧುರಾಜ್✍️




-


21 OCT 2023 AT 1:46





ಇಂದಿಗಂತ್ಯವದು,ಎನ್ನುವುದು ನನ್ನವಳು,
ಅರಿಯಳಾದೆ, ನಾನವಳ ಪ್ರೀತಿಯ ಮರುಳು,,
ಸದಾ ಹಸನಾಗಿರಲಿ ಅವಳಿಷ್ಟದ ಬಾಳು,,
ಎಂದೂ ಸಿಹಿಯಾಗಿರಲಿ ಬಯಕೆಯ ತಿರುಳು......♥️


- ಮುದ್ದುಗೊಂಬೆ✍️






-


30 MAY 2023 AT 17:42

ಅತಿಶಯವಾಗಿ ಬೀಸಿದೆ ನೆನಪಿನ ಚಾಟಿ,,
ದಿನಂಪ್ರತಿಯ ಒಮ್ಮೆಯಾದರೂ, ನೀ ಜ್ಞಾಪಕ ಹೃದಯ ಮೀಟಿ,,
ಯಾರಿಹರು..? ಈ ಮನಕೆ ನೀನಲ್ಲದೆ ಸರಿಸಾಟಿ.....✍️❤️‍🩹

-


23 MAY 2023 AT 17:29

ಯಾರ ದೃಷ್ಟಿಯೊ? ಇಲ್ಲ, ಬದಲಾವಣೆಯೊ? ಈ ವಿರಹಕೆ,
ಪಾಪ,,ಪರಿತಾಪವಂತೆ ನಿನ್ನ ವಿಯೋಗ ಈ ಕಣ್ಮನಕೆ,
ಎಂದೂ ನಗುತಿರು ಇದು ಇವಳಿತ್ತ ಹರಕೆ,....🤝❤️‍🩹


- ಮುದ್ದುಗೊಂಬೆ✍️








-


23 MAR 2023 AT 8:42

ಕಾರಣವಿಲ್ಲದೆ ಯಾವುದೋ ನೆಪವಾಗಿ ನೆನಪಾಗೊ ಕುರುಹು ನೀನು🥺...
ಕಣ್ಮನದ ಕಣ ಕಣದಲ್ಲೂ ಬೆರೆತಿರುವ ಸಹೃದಯಿ ನೀನು😥..
ನನಗಂತೂ ಎಲ್ಲೆ ಮೀರಿದ ನೆನಪಾಗಿ ಮನದಲ್ಲೇ ಅವಿತಿರುವ ಬೆಚ್ಚನೆಯ ಗುಬ್ಬಿ ನೀನು🤐...
ಕಣ್ಮಿಟಿಕಿಸುವುದರಲಿ ಕಣ್ಮರೆಯಾದ ನನ್ ಒಲವಿನ ಕಣ್ಮಣಿ ನೀನು 😭...
Misss u Racchu 🥺😭😭😥..

-


27 DEC 2022 AT 18:13

ಒಂತರಾ, ಪ್ರೀತಿ ಇದು ನಿಷ್ಕಲ್ಮಷ,,
ವಿರಹದ ತೀರದಲ್ಲಿ ಉದಯವಿದು ವಿಸ್ಮಯದ ವಿಶೇಷ,,
ಭಾವಕ್ಕೆ ಭಾಸವು, ಇದೊಂದೇ ಅಂತ್ಯಕುಳಿಯುವ ಶೇಷ,,

-


11 DEC 2022 AT 11:00

ಎಂದೆನ್ನ ಬಯಕೆ,ಸುಗಮವಾಗಿರಲಿ ಪಯಣ,
ಈ ವಿರಹದಿ ಬೀಸದಿರಲಿ ನೋವಿನ ಗಾಣ,
ಹಲವ ಮರೆತು,ಕೆಲವ ಬೆರೆತು ಸಾಗಲಿ ಮುಂದಿನ ಪ್ರತಿ ಕ್ಷಣ,
ಏಕಾಂತ ಬತ್ತಿ, ಹರ್ಷವೆ ನಿನ ಸುತ್ತಿ ಬಾಳಾಗಲಿ ಸಿಹಿಯ ಹೂರಣ.

-


6 AUG 2022 AT 22:06












ಬಡಿಸಿದೆ,ಪ್ರೇಮವೆಂಬ ರಸದೌತಣ ಉಣಲು,,
ಬಿತ್ತಿದೆ, ಮರೆವಿಗು ಮರೆಯಲಾಗದ ಪ್ರೀತಿಯ ಒನಲು,,
ತೆರೆದೆ,ಅನನ್ಯವಾದ ಅನ್ಯುನತೆಯ ಅನುರಾಗದ ಮಜಲು.....❤️

- ಮುದ್ದುಗೊಂಬೆ✍️




-


Fetching SINDHU RAJ Quotes