QUOTES ON #ಮುಂಗಾರುಮಳೆ

#ಮುಂಗಾರುಮಳೆ quotes

Trending | Latest
3 MAY 2020 AT 10:18

ಮುಂಗಾರಿನ ಮಳೆ
ಸಂಗಮದಲಿ ಬೆಳೆ
ದಂಗಾದ ಕೊಳೆಯು ಕೊಚ್ಚುತಿದೆ/
ಬೆಂಗದಿರನ ಕಳೆ
ತಂಗಾಳಿಯ ಸೆಳೆ
ಕಂಗಳ ಕಾಂತಿಯು ಚಿಮ್ಮುತಿವೆ//

ಚಿಗುರುತಿವೆ ಹಸಿರು
ಜಿಗಿಯುತಿವೆ ಮನವು
ನಿಗಿನಿಗಿ ಕಾಮನ ಬಿಲ್ಲಿನಲಿ/
ನೆಗೆಯುತ ನಲಿಯುತ
ಧಗೆಯನು ತಳ್ಳುತ
ತಗಾದೆ ತೆಗೆಯದೆ ತಂಪಿನಲಿ//

ರೈತನ ಬದುಕಲಿ
ಜತನದ ಚಿಂತೆಯು
ಹಿತಮಿತವಿಲ್ಲದೆ ಸಾಗುತಿದೆ
ಶತಕದ ನೋವಿನ
ಕಥನವು ಮಿಂಚಿತ
ಪಥದೊಳು ಶ್ರಮಿಕನು ನಿಂತಿಹನು//

ವರುಣನು ತಂದಿಹ
ಹರುಷದ ಧಾರೆಯ
ಕರಿನೆರಳ ಛಾಯೆ ಮುಚ್ಚುತ/
ಬರವನು ತಡೆದಿದೆ
ತರತರದಿ ಧರೆಯು
ಜರತಾರಿ ಹಸಿರಲಿ ಹೊಳೆದಿದೆ// ಅಭಿಜ್ಞಾ ಪಿ ಎಮ್ ಗೌಡ

-


11 APR 2020 AT 19:21

ಅರೇ... ಇವ್ಳಿಗೇನಾಯ್ತು... ಯಾಕ್ ಹಿಂಗಾಡ್ತವ್ಳೆ...ಲವ್ವು .. ಗಿವ್ವು.. ಶುರುವಾಯ್ತ ಇವ್ಳಿಗೆ ದೇವದಾಸ....😬

-


21 SEP 2021 AT 20:58

ಬರುಡಿಳೆಯ ಕಂಡು ಮುಗಿಲು ಕಣ್ತುಂಬಿ ಸುರಿಸಿತು ಮುಂಗಾರು ಮಳೆ💦 ಹಾಡುತ ಮಧುಮಗಳಿಗೆ ಹರುಷದ ಸುವ್ವಾಲೆ....!

ಹನಿಹನಿಯು💦 ತಾಕಿ ಮೈದೊಳೆದ ಇಳೆಯಿಲ್ಲಿ ವೈಯಾರದಿ ಬಳುಕುತ ಹಸಿರೊಲ್ಮೆಗೆ ನಾಚುತ ತೂಗಿದೆ ಉಯ್ಯಾಲೆ...!

ತಂಪೆರೆದ ಹನಿಹನಿಗಳ💦 ಸವಿದನಿಯ ಪ್ರೇಮದ ಘಮಲು, ಕುಡಿಯೊಡೆದ ಒಲವಲ್ಲಿ ಕುಣಿದಾಡಿದೆ ನವ್ವಾಲೆ...!

ಓಡಿದನು ದೂರಕ್ಕೆ ನೇಸರನು ನೀನಿರಲು ರಂಗು ಚೆಲ್ಲುತ್ತಾ ಬಾನಂಗಳದತ್ತ, ನೀಡಲು ಮಧುರ ನೆನಪುಗಳಿಗೆ ಕರೆಯೋಲೆ💦 ...!

-



Vasant A.P Art

-



ಹುಡುಗಿ ನಕ್ಕಾಗ ಮುಗುಳುನಗೆ
ಹುಡುಗ ಅತ್ತಾಗ ಮುಂಗಾರುಮಳೆ...

-



ಹುಡುಗ ಗೆದ್ದಾಗ ಲೈಫ್ ಜೊತೆ ಒಂದ್ ಸೆಲ್ಫಿ
ಹುಡುಗಿ ಸಿಕ್ಕಾಗ ಕೃಷ್ಣನ ಮ್ಯಾರೇಜ್ ಸ್ಟೋರಿ

-


15 SEP 2019 AT 22:42

ಮುಂಗಾರು ಮಳೆಯಲಿ
ಕೊಡೆಯ ಅಡಿಯಲಿ
ನಿಂತಿರುವೆ ಮಧ್ಯದ ಪಥದಲಿ
ಒಂಟಿಯಾಗಿಲ್ಲಿ
ನನ್ನವಳೊಲವ ನೆನೆಯುತ್ತ
ಬಳಿ ಬಂದು ಹೇಳಬಾರದೇ!
ಒಮ್ಮೆ ನಿನ್ನೇ ಪ್ರೀತಿಸುವೆ ಅಂತ..!

-


1 JUN 2024 AT 16:25

ಧಗಧಗಿಸುವ ಧರಣಿಯ ತಂಪಾಗಿಸಲು

ಕೋಲ್ಮಿಂಚು ಹರಿಸಿ
ಸಿಡಿಲ ಅಬ್ಬರವಗೈದು

ಚಿಟಪಟ ಹನಿಗಳುರುಳಿಸಿ
ಭೂರಮೆಯ ತೋಯಿಸಲು

ಸಜ್ಜಾಗುತಿದೆ ಮುಂಗಾರುಮಳೆ

-



**ಹೈಕು**
ಮುಂಗಾರು ಮಳೆ
ತಂದಿದೆ ಪ್ರಣಯದ
ಕಾಮನೆಗಳು.

-


11 FEB 2020 AT 6:29

ಹುಡುಗಿ ಅತ್ತಾಗ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ
ಹುಡುಗ ನಕ್ಕಾಗ ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ 😜

-