Rajeshwari Karthik   (ರಾಜಿಕಾ)
233 Followers · 54 Following

Joined 7 June 2018


Joined 7 June 2018
27 JAN 2022 AT 12:43

that the form of seed u plant today
will reflect in it's kind another day
So be sure about the way u nurture
No doubt that it will be your future

-


24 JAN 2022 AT 19:04

ಪೋಷಿಸುವ ಮುನ್ನ ವಿಷ ಬೀಜಕ್ಕೆ ನೀರೆರೆದು
ತಿಳಿಯುವುದು ಚೆನ್ನ, ವಿಷ ಮರವದಾಗುವುದೆಂದು!
ಪ್ರತಿಷ್ಠೆಯ ಬೆನ್ನಟ್ಟಿ, ವಿಷದೆಡೆಗೆ ಸಾಗುತಿಹ ಹೆಜ್ಜೆ
ನಿತ್ಯಸತ್ಯದ ಸಾರಾಮೃತವ ಕೆಡಹುವ ಸಜ್ಜೇ!
ಆಧುನಿಕತೆ ಬೇಕು,ನಮ್ಮತನವ ಬಿಡುವಷ್ಟಲ್ಲ
ಇರಲಿ ಪಠ್ಯೇತರ ನೈತಿಕತೆಯ ಪಾಠವೆಂಬ ಬೆಲ್ಲ
ನಾವಾಗಿ ಬೀಳುತ್ತ ,ಆಗಿ ಮತ್ತೊಬ್ಬ ಗುಂಪಲ್ಲಿ
ನ್ಯಾಯಕ್ಕಾಗಿ ಹೋರಾಟ,ಮಾತ್ರ ಸಾಕೇ ಇಲ್ಲಿ?

-


24 JAN 2022 AT 15:38

ಸಹನೆ ಭಕ್ತಿಭಾವದಾ ಲಕ್ಷ್ಮಿಯೂ ಇವಳು
ರುದ್ರತಾಂಡವ ಅರಿತ ಕಾಳಿಯೂ ಇವಳು
ಮನಕೆ ಬಲು ತಂಪು ಒಲಿದಿರಲು ಅವಳು
ಮನೆಗೆ ಕಳೆ ತರುವ ಜಾಜಿ ಮಲ್ಲಿಗೆಯಿವಳು
ಅಕ್ಕರೆಲಿ ನುಡಿವವಳು ಹುರಿದಂತೆ ಅರಳು
ಸಕ್ಕರೆಗೂ ಮಿಗಿಲಾದ ಸಿಹಿಪ್ರೀತಿ ತಿರುಳು
ನಕ್ಕು ನಲಿವಾ ಚೂಟಿ ಮುದ್ದುಗಿಣಿಯಿವಳು
ನೋವ ನುಂಗುವ ರೀತಿ ಯಾರಿಂದ ಕಲಿತಳು?
ಹುಟ್ಟಿ ಬೆಳೆದಿಹ ಮನೆಯ ಖುಷಿಯ ಬೆಳಕಿವಳು
ಹೆಣ್ಣೆಂದು ಜರಿದವಗೆ ನೆರಳ ಸೆಲೆಯೇ ಇವಳು
ಸೇರಿರುವ ಮನೆ ಮನವ ಬೆಳಗುವವಳು
ಸಂಸಾರ -ವೃತ್ತಿಪರ ಸರಿದೂಗೋ ಬೆರಳು




-


23 JAN 2022 AT 10:17

ಭಾರತ ಕಂಡ ವೀರ ನೇತಾರರಲ್ಲೊಬ್ಬರು
ಸದುದ್ದೇಶಕ್ಕಾಗಿ ಹರಿಸಿಹರು ನೆತ್ತರು
ಸತ್ವಭರಿತ ನಾಯಕ,ತತ್ವಶಾಸ್ತ್ರ ಪರಿಣತರು
ಗುಂಡಿಕ್ಕುವಲ್ಲೂ ಮನವ ಗುಂಡುಕಲ್ಲಾಗಿಸಿ
ಛಲಕೆ ಬಲ ಬೆರೆಸಿಹ ಗಂಡೆದೆಯವರು
ಮಂಕು ಬಡಿದಿಹ ಮಂದ ಬುದ್ಧಿಗೆ
ತೀವ್ರತೆಯ ತಾಕತ್ತು ಪರಿಚಯಿಸಿದವರು
ಧೈರ್ಯಕ್ಕೆ ಹೆಸರು,ಭಾರತವೇ ಉಸಿರು
ಭಾರತೀಯರ ಮನದಿ ನೀವಿನ್ನೂ ಹಸಿರು!

-


21 JAN 2022 AT 17:55

ಬದುಕಲು ಬಿಡಿ ಅವರವರ ನೈಜತೆಯ
ಹೊಸಕದಿರಿ ನವ ನವೀನ ಭಾವನೆಯ
ಚುಚ್ಚದಿರಿ ಕಡ್ಡಾಯವೆಂಬ ಚೂಪು ಮೊನೆಯ
ಹೇರದಿರಿ ಹಿಡಿಸದ ಯಾವುದೇ ವಿಷಯ
ಬಲವಂತದ ಓದು ಆಯ್ಕೆಯದಾದೀತೇ?

-


1 SEP 2021 AT 9:55

our sufferings
in perpetuity!
If we surrender
ourselves with
complete reliability!

-


16 JAN 2022 AT 8:14

ಅಂದುಕೊಂಡಿದ್ದು ನಡೆಯಲೇಬೇಕೆಂಬ ಸತತ ಅಪೇಕ್ಷೆ
ಲೋಕಕ್ಷೇಮಕ್ಕದು ಬೀಜವಾಗಿದ್ದಲ್ಲಿ ದೇವರೇ ಅಲ್ಲಿ ಶ್ರೀರಕ್ಷೆ

-


15 JAN 2022 AT 9:41

ಎಳ್ಳು ಬೆಲ್ಲ ತಿಂದು ಒಳ್ಳೆ ಮಾತನ್ನಾಡೋಣ
ಎಳೆ ಬಿಸಿಲಿಗೆ ಮೈಯೊಡ್ಡಿ
ಎಲುಬಿನ ಆರೋಗ್ಯ ಕಾಪಾಡೋಣ
ನೇಸರನ ಗತಿ ಬದಲುವ ಸಂಕ್ರಮಣ
ಆರಂಭ ಈಗ ಉತ್ತರಾಯಣ
ಇರಲಿ ಉತ್ತರೋತ್ತರ ಖುಷಿ ಪಯಣ
ಸೂರ್ಯದೇವಂಗೆನ್ನ ಪುಟ್ಟ ನಮನ

-


15 JAN 2022 AT 9:05

Balance
Holding our emotions under control
Working equally for society
As well as for our own Family
Yes,it's all like a balance
Work is worship
Family is happily sailing ship
Respect to those who hope
to see Loving God in both the ship


-


6 JAN 2022 AT 12:59

ಹುಸಿಮುನಿಸು ಸಂಜೆಗತ್ತಲಂತೆ
ಪ್ರೀತಿ ಅಲೆಗಳ ತೀವ್ರತೆಯ
ಮತ್ತಷ್ಟು ಹೆಚ್ಚಿಸುವುದು
ನಿನ್ನೆಡೆಗೆ ನನ್ನೊಲವ ಗೀತೆಯ
ಇನ್ನಷ್ಟು ನುಡಿಸುವುದಕೆ
ಸೂತ್ರಧಾರಿ ನೀ ಹುಸಿಮುನಿಸೇ!

-


Fetching Rajeshwari Karthik Quotes