ನಾಳೆಯ ಒಳ್ಳೆಯ ದಿನಗಳನ್ನು
ನೋಡಬೇಕೆಂದರೆ.
ಇಂದಿನ ಈ ಬೇಜಾರಿನ ಕ್ಷಣ(ದಿನ)ವನ್ನು
ಮರೆಯಬೇಕು....-
ಇಷ್ಟವಾದ ವಿಷಯದತ್ತ ಗಮನ
ನಿತ್ಯವೂ ತಪ್ಪದೇ ಇರಲಿ ಧ್ಯಾನ
ವಿಷಯ ನೆನೆದು ಕೊರಗಬಾರದು
ನಮಗಿಂತ ಹೆಚ್ಚು ಬೇಸರದವರಲ್ಲಿದ್ದವರನ್ನು ನೋಡಿ ಸಂತೈಸಿಕೊಳ್ಳಬೇಕು.-
೧) ಯಾವ ಕಾರಣಕ್ಕೆ ಬೇಸರವಾಯ್ತೋ ಅದನ್ನು ನೆನೆದು
ಮನಸ್ಪೂರ್ತಿ ಅತ್ತುಬಿಡ್ತೀನಿ,
೨)ಅಮ್ಮನಿಗೆ ಕರೆ ಮಾಡಿ ಮಾತನಾಡ್ತೀನಿ,
೩)ಅತಿಹೆಚ್ಚು ಭಾವಗೀತೆಗಳನ್ನು ಕೇಳ್ತೀನಿ,
೪) ಮಕ್ಕಳೊಡನೆ ಸಮಯ ಕಳೀತೀನಿ,
೫) ಪುಸ್ತಕಗಳನ್ನು ಓದುತ್ತೀನಿ,
೬) ನಿರಂತರವಾಗಿ ಕೆಲಸದಲ್ಲಿ ಮಗ್ನಳಾಗ್ಬಿಡ್ತೀನಿ.
-
ಸಣ್ಣ ಸಲುಗೆ ಜೇಬಲ್ಲಿ ಮಡಚಿ ಇಟ್ಟಿರುವೆ,
ಮುಂಗಡವಾಗಿ ಮುನ್ನುಡಿ ಬರೆದಿರುವೆ,
ಗಮನಿಸಿ ಉಳಿದ ಆಸೆಗಳ ಸಂಕಲನವಿದೆ,
ಹೆಸರು ಮೊದಲೇ ಅಂಗೈಯಲಿ ಅಚ್ಚಿದೆ,
ತಲುಪಿಸದೆ ಬಾಕಿಯಿರುವ ಕಣ್ಸನ್ನೆಗಳಿಗೆ;
ಹಲವು ಬಗೆಯ ಬೇಜಾರು ನೀನಿಲ್ಲದೆ!
ಬಿಸಿ ಉಸಿರ ತರಂಗಗಳ ಸಂಗಡವಿರುವೆ,
ಕೆಲವು ಆರಂಭಿಕ ಚಾಳಿಗಳ ಬಿಟ್ಟಿರುವೆ,
ಭಾವನೆಗಳ ಗುಣಾಕಾರ ಅತಿರೇಕವಾಗಿದೆ,
ಸುಮ್ಮನೆ ಹೃದಯಕ್ಕೆ ಒಲವು ಧಾವಿಸಿದೆ,
ಸ್ವಚ್ಛ ಕಂಪಿರದಿರೆ ಕೆಂಪೇರದ ಕದಪುಗಳಿಗೆ;
ಹಲವು ಬಗೆಯ ಬೇಜಾರು ನೀನಿಲ್ಲದೆ!-
ಕಾರಣವಿರದೆ ಕಾಡುವ ಬೇಜಾರು,
ಹೇಳದೆ ಕೇಳದೆ ಆಗುವ ಖುಷಿ...
ಹೀಗೆಲ್ಲ ಆಗೋ ರೋಗ ನಂಗೆ
ಮಾತ್ರನ ಇರೋದು ಅಥವಾ
ಬೇರೆಯವರಿಗು ಹಿಂಗೆ ಆಗುತ್ತಾ🤔...?-
ಕೋಪಗೊಳ್ಳದ ಮನ
ಕಣ್ಣಲ್ಲಿ ಕಣ್ಣೀರಿನ ತನನ,
ಬೇಸರದಲ್ಲಿ ಬಾಡಿ
ಮೊಗದಲ್ಲಿ ತೋರಿಸುವುದು
ನಗುವಿನ ಮೋಡಿ,,
-
ಅಳುದಾದರೆ ಅತ್ತು ಬಿಡು
ಮನದಲ್ಲಿ ನೋವುಗಳ ಬಚ್ಚಿಡಬೇಡ
ಮನಸ್ಸು ಆಕಾಶದಂತೆ
ಕರಿಮೋಡ ಭಾರವಾದ ನೋವುಗಳಂತೆ
ಆಕಾಶವ ಕರಿಮೋಡ ಬಳಸಿದರೆ
ಆಕಾಶವೂ ಅಳುವುದು ಮಳೆಯ ಸುರಿಸಿ
ಮನಸ್ಸು ಆಕಾಶದಂತೆ
ತಿಳಿಯಾಗಿಡು ಮನದ ಭಾರವ ...-
ನಮಗೆ ಪರಿಚಯ ಆದವರು ಹೇಗೆ ಅಂದ್ರೆ
ತನ್ನ ಸ್ವಾರ್ಥಕ್ಕಾಗಿ ನಮ್ಮನ್ನು ಬಳಸ್ಕೊತಾರೆ
ವಿನಹ ಕಷ್ಟ ಸುಖ ಹಂಚಕೊಳ್ಳುಕ್ಕೆ ಅಲ್ಲಾ ...-
ಕೆಲ್ಹೊಮ್ಮೆ ಅನ್ಸುತ್ತೇ ನಾನು ಎಷ್ಟು ಅದೃಷ್ಟವಂತೆ ಅಲ್ವ ಅಂತ,
ಇನ್ನೂ ಕೆಲ್ಹೊಮ್ಮೆ ಅನ್ಸುತ್ತೇ ನಾನು ಎಷ್ಟು ದುರಾದೃಷ್ಟವಂತೆ ಅಂತ.😒😒😔-