ಪ್ರೀತಿಯ ಅರಮನೆಯಲಿ
ಒಲವಿನ ಜೋಕಾಲಿಯಲಿ
ನಿನ್ನಯ ಮಡಿಲಲಿ ಮಲಗಿ
ದಿನ ಕಳೆಯುತಿಹೆನು ನಾನಿಲ್ಲಿ!-
ನನ್ನಮ್ಮನ ಮಡಿಲೆಂಬ ತೊಟ್ಟಿಲು
ಮುಗಿಲುಗಿಂತಲೂ ಮಿಗಿಲು
ಒಲುಮೆಯ ಒಡಲು
ಪ್ರೀತಿಯ ಕಡಲು
ಮಡಿಲೆಂಬ ಮಧುರ ದನಿಯ ಒಡಲು!!
ನನ್ನಾಸೆಗಳ ಒಲುಮೆಯ ಒರತೆ
ಅವಳು ನನಗೆ ಸಿಕ್ಕಿರುವುದೇ ಸೌಭಾಗ್ಯತೆ
ಇವಳೇ ನನ್ನೊಲುಮೆಯ ದೇವತೆ
ಸತ್ಯವೆಂಬ ಆತ್ಮ ಸಾಕ್ಷಾತ್ಕಾರದ ಸೌಜನ್ಯತೆ!!
ನನ್ನಮ್ಮಳ ಮಡಿಲೊಳು ಮಗುವಾಸೆ
ನನ್ನೆಲ್ಲಾ ನೋವುಗಳ ಮರೆಯುವಾಸೆ
ನನ್ನೆಲ್ಲಾ ಭಾವಗಳ ಸ್ಮರಿಸುವಾಸೆ
ಮಡಿಲೆಂಬ ತೊಟ್ಟಿಲಲಿ ಸುಖ ನಿದ್ರೆ ಮಾಡುವಾಸೆ
ಸ್ವರ್ಗವೆಂಬ ಮಡಿಲೊಳು ನೆಮ್ಮದಿಯ ಕಾಣುವಾಸೆ!!!-
ಅದಾವ ಹೊದಿಕೆಯೂ ಬೆಚ್ಚಗಾಗುತ್ತಿಲ್ಲಮ್ಮಾ ಈ ಚಳಿಯಲಿ,
ಒಂದೊಮ್ಮೆ ಸೆರಗ ಹೊದ್ದಿಸಿ ಮಲಗಿಸುವೆಯಾ ನಿನ್ನ ಮಡಿಲಲಿ.-
ನಿನ್ನೆದೆಯ ಏರಿಳಿತ ಅಳೆಯುವ
ಮಾನದಂಡವಿದೆ ನನ್ನಲ್ಲಿ
ಬಿಸಿಯನ್ನು ಬಿಸಿಯಿಂದಲೆ
ತಣ್ಣಗಾಗಿಸುವ ಕಲೆಯಿದೆ ನನ್ನಲ್ಲಿ-
ನೀ ಸುಟ್ಟು ಹೋದ ಪ್ರೀತಿಯ ತಾಪ
ಸುಡುತಿರಲು ಒಡಲು
ಸಂತೈಸಲು ಬೇಕಾಯಿತು
ಮತ್ತೇ ತಾಯಿಯ ಮಡಿಲು-
ಕೆಲವು ಬಂಧಗಳಂತೆಯೇ ಈ ಹೊತ್ತಿಗೆಗಳು !
ಆಂತರ್ಯಕ್ಕೆ ಕೈ ಹಾಕಿ ಕಲಕಿಬಿಡುತ್ತವೆ,
ತಮ್ಮದೇ ಗುಂಗಿನಲ್ಲಿ ತೇಲಿಸಿಬಿಡುತ್ತವೆ,
ಬೆನ್ನುಸವರಿ ಸಂತೈಸುತ್ತವೆ, ಮಡಿಲಿಗೊರಗಿಸಿಕೊಂಡು ಮಲಗಿಸಿಬಿಡುತ್ತವೆ, ಅತ್ಯಾಪ್ತವಾಗಿಬಿಡುತ್ತವೆ,
ಬದುಕಿಗೊಂದು ಕೈಲಿಡಿದ ಕಂದೀಲಾಗಿಬಿಡುತ್ತವೆ...-
ಕಾಯುತ್ತಲೇ ಕುಳಿತಿದ್ದೆ
ಒಲವ ಮೂಟೆಗಳ ರಾಶಿ ಹಾಕಿ.,
ಕೊಳ್ಳುವವರು ಬರಲೇ ಇಲ್ಲ..!!
ರೆಕ್ಕೆಯದು ಬಲಿತಿತ್ತು.,
ಹಕ್ಕಿಯದು ಹಾರಿತ್ತು..
ಬಂಜೆ ತಾಯಿಯ ಮಡಿಲೂ
ಬರಿದಾಯಿತಲ್ಲ..!!-
ಮಲಗಿಬಿಡು ಸಖ ಮಡಿಲಲಿ
ಲಾಲಿ ಹಾಡಿ ಲಾಲಿಸುವೆ
ಮಡಿಲ ಮಗುವಾಗಿಸುವೆ
ಮುಂದಿನೇಳು ಜನುಮದಲ್ಲಿ
ನಿನ್ನ ತಾಯಿಯಾಗಿ ಕಾಯುವೆ
-
ಅವಳು..
ಎಲ್ಲವನ್ನೂ ತಿರಸ್ಕರಿಸಿ ನಿಂತವಳು, ನಂಬಿಕೆಯ ಮಡಿಲಿಗಾಗಿ ಹವಣಿಸುತಿರುವಳು..-
ದೇಹಕ್ಕೆ ದಣಿವಾವರಿಸಿದಾಗ
ಕಾಲರಾತ್ರಿಯಾಗಿ ನೀ ಬಾ,
ಕಾಲನೆದುರು ಕೈಚಾಚಿ ನಿಂತಾಗ
ಮೋಕ್ಷಧಾತ್ರಿಯಾಗಿ ನೀ ಬಾ,
ಕಾಲು ಸೋತು ಮುಗ್ಗರಿಸಿದಾಗ
ಸಿದ್ಧಿಧಾತ್ರಿಯಾಗಿ ನೀ ಬಾ,
ಮುಕ್ತಿಯ ಪಾತ್ರೆಯಾಗಿ ಬಾ,
ಮಡಿಲಿಗೊರಗಿಸಿಕೊಳ್ಳುವ
ಧರಿತ್ರಿಯಾಗಿ ಬಾ...-