QUOTES ON #ಮದುವೆ

#ಮದುವೆ quotes

Trending | Latest
20 OCT 2020 AT 10:59

ಪ್ರೀತಿ ಮಾಡುವುದು ತಪ್ಪಲ್ಲ.....
ಪ್ರೀತಿ ಮಾಡಿ ಮದುವೆಯಾಗುವುದು ತಪ್ಪಲ್ಲ..
ಆದರೆ ಹೆತ್ತವರ ಸಮ್ಮುಖದಲ್ಲಿ, ಕುಟುಂಬದವರ ಜೊತೆಯಲ್ಲಿ ಮದುವೆಯಾಗಬೇಕೆ ಹೊರತು
ಓಡಿ ಹೋಗಿ ಎಂದಿಗೂ ಮದುವೆ ಮಾಡಿಕೊಳ್ಳಬಾರದು
ಏಕೆಂದರೆ... ಹೆತ್ತವರಿಗೂ ಮಕ್ಕಳ ಮದುವೆ ಮಾಡಬೇಕೆಂದು ಜವಾಬ್ದಾರಿ, ಆಸೆ , ಕನಸುಗಳು ಇರುವುದಿಲ್ಲವೇ... ಓಡಿ ಹೋಗಿ ಮದುವೆ ಆದರೆ
ಅವರ ಆಸೆಗಳಿಗೆ ನಾವು ತಣ್ಣೀರು ಎರಚಿದ ಹಾಗೆ ಆಗುತ್ತದೆ

-


19 OCT 2020 AT 12:46

ಮದುವೆಯ ಮೂರುಗಂಟು
ಎಂದೆಂದಿಗೂ ಏಳೇಳು ಜನ್ಮದ ನಂಟು
ಮದುವೆಯು ಒಂದು ಸುಂದರವಾದ ಬಂಧನ💝
ಒಬ್ಬರನೊಬ್ಬರು ಅರಿತರೆ ನಡೆಸಬಹುದು
ಸುಂದರವಾದ ಜೀವನ 😍❤

-


15 SEP 2018 AT 13:06

ಒಂದೇ ಮನಸ್ಸಿರುವ
ಎರಡು ಹೃದಯಗಳು
ಮೂರು ಗಂಟನು ಬೆಸೆದು
ನಾಲ್ಕೂ ಪುರುಷಾರ್ಥದಿ ಭಾಗಿಯಾಗುವೆವೆನುತ
ಪಂಚಾಂಗದ ಶುಭಮುಹೂರ್ತದಿ
ಆರು ಋತುಗಳಲು ಅರಿತು ಬಾಳುವೆವೆನುತ
ಏಳು ಹೆಜ್ಜೆಗಳ ಸಪ್ತಪದಿ ತುಳಿದು
ಅಷ್ಟಲಕ್ಷ್ಮಿಯರ ವರವ ಬೇಡುತ
ನವರಸಗಳಲು ಪಾಲ್ಗೊಳ್ಳುತ
ದಶ ದಶಕಗಳು ಜೊತೆಯಾಗಿ ಬಾಳುವುದು.

-


29 JUN 2020 AT 20:18

ಖರ್ಚು ಕಮ್ಮಿ ಕೆಲವೇ ಜನರ ಸಮೂಹದಲ್ಲಿ
ಯಾವ ಅಡ್ಡಿಯಿಲ್ಲದೆ ಸುದೀರ್ಘವಾಗಿ ನಡೆಯುತ್ತದೆ.,


ನವ ದಂಪತಿಗಳ ಜೀವನ ಸದಾ ಕಾಲ ಹಸನ್ಮುಖಿಯಾಗಿರಲಿ.,

-


4 DEC 2019 AT 12:26

ನಾನು..ಮತ್ತು ನಾನೊಬ್ಬಳೇ ಆ...ರಾಮ





ನಾನು.. ಗಂಡ...ಮಕ್ಕಳು ಹೇ...ರಾಮ..ರಾಮ!

-


27 APR 2021 AT 17:22

ಮದುವೆ
(ಮನಸು ಮನಸಿನ ಮಿಲನ)
ಹೊರತು
(ಸಿರಿತನದಿಂದ ಕೂಡಿದ ಬಂಧನವಲ್ಲ)

-ಮನ

-


9 MAY 2020 AT 6:07

ಮದುವೆಯ ಮೇಲೆ ಸಾಸಿರ ಕನಸುಗಳ
ಕಟ್ಟಿಕೊಂಡಿದ್ದವಳ ಜೀವನ,
ಮನೋರೋಗಿಗಳ ಆಸ್ಪತ್ರೆಯಲ್ಲಿ ಅಂತ್ಯವಾಗಿತ್ತು.
ವಿಧಿಯು ಮೆರೆದ ಕ್ರೂರತೆಗೆ ಮುಗ್ಧ ಹೂವೊಂದು ಬಲಿಯಾಗಿ, ಪೂರ್ತಿಯಾಗಿ ಅರಳುವ ಮುನ್ನವೇ ಬಾಡಿ ಹೋಗಿತ್ತು...

-


23 SEP 2021 AT 21:58

😘....ಮೆಚ್ಚಿಹೆನು ನಿನ್ನ ಗುಣವು
💕....ಗೆದ್ದಿಹೆ ನನ್ನ ಮನವು
💪....ನೀನೆಂದು ನನ್ನ ಬಲವು
💗....ಮನದಲ್ಲಿ ನಿನ್ನದೆ ಒಲವು
😍....ನೀಡಿಹೆ ಪ್ರೀತಿಗೆ ವರವು
😜....ನಾನಾಗಲೇ ನಿನಗೆ ವಧುವು🤔?😜

🙈....ಕದ್ದಿರುವೆ ನನ್ನ ಗಮನ
👀....ಸೆಳೆಯುತ್ತಿದೆ ನಿನ್ನ ನಯನ
🤩....ಹೃದಯ ಬಯಸಿದೆ ನಿನ್ನಾಗಮನ
🤭....ನಾ ಸಿಕ್ಕಿ ನಿನ್ನ ಜನ್ಮವಾಗಿದೆ ಪಾವನ
🙏....ತಿಳಿಸು ನಿನ್ನ ತಂದೆ ತಾಯಿಗೆ ನನ್ನ ನಮನ
😜....ನಮ್ಮಪ್ಪನ ಅಳಿಯನಾಗಿ ಸೇರುವೆಯ ನೀ ನನ್ನ ಜೀವನ....🤔?😜

-



ಕೈ ಹಿಡಿದವಳಿಂದ ಸಂತಾನವಾಗಲಿಲ್ಲವೆಂದು ಮತ್ತೊಂದು ಕೈ ಹುಡುಕುವವರ ನಡುವೆ
ತನ್ನವನಿಂದ ಮಕ್ಕಳಾಗದಿದ್ದರೂ
ತನ್ನವನನ್ನೇ ಮಗುವೆಂದುಕೊಂಡ
ತಾಯಂದಿರು ಪ್ರಾತಃಸ್ಮರಣೀಯರು..

-


24 JUL 2021 AT 11:50


ಜಾತಿ ಜಾತಕದ ಮದುವೆೆ
ಜೋಡಿಗಳು ಜೊತೆಗೂಡದ ಕಾರಣ
ಜ್ಯೋತಿಯ ಬೆಳಗುವ ಬದಲು
ಜ್ವಾಲೆಯಾಗಿ ಉರಿದಿತ್ತು ನೋಡಾ..!

-