ಶಿವಾಂಶು..❣   (ಶಿವಾಂಶು..❣)
263 Followers · 96 Following

read more
Joined 12 February 2019


read more
Joined 12 February 2019
8 SEP 2022 AT 21:00

ನೀ ಹೊರಟು ನಿಂತ ಮೇಲೂ,
ನಾನು ಪ್ರೇಮಿಯಾಗಿಯೇ ಇರುವೆನೆಂದರೆ..!
ಅದೇ ಪ್ರೇಮವಾ..?

-


9 AUG 2022 AT 21:38

ಬೊಗಸೆಗಂಗಳ ಅವಳ ಕಣ್ಣ
ಹೊಳಪನ್ನೇ ಇರಬೇಕು.,
ಲೋಕ, ಬೆಳದಿಂಗಳೆಂದು ಕರೆದದ್ದು!!
#ಅವಳ_ಕಣ್ಣು

-


2 AUG 2022 AT 19:50

ಅದೆ ಚುಕ್ಕಿ ಅದೆ ಬಾನು,
ಅದೆ ಮೋಡ ಅದೆ ಗಾಳಿ.,
ಅದೆ ದಾರಿ ತುಂಬೆಲ್ಲ ಮುಗಿಯದಾ ಮೌನ..!
ಅದೆ ಕಡಲು ಅದೆ ಸೊಬಗು,
ಅದೆ ಸಂಜೆ ಅದೆ ತೀರ.,
ಅದೆ ತೆರೆಯ ತುಂಬೆಲ್ಲ ನೆನಪಿನಾ ಧ್ಯಾನ..!!

-


7 APR 2022 AT 20:24

ಹುಣ್ಣಿಮೆಯ ಚಂದ್ರನಂತಹ ಆಕೆಯದೋ
ದಿನದಿನವು ಎದೆ ತುಂಬುವ ಹುನ್ನಾರ.!
ನಾನೊ., ಅಮಾವಾಸ್ಯೆಯ ತೊಗಲ ಹೊದ್ದ ಫಕೀರ.!!

-


5 APR 2022 AT 21:04

ಮುಂಬರುವ ಸಾಲುಗಳನ್ನೆಲ್ಲಾ
ಪರಾಮರ್ಶೆಗಿಡಬೇಡಿ.!
ಮಾತು ಕೊಟ್ಟಿದ್ದೇನೆ ಅವಳಿಗೆ,
ಬರೆದು ನೋಯಿಸಲಾರೆ ಎಂದು.!!

-


2 APR 2022 AT 20:30

ಥತ್....
ಈ ಇರುಳ ಸಮಾಧಿಗೆ ಕಪ್ಪು ಬಳಿದವರು ಯಾರು??
ಹೆಜ್ಜೆ ಹಿಂಬಾಲಿಸಿ ಹೊರಟವನಿಗೆ ಕಂಡದ್ದು
ನನ್ನವರದೇ ನೆರಳು.!!

-


26 FEB 2022 AT 20:59

ಅದೆಲ್ಲಿ ಭೂಮಿ..
ಅದೆಲ್ಲಿ ಭಾನು..
ಅದ್ಯಾವ ಏಣಿ..?
ಆ ಬೆಳ್ಳಿ ತಾರೆ ಸನಿಹ ಮುಟ್ಟಲು..!
ಅದೆಲ್ಲಿ ಚುಕ್ಕಿ..
ಅದೆಲ್ಲಿ ಚಂದ್ರ..
ಅದ್ಯಾವ ದಾರಿ..?
ಆ ದೃಷ್ಟಿ ಹರಿಸಿದಷ್ಟು ದೂರ ಕತ್ತಲು..!!

-


18 APR 2021 AT 18:30

ಕಡಲ ದಡದಿ, ಎದೆಯ ಕೊಳದಿ,
ಒಲವು ಸುರಿದ ಹುಡುಗಿಗೆ..!!❣
(Read Captain...)

-


6 APR 2021 AT 18:49

ಅಲ್ಲೊಬ್ಬ, ಪ್ರೀತಿ ಸಿಗಲಿಲ್ಲವೆಂದು
ಕುಡುಕನಾಗಿ ಬಿಟ್ಟನಂತೆ..!
ಇರಬಹುದು ಅನ್ನಿಸಿತ್ತು ಆಗ..
ನಿನ್ನ ಗೈರುಹಾಜರಿಯ ಪ್ರತಿ ಕ್ಷಣವ
ಆಸ್ವಾದಿಸಿದಾಗಲೇ ನೋಡು, ಸತ್ಯ ತಿಳಿದಿದ್ದು..!
ನಿಜವಾಗಿ ಪ್ರೀತಿಸುವವ ಪ್ರೇಮಿಯಷ್ಟೇ ಆಗಬಲ್ಲ...!!

-


8 MAR 2021 AT 15:39

ಮಡಿಲಾಗುವ ತಾಯಾಗಿ
ಹೆಗಲಾಗುವ ಸ್ನೇಹಿತೆಯಾಗಿ
ನಗುವಾಗುವ ಸೋದರಿಯಾಗಿ
ಮಗುವಾಗುವ ಸಂಗಾತಿಯಾಗಿ
ತಿದ್ದುವ ಶಿಕ್ಷಕಿಯಾಗಿ
ಮುದ್ದು ಮಗಳಾಗಿ..

ಬದುಕಿನನುಕ್ಷಣವೂ ಜೊತೆಯಾಗುವ
ಓ ಹೆಣ್ಣೇ... ನಿನಗೆ ಕೋಟಿ ನಮನ...❣❣❣

-


Fetching ಶಿವಾಂಶು..❣ Quotes