ಸತ್ಯದ
ಹಂಬಲವನು
ನೋಡಿ,,,,
ಅದು
ನಿತ್ಯವೂ
ಮಿಥ್ಯದ
ಶೋಧನೆಯಲ್ಲಿದೆ.....-
ಭರತ ಪುಣ್ಯ ಭೂಮಿಯಲ್ಲಿ ,
ಕರುಣೆಯ ಕರುನಾಡಿನಲ್ಲಿ,
ಅಪ್... read more
ಲೇಖನಿಯ ಹಿಡಿಯಲಾರೆ ನೀನು ಮೆಚ್ಚಲೆಂದು
ಆದರೂ ಬರೆಯುವೆನು ವಿರಹದ ಕವಿತೆಯನು,
ಬಾಳ ಸಂಪುಟದಲಿ ವಿರಹಗೀತೆಯ ಸಾಲು
ರೂಪುಗೊಂಡಿದೆ ನಲ್ಲ ನಿನಗಾಗಿಯೇ ಕೇಳು,,,
ನಾ ಬರೆದ ಗೀತೆಯ ಪ್ರತಿ ಸಾಲಿನಲ್ಲೂ ನೀ ನೀಡಿದ
ಪ್ರೇಮದ ಆಶ್ವಾಸನೆಯೇ ತುಂಬಿಹುದು ನೋಡು,,,
ಭಾವನೆಗಳ ನೆನಪಿನಾಳದಲ್ಲಿ ನಿನ್ನದೇ ಹಚ್ಚಹಸಿರು
ಎದೆ ಮಿಡಿತ ತುಂಬಿಹುದು ಮನದಾಳದಲ್ಲಿ,,,,,,
ಭಾವನಾಹೀನಳಲ್ಲಿ ನೀನೇ ತುಂಬಿದೆ ಸುಮಧುರಭಾವ
ಪ್ರೇಮದ ಎಳೆಯಾಗಿ ನೀನೇ ಮೀಟಿದೆ ಎದೆಯ ವೀಣೆಯನು,,,
ಮುಸ್ಸಂಜೆಯಲಿ ನಮ್ಮೊಲವಿನ ಮಾತಿಗೆ ಬನದ ಹೂಗಳು ಬಿರಿದು
ಕಂಪನು ಸೂಸುತಿದ್ದ ಗಳಿಗೆಯ ನೆನೆದು ನೋಡು,,,
ನಿನಗಾಗಿಯೇ ಕೇಳು ನಲ್ಲಾ
ಆದರೂ ಬರೆಯುವೆನು ವಿರಹ ಗೀತೆಯನು,,,,
ಕುಂಟು ನೆಪ ಹೇಳಿ ನೀ ದೂರ ಸರಿದುದ,,,, ನೆನೆದು ನೋಡು
-ಪ್ರಭಾ ಮೈಸೂರು
-
ಅಧಿಕಾರದಿಂದ
ನೆಲವನ್ನು ಕೊಂಡುಕೊಳ್ಳಬಹುದಷ್ಟೇ,
ಜ್ಞಾನವನ್ನು ಕಸಿದುಕೊಳ್ಳಲಾಗದು,,,,,-
ಅವಳು
ಮೌನವಾದವಳನ್ನು ಎಲ್ಲರೂ ದೂರುತಿರುವರು,,,,
ಮಾಲಿಯಂತೆ ಅಂದಗೊಳಿಸಿದ ತೋಟದಲ್ಲರಳಿದ ಹೂಗಳು,ಹಸಿರ ನಡುವೆ ಸ್ವಚ್ಛಂದವಾಗಾರಾಡುತ್ತಿರುವ ಬಣ್ಣ ಬಣ್ಣದ ಚಿಟ್ಟೆಗಳು,
ಎಲ್ಲವನ್ನು ಗ್ರಹಿಸುತ್ತಾ ಕುಳಿತಾ ಅವಳೀಗ ಮೌನಿ,,,,
ಇಷ್ಟು ಮೌನವನ್ನಾಳಲು ಅವಳು ಅದೆಷ್ಟು ಕಂಬನಿಯ ಕಡಲಲ್ಲಿ ಮೀಯ್ದು,ನೋವಿನಾಳವನ್ನೊಕ್ಕಿರಬೇಕು
-
ಅವಳಿಗೆ ಸಂಸಾರದ ಕಣ್ಣಾಗುವುದಷ್ಟೇ ಅಲ್ಲಾ
ಜಗಕೆ ಜ್ಞಾನದರಿವಿನ ಹಣತೆಯಾಗುವುದಕ್ಕೂ ಗೊತ್ತು
-
ಆತ್ಮೀಯ ಪುಸ್ತಕಗಳೇ,,,
ಸನಿಹವಾಗಿಲ್ಲ ಯಾರು ನಿಮ್ಮಂತೆ ನನಗೆ,
ಹೇಗೆ ಬೆಸೆಯಿತೋ ನಾನರಿಯೇ ನಮ್ಮ ಅನುಬಂಧ
ಮಾತಿನಲ್ಲಿ ಬಣ್ಣಿಸಲಾಗದ,
ನನ್ನೇಕಾಂತದ ಸಂಗಾತಿ ನೀವು
ತನು ಮನದ ಹಸಿವಿಗೆ
ಜ್ಞಾನವನ್ನುಣಬಡಿಸಿ
ನನ್ನಿರುವಿಕೆಗೊಂದು ಗುರುತು ಕೊಟ್ಟ
ಪ್ರೀತಿಯ ಪುಸ್ತಕಗಳೇ,,,
ನಿಮ್ಮನ್ನು ಕಾಯಿಸಿದ್ದಕ್ಕೆ,
ಕಾಯಿಸುತ್ತಿರುವುದಕ್ಕೆ,
ಕ್ಷಮೆಯಾಚಿಸುವೆ🙏🙏
-
ನೋವಿನ ಕತ್ತಲಿನಲ್ಲಿರುವವರ ನೋಡಲಾಗದೆಂದು
ಸಾಂತ್ವನದ ಬೆಳಕನ್ನಷ್ಷೇ ಉಣಬಡಿಸಿದೆ;
ನೋವ ನೀಗಿಸಿಕೊಂಡವರಿಗೆ ನನಗೂ ಸಾಂತ್ವಾನದ
ಬೆಳಕಿನ ಹಸಿವಿತ್ತೆಂದು ಇಂದಿಗೂ ಅರಿವಾಗಲೇ ಇಲ್ಲಾ,,,,-
*ಭಾವನೆಗಳು*
ಪ್ರೀತಿಯೂ ಒಂದು ಭಾವನೆ, ಅನುಬಂಧವೂ ಒಂದು ಭಾವನೆ
ಪ್ರೀತಿಯೇ ದ್ವೇಷಕ್ಕೆ ಕಾರಣವಂತೆ, ಅನುಬಂಧವೂ ಒಂದು ಕೊಂಡಿಯಂತೆ,
ಎಲ್ಲಾ ತೆೊರೆದೆಡೆ ಸಂತಳಾಗಬಹುದಂತೆ. ಆದರೇ,
ಇದರಲ್ಲಿ ನಾ ಅಜ್ಞಾನಿ.
ನನಗಿರಲಿ ಎಲ್ಲಾ ಭಾವನೆಗಳು
ಸ್ವಾರ್ಥವಿರಲಿ ಇನ್ನೊಬ್ಬರ ತಾಳ್ಮೆ ಕೆಡಿಸದಷ್ಟು
ತಿಳಿ ಮನವ ಕಲಕದಷ್ಟು,,,,
ಸಮಾಜವ ತಿದ್ದ ಬಯಸುತ್ತಿಲ್ಲಾ
ನಾನೇನು ಸಂತಳಾಗಬಯಸುತ್ತಿಲ್ಲಾ
ಪ್ರೀತಿ ಇರಲಿ ನನಗೆ ಮುದ ನೀಡುವಷ್ಟು
ಆದರೇ ಮತ್ತೊಬ್ಬರ ಮನವ ಹಾನಿಗೊಳಿಸದಷ್ಟು,,
ತಿಳಿಯಾದ ಭಾವವಿರಲಿ ಆಗಸದಷ್ಟು
ಮುದದಿಂದ ಬಾಳುವಷ್ಟು
ಮತ್ತೊಬ್ಬರ ಮನವ ಓಲೈಸದಷ್ಟು,
ನೋವುಂಟು ಮಾಡದಷ್ಟು,,,,
-ಪ್ರಭಾ ಮೈಸೂರು
-